ಸಂಸದರ ನಿಧಿ ಮೇಲಿನ ಬಡ್ಡಿ ಹಣವನ್ನು ಅಭಿವೃದ್ಧಿ ಕಾರ್ಯಗಳಿಗೆ ಬಳಸುವಂತಿಲ್ಲ: ಕೇಂದ್ರದ ಪರಿಷ್ಕೃತ ನಿಯಮ
ಕೇಂದ್ರ ಸರ್ಕಾರದ ವಿವಿಧ ಯೋಜನೆಗಳಡಿ ಹಣದ ಬಳಕೆಗಾಗಿ ಕೇಂದ್ರವು ನಿಯಮಗಳನ್ನು ಪರಿಷ್ಕರಿಸುವ ಮೂಲಕ ಸಂಸದರ ನಿಧಿಯ ಮೇಲೆ ಸಂಗ್ರಹವಾದ ಬಡ್ಡಿಯನ್ನು ಅಭಿವೃದ್ಧಿ ಕಾರ್ಯಗಳಿಗೆ ಸಂಸದರು ಬಳಸದಂತಾಗಿದೆ.
Published: 10th May 2022 01:08 PM | Last Updated: 10th May 2022 01:26 PM | A+A A-

ಪಾರ್ಲಿಮೆಂಟ್
ನವದೆಹಲಿ: ಕೇಂದ್ರ ಸರ್ಕಾರದ ವಿವಿಧ ಯೋಜನೆಗಳಡಿ ಹಣದ ಬಳಕೆಗಾಗಿ ಕೇಂದ್ರವು ನಿಯಮಗಳನ್ನು ಪರಿಷ್ಕರಿಸುವ ಮೂಲಕ ಸಂಸದರ ನಿಧಿಯ ಮೇಲೆ ಸಂಗ್ರಹವಾದ ಬಡ್ಡಿಯನ್ನು ಅಭಿವೃದ್ಧಿ ಕಾರ್ಯಗಳಿಗೆ ಸಂಸದರು ಬಳಸದಂತಾಗಿದೆ.
ಹಣಕಾಸು ಸಚಿವಾಲಯದ ಪರಿಷ್ಕೃತ ಕಾರ್ಯವಿಧಾನದ ಪ್ರಕಾರ, ಹಣಕಾಸು ಸಚಿವಾಲಯದ ಸಂಸದರ ನಿಧಿ ಒಳಗೊಂಡಂತೆ ಎಲ್ಲ ಬಡ್ಡಿ ಗಳಿಕೆಯನ್ನು ಕಡ್ಡಾಯವಾಗಿ ಭಾರತದ ಕನ್ಸಾಲಿಡೇಟೆಡ್ ಫಂಡ್ ಗೆ (ಏಕೀಕೃತ ನಿಧಿ) ರವಾನೆ ಮಾಡಬೇಕು. ಪರಿಷ್ಕೃತ ಕಾರ್ಯವಿಧಾನಗಳನ್ನು ಲೋಕಸಭೆ ಮತ್ತು ರಾಜ್ಯಸಭಾ ಕಾರ್ಯದರ್ಶಿಗಳಿಂದ ಸಂಸದರಿಗೆ ತಿಳಿಸಲಾಗಿದೆ.
ಸಿಪಿಐ(ಎಂ) ಸಂಸದ ಜಾನ್ ಬ್ರಿಟಾಸ್ ಅವರು ಹೊಸ ಕಾರ್ಯವಿಧಾನಗಳಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಮತ್ತು ನಿರ್ಧಾರವನ್ನು ಹಿಂತೆಗೆದುಕೊಳ್ಳುವಂತೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಒತ್ತಾಯಿಸಿದ್ದಾರೆ.
ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ ಅಡಿ ಪ್ರತಿ ಸಂಸದರು ತಮ್ಮ ಕ್ಷೇತ್ರಗಳಲ್ಲಿ ಪ್ರತಿ ವರ್ಷ 5 ಕೋಟಿ ರೂ. ವೆಚ್ಚವನ್ನೊಳಗೊಂಡಿರುವ ಅಭಿವೃದ್ಧಿ ಕಾರ್ಯಗಳಿಗೆ ಶಿಫಾರಸು ಮಾಡಬಹುದು.ಕೋವಿಡ್-19 ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಏಪ್ರಿಲ್ 2020 ರಿಂದ ಕಳೆದ ವರ್ಷದ ನವೆಂಬರ್ ನವರೆಗೂ ಈ ಯೋಜನೆಯನ್ನು ಸ್ಥಗಿತಗೊಳಿಸಲಾಗಿತ್ತು.