ತೆಲಂಗಾಣ: ಹಿಂದೂ ಯುವಕನ ಮರ್ಯಾದಾ ಹತ್ಯೆ, ಸರ್ಕಾರದಿಂದ ವರದಿ ಕೇಳಿದ ರಾಜ್ಯಪಾಲರು
ಹಿಂದೂ ಯುವಕನ ಶಂಕಿತ ಮರ್ಯಾದಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲಂಗಾಣ ರಾಜ್ಯ ಸರ್ಕಾರದಿಂದ ರಾಜ್ಯಪಾಲ ತಮಿಳುಸೈ ಸೌಂದರರಾಜನ್ ವಿಸ್ತೃತವಾದ ವರದಿ ಕೋರಿದ್ದಾರೆ.
Published: 06th May 2022 05:35 PM | Last Updated: 06th May 2022 05:37 PM | A+A A-

ಹತ್ಯೆಯಾದ ಯುವಕ ನಾಗರಾಜು (ಬಲಕ್ಕೆ) ಆತನ ಹೆಂಡತಿ ಸೈಯದ್ ಅಶ್ರಿನ್ ಸುಲ್ತಾನ
ಹೈದ್ರಾಬಾದ್: ಹಿಂದೂ ಯುವಕನ ಶಂಕಿತ ಮರ್ಯಾದಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲಂಗಾಣ ರಾಜ್ಯ ಸರ್ಕಾರದಿಂದ ರಾಜ್ಯಪಾಲ ತಮಿಳುಸೈ ಸೌಂದರರಾಜನ್ ವಿಸ್ತೃತವಾದ ವರದಿ ಕೋರಿದ್ದಾರೆ.
ಶಂಕಿತ ಮರ್ಯಾದಾ ಹತ್ಯೆ ಪ್ರಕರಣದಲ್ಲಿ 25 ವರ್ಷದ ಹಿಂದೂ ಯುವಕನನ್ನು ಆತನ ಹೆಂಡತಿಯ ಸಹೋದರರು ಮತ್ತಿತರು ಸಾರ್ವಜನಿಕವಾಗಿಯೇ ಬುಧವಾರ ಹತ್ಯೆ ಮಾಡಿದ್ದರು. ಈ ಭೀಕರ ಹತ್ಯೆಯ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು.
ಇದನ್ನೂ ಓದಿ: ಹೈದ್ರಾಬಾದ್: ಚಾಕುವಿನಿಂದ ಇರಿದು ಯುವಕನ ಕಗ್ಗೊಲೆ, ಮರ್ಯಾದಾ ಹತ್ಯೆಯ ಶಂಕೆ
ಬುಧವಾರ ರಾತ್ರಿ ಸಾರೂರ್ ನಗರದಲ್ಲಿ ನಡೆದ ಈ ಘಟನೆಯ ಬಗ್ಗೆ ವಿವಿಧ ಮಾಧ್ಯಮಗಳ ವರದಿಯಿಂದ ವಿಷಯ ತಿಳಿದ ರಾಜ್ಯಪಾಲರಾದ ತಮಿಳುಸೈ ಸೌಂದರರಾಜನ್ ರಾಜ್ಯ ಸರ್ಕಾರದಿಂದ ವಿಸ್ತೃತವಾದ ವರದಿ ಕೇಳಿದ್ದಾರೆ ಎಂದು ರಾಜಭವನದ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಬಿ. ನಾಗರಾಜು ಹಾಗೂ ಸೈಯದ್ ಅಶ್ರಿನ್ ಸುಲ್ತಾನ ಅವರು ಬುಧವಾರ ಸಂಜೆ ತಮ್ಮ ಬೈಕ್ ನಲ್ಲಿ ಮನೆಯಿಂದ ಹೊರಟಾಗ ಅಡ್ಡಬಂದ ಇಬ್ಬರು ವ್ಯಕ್ತಿಗಳು ಕಬ್ಬಿಣದ ರಾಡ್ ನಿಂದ ಹಲ್ಲೆ ನಡೆಸಿದ್ದಾರೆ. ಜನರು ನೆರೆದಿದ್ದರೂ ದಾಳಿಕೋರರು ನಾಗರಾಜ್ ಅವರನ್ನು ಥಳಿಸಿ ಹತ್ಯೆ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.