ದೇಶದಲ್ಲಿ ಮುಂದುವರೆದ ಕೊರೋನಾ ಏರಿಳಿತ: ಕಳೆದ 24 ಗಂಟೆಗಳಲ್ಲಿ 24 ಸಾವು, 2,827 ಹೊಸ ಕೇಸ್ ಪತ್ತೆ
ದೇಶದಲ್ಲಿ ಕೊರೋನಾ ಏರಿಳಿತ ಮುಂದುವರೆದಿದ್ದು, ಕಳೆದ 24 ಗಂಟೆಗಳಲ್ಲಿ 24 ಸೋಂಕಿತರು ಸಾವನ್ನಪ್ಪಿದ್ದು, 2,827 ಹೊಸ ಕೇಸ್ ಪತ್ತೆಯಾಗಿದೆ. ದೇಶದಲ್ಲಿ ಸದ್ಯ 19,067 ಸಕ್ರಿಯ ಪ್ರಕರಣಗಳಿರುವುದಾಗಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಸಚಿವಾಲಯ ಮಾಹಿತಿ ನೀಡಿದೆ.
Published: 12th May 2022 10:14 AM | Last Updated: 12th May 2022 10:21 AM | A+A A-

ಸಾಂದರ್ಭಿಕ ಚಿತ್ರ
ನವದೆಹಲಿ: ದೇಶದಲ್ಲಿ ಕೊರೋನಾ ಏರಿಳಿತ ಮುಂದುವರೆದಿದ್ದು, ಕಳೆದ 24 ಗಂಟೆಗಳಲ್ಲಿ 24 ಸೋಂಕಿತರು ಸಾವನ್ನಪ್ಪಿದ್ದು, 2,827 ಹೊಸ ಕೇಸ್ ಪತ್ತೆಯಾಗಿದೆ.
ಚೇತರಿಕೆ ಪ್ರಮಾಣ ಹೆಚ್ಚಳದೊಂದಿಗೆ ದೇಶದಲ್ಲಿ ಸದ್ಯ 19,067 ಸಕ್ರಿಯ ಪ್ರಕರಣಗಳಿರುವುದಾಗಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಸಚಿವಾಲಯ ಮಾಹಿತಿ ನೀಡಿದೆ.
#COVID19 | India reports 2,827 fresh cases, 3,230 recoveries, and 24 deaths in the last 24 hours.
— ANI (@ANI) May 12, 2022
Total active cases is 19,067. pic.twitter.com/vArwMu705N
ಕಳೆದ 24 ಗಂಟೆಗಳಲ್ಲಿ 3,230 ಸೋಂಕಿತರು ಗುಣಮುಖರಾಗಿದ್ದು, ಚೇತರಿಕೆ ಪ್ರಮಾಣ ಶೇ.98.74 ರಷ್ಟಿದೆ.14,85,292 ಮಂದಿಗೆ ಲಸಿಕೆ ನೀಡಲಾಗಿದೆ ಎಂದು ಸಚಿವಾಲಯ ತಿಳಿಸಿದೆ.