ಜಾರ್ಖಾಂಡ್: ಅಕ್ರಮ ಗಣಿಗಾರಿಕೆ, ಶೆಲ್ ಕಂಪನಿಗಳ 18 ಪ್ರದೇಶಗಳ ಮೇಲೆ ಇಡಿ ದಾಳಿ
ಜಾರಿ ನಿರ್ದೇಶನಾಲಯ (ಇಡಿ) ಶುಕ್ರವಾರ ಜಾರ್ಖಂಡ್‌ನ ಅಕ್ರಮ ಗಣಿಗಾರಿಕೆ ಮತ್ತು ಶೆಲ್ ಕಂಪನಿಗಳಿಗೆ ಸೇರಿದ 18 ಪ್ರದೇಶಗಳ ಮೇಲೆ ಶುಕ್ರವಾರ ದಾಳಿ ನಡೆಸಿದೆ ಎಂದು ತಿಳಿದುಬಂದಿದೆ.
Published: 06th May 2022 11:37 AM | Last Updated: 06th May 2022 11:53 AM | A+A A-

ಸಂಗ್ರಹ ಚಿತ್ರ
ರಾಂಚಿ: ಜಾರಿ ನಿರ್ದೇಶನಾಲಯ (ಇಡಿ) ಶುಕ್ರವಾರ ಜಾರ್ಖಂಡ್‌ನ ಅಕ್ರಮ ಗಣಿಗಾರಿಕೆ ಮತ್ತು ಶೆಲ್ ಕಂಪನಿಗಳಿಗೆ ಸೇರಿದ 18 ಪ್ರದೇಶಗಳ ಮೇಲೆ ಶುಕ್ರವಾರ ದಾಳಿ ನಡೆಸಿದೆ ಎಂದು ತಿಳಿದುಬಂದಿದೆ.
ಜಾರ್ಖಂಡ್, ಬಿಹಾರ, ರಾಜಸ್ಥಾನ, ಹರಿಯಾಣ ಮತ್ತು ಎನ್‌ಸಿಆರ್ ಸೇರಿದಂತೆ ಒಟ್ಟು 18 ಸ್ಥಳಗಳಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಇಡಿ ತಂಡವು ಗುರುವಾರ ಸಂಜೆ ದೆಹಲಿಯಿಂದ ಈ 18 ಪ್ರದೇಶಗಳಿಗೆ ತಲುಪಿದ್ದು, ಇಂದು ಬೆಳ್ಳಂಬೆಳಿಗ್ಗೆಯೇ ದಾಳಿ ನಡೆಸಲು ಆರಂಭಿಸಿತ್ತು ಎನ್ನಲಾಗಿದೆ.
ರಾಂಚಿಯಲ್ಲಿರುವ ಗಣಿಗಾರಿಕೆ ಕಾರ್ಯದರ್ಶಿ ಪೂಜಾ ಸಿಂಘಾಲ್ ಅವರ ಅಧಿಕೃತ ನಿವಾಸದಲ್ಲೂ ಇಡಿ ಶೋಧ ನಡೆಸುತ್ತಿದೆ ಎಂದು ತಿಳಿದುಬಂದಿದೆ.
ಕಂಕೆ ರಸ್ತೆಯಲ್ಲಿರುವ ಪಂಚಾವತಿ ರೆಸಿಡೆನ್ಸ್, ಲಾಲ್‌ಪುರದ ಹರಿಯೋಮ್ ಟವರ್, ಗಣಿ ಕಾರ್ಯದರ್ಶಿ ಪೂಜಾ ಸಿಂಘಾಲ್ ಅವರ ಅಧಿಕೃತ ನಿವಾಸ ಮತ್ತು ಪೂಜಾ ಅವರ ಪತಿಗೆ ಸೇರಿದ ರಾಂಚಿಯ ಬರಿಯಾತು ರಸ್ತೆಯಲ್ಲಿರುವ ಪಲ್ಸ್ ಆಸ್ಪತ್ರೆ ಮೇಲೆ ದಾಳಿ ನಡೆದಿದೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.