ಆಂಧ್ರ ಪ್ರದೇಶ: ಹೃದಯಾಘಾತದಿಂದ ಪರೀಕ್ಷಾ ಕೇಂದ್ರದಲ್ಲೇ 17 ವರ್ಷದ ವಿದ್ಯಾರ್ಥಿ ಸಾವು!
ಪರೀಕ್ಷೆ ಬರೆಯಲು ತೆರಳಿದ್ದ ಇಂಟರ್ ಮಿಡಿಯೇಟ್ ದ್ವಿತೀಯ ವರ್ಷದ ವಿದ್ಯಾರ್ಥಿಯೊಬ್ಬ ಹೃದಯಾಘಾತದಿಂದ ಪರೀಕ್ಷಾ ಕೇಂದ್ರದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ತಿರುಪತಿ ದಿಲ್ಲೆಯ ಗುದುರ್ ಪಟ್ಟಣದಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ.
Published: 10th May 2022 03:14 PM | Last Updated: 10th May 2022 03:25 PM | A+A A-

ಸಾಂದರ್ಭಿಕ ಚಿತ್ರ
ತಿರುಪತಿ: ಪರೀಕ್ಷೆ ಬರೆಯಲು ತೆರಳಿದ್ದ ಇಂಟರ್ ಮಿಡಿಯೇಟ್ ದ್ವಿತೀಯ ವರ್ಷದ ವಿದ್ಯಾರ್ಥಿಯೊಬ್ಬ ಹೃದಯಾಘಾತದಿಂದ ಪರೀಕ್ಷಾ ಕೇಂದ್ರದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ತಿರುಪತಿ ದಿಲ್ಲೆಯ ಗುದುರ್ ಪಟ್ಟಣದಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ.
ಮೃತ ವಿದ್ಯಾರ್ಥಿಯನ್ನು ಸ್ಯಾದಪುರಂ ಮಂಡಲದ ಯೆಕೊಲ್ಲು ವೆಂಕಟ ಸತೀಶ್ ಎಂದು ಗುರುತಿಸಲಾಗಿದೆ. ಈತ ಗುದುರ್ ಪಟ್ಟಣದ ಶ್ರೀ ಸ್ವರ್ಣಂಧರ ಭಾರತಿ ಜ್ಯೂನಿಯರ್ ಕಾಲೇಜಿನ ವಿದ್ಯಾರ್ಥಿಯಾಗಿದ್ದು, ಇಂಟರ್ ಮಿಡಿಯೇಟ್ ನ ಇಂಗ್ಲೀಷ್ ಪತ್ರಿಕೆ ಪರೀಕ್ಷೆ ಬರೆಯಲು ಕಾಲೇಜಿಗೆ ಬಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಪರೀಕ್ಷಾ ಕೊಠಡಿಗೆ ತೆರಳುವ ಮುನ್ನ ಪೊಲೀಸರು ತಪಾಸಣೆ ನಡೆಸುತ್ತಿದ್ದಾಗ ಎದೆಯಲ್ಲಿ ಸ್ವಲ್ಪ ನೋವಾಗುತ್ತಿರುವುದಾಗಿ ಸತೀಶ್ ಪೋಲೀಸರಿಗೆ ತಿಳಿಸಿದ್ದಾನೆ. ಸ್ವಲ್ಪ ಹೊತ್ತು ಪಕ್ಕದಲ್ಲಿ ಕೂರುವಂತೆ ಪೊಲೀಸರು ಆತನಿಗೆ ಸೂಚಿಸಿದ್ದಾರೆ. ಕೆಲ ನಿಮಿಷಗಳ ಬಳಿಕ ತೀವ್ರ ಉಸಿರಾಟದ ತೊಂದರೆಯಾಗಿದೆ. ಕೂಡಲೇ ಪೊಲೀಸರು ಚಿಕಿತ್ಸೆಗಾಗಿ ಆತನನ್ನು ಸ್ಥಳೀಯ ಆಸ್ಪತ್ರೆಗೆ ಸ್ಥಳಾಂತರಿಸುತ್ತಿದ್ದಾಗ ಮಾರ್ಗ ಮಧ್ಯದಲ್ಲಿಯೇ ಸಾವನ್ನಪ್ಪಿದ್ದಾನೆ. ಗುದುರ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.