ಸುಖೋಯ್-30 ಎಂಕೆಐನಿಂದ ಬ್ರಹ್ಮೋಸ್ ಕ್ಷಿಪಣಿಯ ವಿಸ್ತೃತ-ಶ್ರೇಣಿಯ ಆವೃತ್ತಿ ಪರೀಕ್ಷೆ ಯಶಸ್ವಿ!
ಭಾರತ ಇದೇ ಮೊದಲ ಬಾರಿಗೆ ಸು-30 ಎಂಕೆಐ ಯುದ್ಧ ವಿಮಾನದಿಂದ ಬ್ರಹ್ಮೋಸ್ ವಾಯು ಉಡಾವಣೆ ಕ್ಷಿಪಣಿಯ ವಿಸ್ತೃತ ಶ್ರೇಣಿ ಆವೃತ್ತಿಯನ್ನು ಯಶಸ್ವಿಯಾಗಿ ಪರೀಕ್ಷಿಸಿದೆ.
Published: 12th May 2022 10:08 PM | Last Updated: 12th May 2022 10:08 PM | A+A A-

ಸು-30 ಎಂಕೆಐ
ನವದೆಹಲಿ: ಭಾರತ ಇದೇ ಮೊದಲ ಬಾರಿಗೆ ಸು-30 ಎಂಕೆಐ ಯುದ್ಧ ವಿಮಾನದಿಂದ ಬ್ರಹ್ಮೋಸ್ ವಾಯು ಉಡಾವಣೆ ಕ್ಷಿಪಣಿಯ ವಿಸ್ತೃತ ಶ್ರೇಣಿ ಆವೃತ್ತಿಯನ್ನು ಯಶಸ್ವಿಯಾಗಿ ಪರೀಕ್ಷಿಸಿದೆ.
ಭಾರತೀಯ ವಾಯುಪಡೆ ನಡೆಸಿದ ಪರೀಕ್ಷೆಯಲ್ಲಿ ಉಡಾವಣೆಯು ಯೋಜಿಸಿದಂತೆ ಕ್ಷಿಪಣಿಯು ಬಂಗಾಳಕೊಲ್ಲಿ ಪ್ರದೇಶದಲ್ಲಿ ಗೊತ್ತುಪಡಿಸಿದ ಗುರಿಯ ಮೇಲೆ ನಿಖರ ದಾಳಿ ಮಾಡಿದೆ.
ಭಾರತೀಯ ನೌಕಾಪಡೆ, ಡಿಆರ್ ಡಿಒ, ಬಿಎಪಿಎಲ್ ಮತ್ತು ಎಚ್ಎಎಲ್ ಭಾರತೀಯ ವಾಯುಪಡೆಯೊಂದಿಗೆ ಈ ಪರೀಕ್ಷೆಯಲ್ಲಿ ಭಾಗಿಯಾಗಿದ್ದವು. ಬ್ರಹ್ಮೋಸ್ ನ ವಿಸ್ತೃತ ಆವೃತ್ತಿಯ ಕ್ಷಿಪಣಿಯಿಂದಾಗಿ ಸು-30ಎಂಕೆಐ ಯುದ್ಧವಿಮಾನಗಳ ಶಕ್ತಿ ಹೆಚ್ಚಾಗಿದೆ.
ಭವಿಷ್ಯದ ಯುದ್ಧಗಳ ದೃಷ್ಟಿಕೋನದಿಂದ ಐಎಎಫ್ ಈ ಮೌಲ್ಯೀಕರಣವನ್ನು ಪ್ರಮುಖ ಎಂದು ಕರೆದಿದೆ. 'ಇದರೊಂದಿಗೆ ಸು-30MKI ವಿಮಾನದಿಂದ ಭೂಮಿ/ಸಮುದ್ರ ಗುರಿಯ ವಿರುದ್ಧ ಬಹಳ ದೂರದವರೆಗೆ ನಿಖರವಾದ ಸ್ಟ್ರೈಕ್ಗಳನ್ನು ನಡೆಸುವ ಸಾಮರ್ಥ್ಯವನ್ನು IAF ಸಾಧಿಸಿದೆ.