ನಟ ಶಾರೂಖ್ ಖಾನ್ ಬಂಗಲೆ ಪಕ್ಕದ ಅಪಾರ್ಟ್ಮೆಂಟ್ ಗೆ ಹೊತ್ತಿಕೊಂಡ ಬೆಂಕಿ: ಆತಂಕ ಸೃಷ್ಟಿ
ಮುಂಬೈನ ಐಷಾರಾಮಿ ಪ್ರದೇಶದಲ್ಲಿ ಬಾಲಿವುಡ್ ನಟ ಶಾರುಖ್ ಖಾನ್ ಅವರ ಬಂಗಲೆ ಮನ್ನತ್ ಪಕ್ಕದಲ್ಲಿರುವ ಅಪಾರ್ಟ್ಮೆಂಟ್ 14ನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ.
Published: 10th May 2022 01:26 AM | Last Updated: 10th May 2022 01:26 AM | A+A A-

ಪ್ರತ್ಯಕ್ಷ ದೃಶ್ಯ
ಮುಂಬೈ: ಮುಂಬೈನ ಐಷಾರಾಮಿ ಪ್ರದೇಶದಲ್ಲಿ ಬಾಲಿವುಡ್ ನಟ ಶಾರುಖ್ ಖಾನ್ ಅವರ ಬಂಗಲೆ ಮನ್ನತ್ ಪಕ್ಕದಲ್ಲಿರುವ ಅಪಾರ್ಟ್ಮೆಂಟ್ 14ನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ಕಟ್ಟಡದ ಮಹಡಿಯಿಂದ ಬೆಂಕಿಯ ಕೆನ್ನಾಲಿಗೆ ಸುತ್ತಮುತ್ತ ಚಾಚಿದ್ದು ದಟ್ಟ ಹೊಗೆ ಆವರಿಸಿದೆ.
ಬಾಂದ್ರಾದ ಬ್ಯಾಂಡ್ಸ್ಟ್ಯಾಂಡ್ ರಸ್ತೆಯಲ್ಲಿರುವ 21 ಅಂತಸ್ತಿನ ಜೀವೇಶ್ ಕಟ್ಟಡದಲ್ಲಿ ಇಂದು ಸಂಜೆ 7.46 ರ ಸುಮಾರಿಗೆ 2ನೇ ಬಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಎಂಟು ಅಗ್ನಿಶಾಮಕ ವಾಹನಗಳು, ಏಳು ಜಂಬೋ ಟ್ಯಾಂಕರ್ಗಳು ಮತ್ತು ಹಲವಾರು ಆಂಬ್ಯುಲೆನ್ಸ್ಗಳು ಸ್ಥಳಕ್ಕೆ ಧಾವಿಸಿವೆ.