ಧ್ವನಿವರ್ಧಕ ವಿವಾದ ಈಗ ಮುಗಿದ ಅಧ್ಯಾಯ, ಹಣದುಬ್ಬರದ ಕುರಿತು ಚರ್ಚೆ ಮಾಡಿ: ಸಂಜಯ್ ರಾವತ್
ಧ್ವನಿವರ್ಧಕ ವಿವಾದ ಈಗ ಮುಗಿದ ಅಧ್ಯಾಯವಾಗಿದ್ದು, ಆ ವಿಷಯದ ಬಗ್ಗೆ ಮಾತನಾಡುವ ಬದಲು, ಜನರು ಎದುರಿಸುತ್ತಿರುವ ಹಣದುಬ್ಬರ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಬೇಕಿದೆ ಎಂದು ಶಿವಸೇನೆ ನಾಯಕ ಸಂಜಯ್ ರಾವತ್ ಹೇಳಿದ್ದಾರೆ.
Published: 07th May 2022 07:50 PM | Last Updated: 07th May 2022 07:50 PM | A+A A-

ಸಂಜಯ್ ರಾವತ್
ಮುಂಬೈ: ಧ್ವನಿವರ್ಧಕ ವಿವಾದ ಈಗ ಮುಗಿದ ಅಧ್ಯಾಯವಾಗಿದ್ದು, ಆ ವಿಷಯದ ಬಗ್ಗೆ ಮಾತನಾಡುವ ಬದಲು, ಜನರು ಎದುರಿಸುತ್ತಿರುವ ಹಣದುಬ್ಬರ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಬೇಕಿದೆ ಎಂದು ಶಿವಸೇನೆ ನಾಯಕ ಸಂಜಯ್ ರಾವತ್ ಹೇಳಿದ್ದಾರೆ.
ಇದನ್ನೂ ಓದಿ: ಹನುಮಾನ್ ಚಾಲೀಸಾ ಪಠಿಸ್ತೀವಿ ಅಂದಿದ್ದ ರಾಣಾ ದಂಪತಿಗೆ ಜಾಮೀನು; ಬ್ರಿಟಿಷ್ ರಾಜ್ ಇದಕ್ಕಿಂತ ಉತ್ತಮ: ಸಂಜಯ್ ರಾವತ್
ಸುದ್ದಿಗಾರರೊಂದಿಗೆ ಮಾತನಾಡಿದ ರಾವತ್ ಅವರು, 'ಹಣದುಬ್ಬರದ ಬಗ್ಗೆ ಮಾತನಾಡಲು ಯಾರೂ ಸಿದ್ಧರಿಲ್ಲ. ಬೆಲೆ ಏರಿಕೆ ಮತ್ತು ನಿರುದ್ಯೋಗದಂತಹ ಸಮಸ್ಯೆಗಳಿಂದ ದೇಶದ ಜನರು ಹರಸಾಹಸ ಪಡುತ್ತಿದ್ದಾರೆ. ಆದರೆ ಈ ಬಗ್ಗೆ ಯಾವುದೇ ಬಿಜೆಪಿ ನಾಯಕರು ಮಾತನಾಡುತ್ತಿಲ್ಲ. ಪ್ರಧಾನಿ (ನರೇಂದ್ರ ಮೋದಿ), ಹಣಕಾಸು ಸಚಿವ (ನಿರ್ಮಲಾ ಸೀತಾರಾಮನ್) ಮತ್ತು ಬಿಜೆಪಿಯ ಉನ್ನತ ನಾಯಕರು ಹಣದುಬ್ಬರ ಮತ್ತು ನಿರುದ್ಯೋಗದ ವಿಷಯದ ಬಗ್ಗೆ ಮಾತನಾಡುವುದಿಲ್ಲ. ಅವರ ಸಮಸ್ಯೆಗಳು ವಿಭಿನ್ನವಾಗಿವೆ. ಅವರು ಪಂಜಾಬ್ ಮತ್ತು ಮಹಾರಾಷ್ಟ್ರದ ಪೊಲೀಸರು ಏನು ಮಾಡುತ್ತಿದ್ದಾರೆ ಎಂಬುದರ ಬಗ್ಗೆ ಮಾತ್ರ ಮಾತನಾಡುತ್ತಾರೆ ಎಂದು ಕಿಡಿಕಾರಿದರು.
ಇದನ್ನೂ ಓದಿ: ಶ್ರೀರಾಮನ ಹೆಸರಲ್ಲಿ ಬೆಂಕಿ ಹಚ್ಚುವುದು ರಾಮನಿಗೆ ಮಾಡುವ ಅಪಮಾನ: ಶಿವಸೇನೆ ನಾಯಕ ಸಂಜಯ್ ರಾವತ್
ಅಂತೆಯೇ ಮಹಾರಾಷ್ಟ್ರದಲ್ಲಿ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದ ಧ್ವನಿವರ್ಧಕಗಳ ಸಮಸ್ಯೆ ಮುಗಿದ ಅಧ್ಯಾಯವಾಗಿದ್ದು, ಅದರ ಮೇಲೆ ಹಿಂದೂ-ಮುಸ್ಲಿಂ ವಿಭಜನೆಯನ್ನು ಸೃಷ್ಟಿಸುವ ಪ್ರಯತ್ನಗಳು ವಿಫಲವಾಗಿವೆ. ಧ್ವನಿವರ್ಧಕಗಳ ಸಮಸ್ಯೆಗೆ ಸಂಬಂಧಿಸಿದಂತೆ ಹಿಂದೂ ಸಮುದಾಯವೇ ದೊಡ್ಡ ಹಿನ್ನಡೆಯನ್ನು ಎದುರಿಸುತ್ತಿದೆ ಎಂದು ಶಿವಸೇನಾ ಸಂಸದರು ಹೇಳಿದರು.
ಇದನ್ನೂ ಓದಿ: ಮುಂಬೈ ಕೇಂದ್ರಾಡಳಿತ ಪ್ರದೇಶ ಮಾಡಲು ಬಿಜೆಪಿ ಪಿತೂರಿ: ಸಂಜಯ್ ರಾವತ್
"ಮಸೀದಿಗಳಲ್ಲಿ ಧ್ವನಿವರ್ಧಕಗಳನ್ನು ನಿಷೇಧಿಸುವ ಬೇಡಿಕೆಯನ್ನು ಎತ್ತುವ ಮೂಲಕ ಹಿಂದೂ ಮತ್ತು ಮುಸ್ಲಿಮರ ನಡುವೆ ಉದ್ವಿಗ್ನತೆಯನ್ನು ಉಂಟುಮಾಡುವ ಪ್ರಯತ್ನಗಳು ನಡೆದಿವೆ. ಆದರೆ ಜನರು ಬುದ್ಧಿವಂತರಾಗಿದ್ದಾರೆ. ಧ್ವನಿವರ್ಧಕಗಳ ಕುರಿತು ಸುಪ್ರೀಂ ಕೋರ್ಟ್ ನಿರ್ದೇಶನಗಳನ್ನು ಜಾರಿಗೊಳಿಸಲಾಗುತ್ತಿದೆ. ಧ್ವನಿವರ್ಧಕಗಳ ಬಗ್ಗೆ ರಾಷ್ಟ್ರೀಯ ನೀತಿ ಇರಬೇಕು ಎಂದು ರಾವತ್ ಕೇಂದ್ರದ ಬಿಜೆಪಿ ಸರ್ಕಾರವನ್ನು ಒತ್ತಾಯಿಸಿದರು.