ಅಪರಾಧವೇ ಮಾಡದೆ 13 ವರ್ಷ ಜೈಲುವಾಸ ಅನುಭವಿಸಿದ ಆದಿವಾಸಿ ವ್ಯಕ್ತಿ ಕೊನೆಗೂ ಬಿಡುಗಡೆ!
ಅಪರಾಧವೇ ಮಾಡದೆ 13 ವರ್ಷ ಜೈಲುವಾಸ ಅನುಭವಿಸಿದ ಆದಿವಾಸಿ ವ್ಯಕ್ತಿಯೊಬ್ಬರಿಗೆ ಕೊನೆಗೂ ನ್ಯಾಯ ಸಿಕ್ಕಿದೆ. ಅದಕ್ಕಿಂತ ಮುಖ್ಯವಾಗಿ, ಒಂದು ಕೊಲೆ ಪ್ರಕರಣದ ತನಿಖೆ ಭರವಸೆಯ ವೈದ್ಯಕೀಯ ವೃತ್ತಿಜೀವನವನ್ನೇ ಕಡಿತಗೊಳಿಸಿದೆ.
Published: 07th May 2022 04:21 PM | Last Updated: 07th May 2022 05:51 PM | A+A A-

ಸಾಂದರ್ಭಿಕ ಚಿತ್ರ
ಭೂಪಾಲ್: ಅಪರಾಧವೇ ಮಾಡದೆ 13 ವರ್ಷ ಜೈಲುವಾಸ ಅನುಭವಿಸಿದ ಆದಿವಾಸಿ ವ್ಯಕ್ತಿಯೊಬ್ಬರಿಗೆ ಕೊನೆಗೂ ನ್ಯಾಯ ಸಿಕ್ಕಿದೆ. ಅದಕ್ಕಿಂತ ಮುಖ್ಯವಾಗಿ, ಒಂದು ಕೊಲೆ ಪ್ರಕರಣದ ತನಿಖೆ ಭರವಸೆಯ ವೈದ್ಯಕೀಯ ವೃತ್ತಿಜೀವನವನ್ನೇ ಕಡಿತಗೊಳಿಸಿದೆ.
ಮಧ್ಯ ಪ್ರದೇಶ ಹೈಕೋರ್ಟ್ ಬುಧವಾರ ಜೀವಾವಧಿ ಶಿಕ್ಷೆಯನ್ನು ಬದಿಗೊತ್ತಿ ಆತ ಅಮಾಯಾಕ ಎಂದು ಒಪ್ಪಿಕೊಂಡ ನಂತರ ಬಲ್ಗಾಟ್ ಜಿಲ್ಲೆಯ ನಿವಾಸಿ ಚಂದ್ರೇಶ್ ಮಾರ್ಸ್ಕೋಲ್ , ಭೂಪಾಲ್ ನ ಸೆಂಟ್ರಲ್ ಜೈಲಿನಿಂದ ಬಿಡುಗಡೆಯಾಗುತ್ತಿದ್ದಾರೆ. ಭೂಪಾಲ್ ಕೋರ್ಟ್ 2009ರಲ್ಲಿ ಆತ ದೋಷಿ ಎಂದು ತೀರ್ಪು ನೀಡಿತ್ತು.
ಈ ಪ್ರಕರಣವು ದುರುದ್ದೇಶಪೂರಿತವಾಗಿರುವುದಾಗಿ ಪರಿಗಣಿಸಿರುವ ನ್ಯಾಯಾಲಯ, 2008 ರಲ್ಲಿ ಎಂಬಿಬಿಎಸ್ ನಾಲ್ಕನೇ ವರ್ಷದ ವಿದ್ಯಾರ್ಥಿಯನ್ನು ತಪ್ಪಾಗಿ ಸಿಲುಕಿಸುವ ಏಕೈಕ ಉದ್ದೇಶದಿಂದ ಪೊಲೀಸರು ಪ್ರಕರಣದ ತನಿಖೆ ಮಾಡಿದ್ದಾರೆ ಎಂದು ಮಧ್ಯ ಪ್ರದೇಶ ಹೈಕೋರ್ಟ್ ನ ಜಬಲ್ ಪುರ ಪೀಠ ತನ್ನ ತೀರ್ಪಿನಲ್ಲಿ ಹೇಳಿದೆ.
"ಬಹುಶಃ ಪೊಲೀಸರು ಉದ್ದೇಶಪೂರ್ವಕವಾಗಿ ರಕ್ಷಿಸಿರುವ ಪ್ರಾಸಿಕ್ಯೂಷನ್ ಸಾಕ್ಷಿ ಡಾ. ಹೇಮಂತ್ ವರ್ಮಾ (ಆಗ ಭೋಪಾಲ್‌ನ ಅದೇ ವೈದ್ಯಕೀಯ ಕಾಲೇಜಿನಲ್ಲಿ ಹಿರಿಯ ಸ್ಥಾನಿಕ) ಅಪರಾಧಿಯಾಗಿರಬಹುದು ಎಂದು ಹೇಳಿದೆ.
ಕೋರ್ಟ್ ಆದೇಶದ 90 ದಿನಗಳೊಳಗೆ ಮಾರ್ಸ್ಕೋಲ್ ಗೆ 42 ಲಕ್ಷ ರೂಪಾಯಿ ಪರಿಹಾರವನ್ನು ನೀಡಬೇಕು. ಒಂದು ವೇಳೆ ಅದನ್ನು ನೀಡದಿದ್ದರೆ ಪಾವತಿ ಮಾಡುವವರೆಗೂ ಶೇಕಡಾ 9 ರಷ್ಟು ಬಡ್ಡಿಯನ್ನು ನೀಡಬೇಕಾಗುತ್ತದೆ ಎಂದು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ. ಆಗಸ್ಟ್ 25, 2008ರಲ್ಲಿ ಆತನನ್ನು ಔಪಚಾರಿಕವಾಗಿ ಬಂಧಿಸಿದ ನಂತರ ಜೈಲಿನಲ್ಲಿಯೇ ಇರುವಂತಾಗಿ, 13 ವರ್ಷ ಜೈಲಿನಲ್ಲಿಯೇ ಕಳೆದಿರುವುದಾಗಿ ಆದೇಶದಲ್ಲಿ ತಿಳಿಸಲಾಗಿದೆ.