ಜಮ್ಮು-ಕಾಶ್ಮೀರ: ಇಬ್ಬರು ಹಿಜ್ಬುಲ್ ಉಗ್ರರ ಬಂಧನ, ಶಸಾಸ್ತ್ರ ವಶ
ಕೇಂದ್ರಾಡಳಿತ ಪ್ರದೇಶ ಜಮ್ಮು-ಕಾಶ್ಮೀರದ ಬಂಡಿಪೊರಾ ಜಿಲ್ಲೆಯಲ್ಲಿ ಹಿಜ್ಬುಲ್ ಮುಜಾಹಿದೀನ್ ಸಂಘಟನೆಯ ಇಬ್ಬರು ಉಗ್ರರನ್ನು ಬಂಧಿಸಲಾಗಿದ್ದು, ಅವರಿಂದ ಶಸಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಭಾನುವಾರ ಹೇಳಿದ್ದಾರೆ.
Published: 08th May 2022 12:17 PM | Last Updated: 08th May 2022 12:17 PM | A+A A-

ಸಾಂದರ್ಭಿಕ ಚಿತ್ರ
ಜಮ್ಮು-ಕಾಶ್ಮೀರ: ಕೇಂದ್ರಾಡಳಿತ ಪ್ರದೇಶ ಜಮ್ಮು-ಕಾಶ್ಮೀರದ ಬಂಡಿಪೊರಾ ಜಿಲ್ಲೆಯಲ್ಲಿ ಹಿಜ್ಬುಲ್ ಮುಜಾಹಿದೀನ್ ಸಂಘಟನೆಯ ಇಬ್ಬರು ಉಗ್ರರನ್ನು ಬಂಧಿಸಲಾಗಿದ್ದು, ಅವರಿಂದ ಶಸಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಭಾನುವಾರ ಹೇಳಿದ್ದಾರೆ.
ಬಂಡಿಪೂರಾದಿಂದ ಶ್ರೀನಗರದವರೆಗೆ ಉಗ್ರರ ಚಲನವಲನಕ್ಕೆ ಸಂಬಂಧಿಸಿದಂತೆ ದೊರೆತ ಖಚಿತ ಮಾಹಿತಿ ಆಧಾರದ ಮೇಲೆ ಶನಿವಾರ ವುಲ್ಲಾರ್ ವಾಂಟೆಜ್ ಅರಾಗಾಮ್ ಬಳಿ ಭದ್ರತಾ ಪಡೆಗಳಿಂದ ಚೆಕ್ ಪೋಸ್ಟ್ ನಿರ್ಮಿಸಲಾಗಿತ್ತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಾಹನಗಳು ಮತ್ತು ಪಾದಚಾರಿಗಳನ್ನು ತಪಾಸಣೆ ಮಾಡುತ್ತಿದ್ದಾಗ ಕಾರಿನಲ್ಲಿದ್ದ ಇಬ್ಬರು ತಮ್ಮ ಗುರುತನ್ನು ಮರೆ ಮಾಚಲು ಪ್ರಯತ್ನಿಸಿದರು. ಈ ಶಂಕಿತರು ಚೆಕ್ ಪೋಸ್ಟ್ ಮುರಿದು ತಪ್ಪಿಸಿಕೊಳ್ಳಲು ಯತ್ನಿಸಿದಾಗ ಜಾಣ್ಮೆಯಿಂದ ಅವರನ್ನು ಬಂಧಿಸಲಾಯಿತು ಎಂದು ಅವರು ತಿಳಿಸಿದ್ದಾರೆ.
ಬಂಧಿತರನ್ನು ಅಬಿದ್ ಆಲಿ ಮತ್ತು ಫೈಸಲ್ ಹಸನ್ ಪ್ಯಾರೇ ಎಂದು ಗುರುತಿಸಲಾಗಿದ್ದು, ಇಬ್ಬರು ಹೆರ್ಪೋರಾ ಅಚನ್ ಪುಲ್ವಾಮಾ ನಿವಾಸಿಗಳಾಗಿದ್ದಾರೆ. ತಪಾಸಣೆ ವೇಳೆ ಎಕೆ-47 ರೈಪಲ್ಸ್ ಸೇರಿದಂತೆ ಶಸಾಸ್ತ್ರಗಳು, ಮದ್ದುಗುಂಡುಗಳು, ಎರಡು ಮ್ಯಾಗಜಿನ್ ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.