
ಒತ್ತುವರಿ ತೆರವು ಕಾರ್ಯಚರಣೆ
ನವದೆಹಲಿ: ನವದೆಹಲಿಯ ಪಟೇಲ್ ನಗರದ ಪ್ರೇಮ್ ನಗರ ಸೇರಿದಂತೆ ರಾಷ್ಟ್ರರಾಜಧಾನಿಯ ವಿವಿಧೆಡೆ ಇಂದು ಕೂಡಾ ಒತ್ತುವರಿ ತೆರವು ಕಾರ್ಯಚರಣೆ ಮುಂದುವರೆದಿದೆ. ಪ್ರೇಮ್ ನಗರದಲ್ಲಿ ಬೆಳಂಬೆಳಗ್ಗೆಯೇ ಸದ್ದು ಮಾಡಿದ ಜೆಸಿಬಿ ಯಂತ್ರಗಳು, ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸಿದವು.
ಮದನಪುರ ಖಾದರ್ ವಾರ್ಡ್ ನಲ್ಲಿ ಸ್ಥಳೀಯರು ಒತ್ತುವರಿ ತೆರವು ಕಾರ್ಯಚರಣೆಗೆ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು. ಒತ್ತುವರಿ ತೆರವು ಕಾರ್ಯಚರಣೆಯಿಂದ ಬಡವರ ಮನೆಗಳು ಉಳಿಯುವುದಾದರೆ ನಾನು ಜೈಲಿಗೆ ಹೋಗಲಿಕ್ಕೂ ಸಿದ್ದ. ಇಲ್ಲಿ ಯಾವುದೇ ಒತ್ತುವರಿಯಾಗಿಲ್ಲ. ಒಂದು ವೇಳೆ ಒತ್ತುವರಿಯಾಗಿದ್ದಲ್ಲಿ ತೆರವು ಕಾರ್ಯಚರಣೆಗೆ ಸ್ಥಳೀಯ ಸಂಸ್ಥೆಗೆ ಬೆಂಬಲ ನೀಡುವುದಾಗಿ ಎಎಪಿ ಶಾಸಕ ಅಮಾನತುಲ್ಲಾ ಖಾನ್ ಹೇಳಿದರು.
"I am ready to go to jail if it saves the houses of poor people. There is no encroachment here. I will support them (civic body) in demolition if there is any encroachment," says AAP MLA Amanatullah Khan who is present at the location pic.twitter.com/1A3tOD5p1s
— ANI (@ANI) May 12, 2022
ಮತ್ತೊಂದೆಡೆ ಒತ್ತುವರಿ ತೆರವು ಕಾರ್ಯಚರಣೆ ಹಿನ್ನೆಲೆಯಲ್ಲಿ ರೋಹಿಣಿಯ ಕೆಎನ್ ಕಾಟ್ಜು ಮಾರ್ಗದಲ್ಲಿ ತಾತ್ಕಾಲಿಕ ಕಟ್ಟಡಗಳನ್ನು ಜನರೇ ತೆರವುಗೊಳಿಸುತ್ತಿದ್ದಾರೆ.
ಇದನ್ನೂ ಓದಿ: ದೆಹಲಿಯಲ್ಲಿ ಮತ್ತೆ ಸದ್ದು ಮಾಡಿದ ಜೆಸಿಬಿ: ರಾಜಕೀಯ ಪಕ್ಷದ ಮನವಿ ಪರಿಗಣಿಸಲು ಸಾಧ್ಯವಿಲ್ಲ ಎಂದ ಸುಪ್ರೀಂ ಕೋರ್ಟ್
Delhi | People have started removing the temporary structures on their own at KN Katju Marg, Rohini ahead of the anti-encroachment drive announced by the civic body pic.twitter.com/JDjUSXDw5g
— ANI (@ANI) May 12, 2022