ಅಸ್ತಮಾದಿಂದ ಬಳಲುತ್ತಿದ್ದರೂ 50ನೇ ವಯಸ್ಸಿನಲ್ಲಿ ಪರ್ವತವೇರಿ, ಸಮುದ್ರದಾಳಕ್ಕೆ ಧುಮುಕಿದ ಪಾಸಿಟಿವ್ ಸ್ಟೋರಿ!

ನನ್ನ ಜೀವನದಲ್ಲಿ ನಾನು ಸಾಧಿಸುವುದರ ಜೊತೆಗೆ ನನ್ನಂತಹ ಅನೇಕ ಜನರಿಗೆ ಸ್ಫೂರ್ತಿ ನೀಡುವ ಏನನ್ನಾದರೂ ಮಾಡಲು ಬಯಸುತ್ತೇನೆ ಎಂದು ಅನುಪಮಾ ಹೇಳಿದ್ದಾರೆ.

Published: 09th May 2022 01:01 PM  |   Last Updated: 09th May 2022 10:29 PM   |  A+A-


Anupma Diddi

ಅನುಪಮಾ

Online Desk

ಸ್ಪಷ್ಟವಾದ ಗುರಿ ಇದ್ದರೆ, ಛಲ ಜೊತೆಗಿದ್ದರೆ ಅಸಾಧ್ಯವೆನ್ನುವುದು ಯಾವುದೂ ಇಲ್ಲ ಎನ್ನುವುದು ಅತಿಶಯೋಕ್ತಿಯ ಮಾತಲ್ಲ. 

ಇದಕ್ಕೆ ಅಸ್ತಮಾದಿಂದ ಬಳಲುತ್ತಿದ್ದರೂ 50ನೇ ವಯಸ್ಸಿನಲ್ಲಿ ಪರ್ವತವೇರಿ, ಸಮುದ್ರದಾಳಕ್ಕೆ ಧುಮುಕಿದ ಅನುಪಮಾ ಅವರ ರೋಚಕ ಕಥೆಯೇ ನಿದರ್ಶನವಾಗಿದೆ.

ಮೇ 3, ವಿಶ್ವ ಆಸ್ತಮಾ ದಿನ. ಈ ಸಂದರ್ಭದಲ್ಲಿ ಅವರ ಹೋರಾಟದ ಬದುಕಿನ ಬಗ್ಗೆ ಅವರೇ ಹಂಚಿಕೊಂಡಿರುವ ಈ ಯಶೋಗಾಥೆ ನಿಜಕ್ಕೂ ಸ್ಫೂರ್ತಿದಾಯಕ. ‘ಅಸ್ತಮಾ ರೋಗದಿಂದ ಬಳಲುತ್ತಿದ್ದ ಸಮಯ ನನ್ನ ಜೀವನದ ಅತ್ಯಂತ ಕಠಿಣ ಹಂತವಾಗಿತ್ತು. ಸ್ಟೀರಾಯ್ಡ್‌ಗಳು ಮತ್ತು ಹತ್ತಾರು ಔಷಧಿಗಳಿಲ್ಲದೆ ಎಲ್ಲರಂತೆ ಸಾಮಾನ್ಯ ಜೀವನ ನಡೆಸುವ ಎಲ್ಲ ಭರವಸೆಗಳನ್ನು ನಾನು ಕೈಬಿಟ್ಟಿದ್ದೆ. ಆದರೆ, ಅದೃಷ್ಟವಶಾತ್ ಕಾಲ ಕಳೆದಂತೆ ಉತ್ತಮ ಜೀವನಶೈಲಿ ರೂಢಿಸಿಕೊಂಡ ನಂತರ ನನ್ನ ಸ್ಥಿತಿ ಸುಧಾರಿಸಿತು. ಪದವಿ ಪಡೆದ ನಂತರ 1988ರಲ್ಲಿ ಮೊದಲ ಬಾರಿಗೆ ಅಸ್ತಮಾ ಕಾಣಿಸಿಕೊಂಡಿತ್ತು. ಔಷಧಿಗಳಿಂದಾಗಿ 1 ವಾರದೊಳಗೆ ರೋಗಲಕ್ಷಣಗಳು ಕಡಿಮೆಯಾದವು. ಆದರೂ 1993ರಲ್ಲಿ ಮದುವೆಯಾದ ನಂತರ ಮಾಲಿನ್ಯದ ಕಾರಣದಿಂದ ಅಸ್ತಮಾ ಮರುಕಳಿಸಿ ನನ್ನನ್ನು ಮತ್ತೆ ಕಾಡಿತು. 50 ಮೀಟರ್ ನಡೆದರೆ ಸಾಕು ಉಸಿರುಗಟ್ಟಿ, ವಿಪರೀತ ಸುಸ್ತಾಗುತ್ತಿತ್ತು ಎಂದು ಹೇಳಿಕೊಂಡಿದ್ದಾರೆ.

ನನ್ನ ಜೀವನದ ಪಯಣದ ಹಾದಿ ಅಷ್ಟೊಂದು ಸುಲಭವಾಗಿರಲಿಲ್ಲ. ಬಲವಾದ ಸ್ಟೀರಾಯ್ಡ್ ಡೋಸ್‌ಗಳಿಂದ ನನ್ನ ದೇಹದ ತೂಕ 20 ಕೆಜಿಯಷ್ಟು ಹೆಚ್ಚಾಗಿತ್ತು. ಕುಟುಂಬದ ಎಲ್ಲರಿಗೂ ನನ್ನನ್ನು ಆ ಸ್ಥಿತಿಯಲ್ಲಿ ನೋಡುವುದು ಕಷ್ಟಕರವಾಗಿತ್ತು. ಅದರಲ್ಲೂ ವಿಶೇಷವಾಗಿ ನನ್ನ ಮಗಳು ನನಗೆ ಉಬ್ಬಸ ದಾಳಿಯಾದಾಗೆಲ್ಲ ಭಯಪಡುತ್ತಿದ್ದಳು. ನಾನು 2014ರಲ್ಲಿ ತರಬೇತಿ ವಿಭಾಗದ ನಿರ್ವಹಕಿಯಾಗಿ ಆರ್ಕಿಡ್ಸ್ - ದಿ ಇಂಟರ್‌ನ್ಯಾಶನಲ್ ಸ್ಕೂಲ್‌ಗೆ ಸೇರಿದೆ. ಇದು ನನ್ನ ಕನಸಿನ ಕೆಲಸವಾಗಿತ್ತು. ಆದರೆ, ನನ್ನ ಆರೋಗ್ಯ ಸಮಸ್ಯೆಗಳ ಕಾರಣ ಕೇವಲ 6 ತಿಂಗಳಲ್ಲಿ ಕೆಲಸ ಬಿಡಬೇಕಾಯಿತು.

ಅನುಪಮಾ ದಿಡ್ಡಿ

Anxiety ಮತ್ತು ಒತ್ತಡದ ಕಾರಣದಿಂದ ನನಗೆ ಅಸ್ತಮಾ ಇರುವುದಾಗಿ ಕುಟುಂಬದ ವೈದ್ಯರು ಹೇಳಿದರು. ಹೀಗಾಗಿ ನಾನು ಯೋಗವನ್ನು ಪುನರಾರಂಭಿಸಿದೆ. ನನ್ನ ಸ್ಟೀರಾಯ್ಡ್ ಅಗತ್ಯವು ತೀವ್ರವಾಗಿ ಕಡಿಮೆಯಾದ ಕಾರಣ ತೀರಾ ಅಪರೂಪಕ್ಕೊಮ್ಮೆ ಇನ್ಹೇಲರ್‌ಗಳನ್ನು ಬಳಸುತ್ತಿದ್ದೆ. ಇದರಿಂದ ನನ್ನ ಬದುಕು ಬದಲಾಗುವ ಹಂತಕ್ಕೆ ಬಂದು ತಲುಪಿತು.

ಅಸ್ತಮಾ ರೋಗ ತೀವ್ರವಾಗಿ ನನ್ನನ್ನು ಕಾಡುತ್ತಿದ್ದಾಗ ಹೇಗಾದರೂ ಸರಿ ಇದರಿಂದ ಮುಕ್ತಿ ಹೊಂದಬೇಕೆಂದು ತೀರ್ಮಾನಿಸಿದೆ. ಭಾರತೀಯ ಸೇನಾ ಅಧಿಕಾರಿಯ ಮಗಳು ಮತ್ತು ಪತ್ನಿಯಾಗಿರುವ ನಾನು ನನ್ನ ಸಮಸ್ಯೆಯನ್ನು ಪರಿಹರಿಸಲು ಶಪಥ ಮಾಡಿದೆ. ಪ್ರತಿದಿನ ಪ್ರಾಣಾಯಾಮ ಹಾಗೂ ಈಜುವ ಮೂಲಕ ಕೇವಲ 6 ತಿಂಗಳಲ್ಲಿ ನನ್ನ ಶ್ವಾಸಕೋಶದ ಮೇಲಿನ ಅಸ್ತಮಾ ಹಿಡಿತ ಕಡಿಮೆಯಾಯಿತು. 2015ರಲ್ಲಿ ನಾನು ನನ್ನ ಮೊದಲ ಹಾಫ್-ಮ್ಯಾರಥಾನ್ ಓಡಿದೆ. ನಂತರ ಹಿಂತಿರುಗಿ ನೋಡಲೇ ಇಲ್ಲ. ನನ್ನ ಸವಾಲುಗಳೇ ನನ್ನ ಸಾಧನೆಗಳಾದವು ಅಂತಾ ಅನುಪಮಾ ಹೇಳಿಕೊಂಡಿದ್ದಾರೆ.

ನನ್ನ ಜೀವನದಲ್ಲಿ ನಾನು ಸಾಧಿಸುವುದರ ಜೊತೆಗೆ ನನ್ನಂತಹ ಅನೇಕ ಜನರಿಗೆ ಸ್ಫೂರ್ತಿ ನೀಡುವ ಏನನ್ನಾದರೂ ಮಾಡಲು ಬಯಸುತ್ತೇನೆ. 50ನೇ ವರ್ಷದ ಹುಟ್ಟುಹಬ್ಬಕ್ಕೆಂದು ನಾನು ಪರ್ವತಾರೋಹಣ ಮಾಡಲು ಹಾಗೂ ಸಮುದ್ರದ ಆಳಕ್ಕೆ ಧುಮುಕಲು ನಿರ್ಧರಿಸಿದೆ. ಮೊದಲಿನದಕ್ಕೆ ನಾನು ಅನುಭವಿ ಚಾರಣಿಗರ ಗುಂಪನ್ನು ಸೇರಿಕೊಂಡೆ. ಅವರು ಹಿಮಾಲಯವನ್ನು ಏರುವ ಮೊದಲು ನನಗೆ ತರಬೇತಿ  ನೀಡಿದರು. 2ನೇ ಯದ್ದಕ್ಕಾಗಿ ನಾನು ಸ್ಕೂಬಾ ಡೈವಿಂಗ್ ಕೋರ್ಸ್‌ಗೆ ನೋಂದಾಯಿಕೊಂಡೆ. ಫೆಬ್ರವರಿ 27ರಂದು ನನ್ನ 50ನೇ ಹುಟ್ಟುಹಬ್ಬಕ್ಕಾಗಿ Deep-Sea Diving ಪ್ರಮಾಣಪತ್ರಕ್ಕಾಗಿ ಅಂಡಮಾನ್‌ಗೆ ಹೊರಟೆ. 1 ತಿಂಗಳ ನಂತರ ಮಾರ್ಚ್ 27ರಂದು ನಾನು ಹಿಮಾಲಯದ ಶಿಖರಗಳಲ್ಲಿ ಒಂದಾದ ಸಂದಕ್ಫು (3,636 ಮೀಟರ್) ಏರಿದೆ.

ಈಗ ನಾನು ಆರ್ಕಿಡ್ಸ್ ಗೆ ಮರಳಿದ್ದೇನೆ. ನಾನು ಇಷ್ಟಪಡುವ ಕೆಲಸಕ್ಕೆ ಮರಳಿದ್ದೇನೆ. ಕಳೆದ 1 ವರ್ಷದಿಂದ ನಾನು ತರಬೇತಿ ಕಾರ್ಯಾಗಾರಗಳನ್ನು ನೋಡಿಕೊಳ್ಳುತ್ತಿದ್ದೇನೆ. ಇದು ನನಗೆ ಸಾಕಷ್ಟು ತೃಪ್ತಿ ನೀಡಿದೆ. ಎಲ್ಲವೂ ಕೂಡ ನಮ್ಮ ಮನಸಿನ ಮೇಲೆ ನಿಂತಿದೆ. 50+ ವರ್ಷದಲ್ಲಿ ನಾನು ಸಣ್ಣ ಜೀವನಶೈಲಿಯ ಬದಲಾವಣೆಯಿಂದ ಮತ್ತು ಬದ್ಧತೆಯಿಂದ ಆಸ್ತಮಾವನ್ನು ಸೋಲಿಸಲು ಸಾಧ್ಯವಾದರೆ, ಯಾರಾದರೂ ಏನೂ ಬೇಕಾದರೂ ಮಾಡಬಹುದು ಹಾಗೂ ಸಾಧಿಸಬಹುದು ಎಂದು ಅನುಪಮಾ ಹೇಳಿದ್ದಾರೆ.


Stay up to date on all the latest ದೇಶ news
Poll
mallikarjuna kharge

ರಾಜಸ್ತಾನದಲ್ಲಿ ಪೈಲಟ್-ಗೆಹ್ಲೋಟ್ ನಡುವೆ ಬಿಕ್ಕಟ್ಟು; ಕೇರಳದಲ್ಲಿ ಸ್ವಪಕ್ಷದವರ ವಿರುದ್ಧ ತರೂರ್ ಫೈಟು: ಕಾಂಗ್ರೆಸ ಒಳಜಗಳ ಬಿಡಿಸಲು ಮಲ್ಲಿಕಾರ್ಜುನ ಖರ್ಗೆ ಗೆ ಸಾಧ್ಯವಾಗುವುದೇ?


Result
ಹೌದು
ಆಗದು

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp