ಹಿಮಾಚಲ ಪ್ರದೇಶ ಅಸೆಂಬ್ಲಿ ಪ್ರವೇಶದ್ವಾರದಲ್ಲಿ ಖಲಿಸ್ತಾನ್ ಧ್ವಜ, ತನಿಖೆಗೆ ಸಿಎಂ ಆದೇಶ
ಹಿಮಾಚಲ ಪ್ರದೇಶದ ವಿಧಾನಸಭೆಯ ಪ್ರವೇಶ ದ್ವಾರ ಮತ್ತು ಗೋಡೆಯ ಮೇಲೆ ಭಾನುವಾರ ಬೆಳಗ್ಗೆ ಖಲಿಸ್ತಾನ್ ಧ್ವಜಗಳು ಕಂಡುಬಂದಿವೆ. ಈ ಕೃತ್ಯವನ್ನು ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಖಂಡಿಸಿದ್ದು, ಇದರ ಹಿಂದಿರುವ ಜನರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.
Published: 08th May 2022 11:47 AM | Last Updated: 08th May 2022 11:48 AM | A+A A-

ಅಸೆಂಬ್ಲಿ ಪ್ರವೇಶದ್ವಾರದಲ್ಲಿ ಖಲಿಸ್ತಾನ್ ಧ್ವಜಗಳು
ಧರ್ಮಶಾಲಾ: ಹಿಮಾಚಲ ಪ್ರದೇಶದ ವಿಧಾನಸಭೆಯ ಪ್ರವೇಶ ದ್ವಾರ ಮತ್ತು ಗೋಡೆಯ ಮೇಲೆ ಭಾನುವಾರ ಬೆಳಗ್ಗೆ ಖಲಿಸ್ತಾನ್ ಧ್ವಜಗಳು ಕಂಡುಬಂದಿವೆ. ಈ ಕೃತ್ಯವನ್ನು ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಖಂಡಿಸಿದ್ದು, ಇದರ ಹಿಂದಿರುವ ಜನರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.
ಧರ್ಮಶಾಲಾ ಅಸೆಂಬ್ಲಿ ಕಾಂಪ್ಲೆಕ್ಸ್ ನ ಗೇಟ್ ನಲ್ಲಿ ಖಲಿಸ್ತಾನ ಧ್ವಜ ಹಾಕಿರುವುದು ತೀವ್ರ ಖಂಡನೀಯವಾಗಿದೆ. ಇಲ್ಲಿ ಚಳಿಗಾಲದ ಅಧಿವೇಶನ ಮಾತ್ರ ನಡೆಯುವುದರಿಂದ ಆ ಸಮಯದಲ್ಲಿ ಹೆಚ್ಚಿನ ಭದ್ರತಾ ವ್ಯವಸ್ಥೆಗಳ ಅಗತ್ಯವಿದೆ. ಘಟನೆಯ ಕುರಿತು ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳಲಾಗುವುದು' ಎಂದು ಹಿಮಾಚಲ ಪ್ರದೇಶ ಸಿಎಂ ಹೇಳಿದ್ದಾರೆ.
CM orders probe after 'Khalistan' flags found on Himachal Assembly gate
— ANI Digital (@ani_digital) May 8, 2022
Read @ANI Story | https://t.co/prVhsUrAV1#Dharamshala #JairamThakur #HimachalPradesh #HimachalAssemblyGate pic.twitter.com/h8DGu4SQK8
ತಡರಾತ್ರಿ ಅಥವಾ ಭಾನುವಾರ ಬೆಳಗ್ಗೆ ಇದು ನಡೆದಿರಬಹುದು. ವಿಧಾನಸಭಾ ಗೇಟ್ ನಿಂದ ಖಲಿಸ್ತಾನ್ ಧ್ವಜಗಳನ್ನು ತೆಗೆದುಹಾಕಿದ್ದೇವೆ. ಪಂಜಾಬಿನಿಂದ ಪ್ರವಾಸಕ್ಕೆ ಬಂದ ಕೆಲವರು ಇದನ್ನು ಮಾಡಿಬರಹುದು. ಈ ಸಂಬಂಧ ಕೇಸ್ ದಾಖಲಿಸಲಾಗುವುದು ಎಂದು ಎಸ್ ಪಿ ಕುಶಾಲ್ ಶರ್ಮಾ ಹೇಳಿದ್ದಾರೆ.