ಜಮ್ಮು-ಕಾಶ್ಮೀರ: ತಹಸಿಲ್ ಕಚೇರಿ ನೌಕರನ ಹತ್ಯೆ ಖಂಡಿಸಿ ಕಾಶ್ಮೀರಿ ಪಂಡಿತರ ಪ್ರತಿಭಟನೆ, ಆಶ್ರುವಾಯು ಪ್ರಯೋಗ
ಕೇಂದ್ರಾಡಳಿತ ಪ್ರದೇಶ ಜಮ್ಮು-ಕಾಶ್ಮೀರದ ಚದೂರ ತಹಸಲ್ ಕಚೇರಿಯ ನೌಕರ ರಾಹುಲ್ ಭಟ್ ಹತ್ಯೆಯನ್ನು ಖಂಡಿಸಿ, ಕಾಶ್ಮೀರಿ ಪಂಡಿತರು ಬುದ್ಗಾಮ್ ಸೇರಿದಂತೆ ವಿವಿಧೆಡೆ ಪ್ರತಿಭಟನೆ ನಡೆಸುತ್ತಿದ್ದು, ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಆಶ್ರುವಾಯು ಸಿಡಿಸಿದ್ದಾರೆ.
Published: 13th May 2022 11:33 AM | Last Updated: 13th May 2022 11:42 AM | A+A A-

ಕಾಶ್ಮೀರ ಪಂಡಿತರ ಪ್ರತಿಭಟನೆ
ಜಮ್ಮು-ಕಾಶ್ಮೀರ: ಕೇಂದ್ರಾಡಳಿತ ಪ್ರದೇಶ ಜಮ್ಮು-ಕಾಶ್ಮೀರದ ಚದೂರ ತಹಸಲ್ ಕಚೇರಿಯ ನೌಕರ ರಾಹುಲ್ ಭಟ್ ಹತ್ಯೆಯನ್ನು ಖಂಡಿಸಿ, ಕಾಶ್ಮೀರಿ ಪಂಡಿತರು ಬುದ್ಗಾಮ್ ಸೇರಿದಂತೆ ವಿವಿಧೆಡೆ ಪ್ರತಿಭಟನೆ ನಡೆಸುತ್ತಿದ್ದು, ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಆಶ್ರುವಾಯು ಸಿಡಿಸಿದ್ದಾರೆ.
#WATCH Police fire tear gas shells at protestors to prevent them from moving towards the Airport Road in Budgam during their protest demonstration against the recent killings of Kashmiri Pandits in the Union Territory pic.twitter.com/EPHvomqH9j
— ANI (@ANI) May 13, 2022
ಕಾಶ್ಮೀರಿ ಪಂಡಿತ್ ನೌಕರರ ಸಂಘ ಕೂಡಾ ಅನಂತ್ ನಾಗ್ ನಲ್ಲಿ ಪ್ರತಿಭಟನೆ ನಡೆಸಿ, ಉಗ್ರರಿಂದ ಹತ್ಯೆಗೀಡಾದ ರಾಹುಲ್ ಭಟ್ ಸಾವಿಗೆ ನ್ಯಾಯಕ್ಕಾಗಿ ಒತ್ತಾಯಿಸಿದರು. ನಮಗೆ ಎಲ್ಲಿ ಬೇಕು ಅನಿಸುತ್ತದೆಯೋ ಅಲ್ಲಿ ಪುನರ್ವಸತಿ ಕಲ್ಪಿಸಲು ನಾವು ಸರ್ಕಾರವನ್ನು ಕೇಳುತ್ತೇವೆ ಎಂದು ಸಂಘದ ಸದಸ್ಯ ಸಂದೀಪ್ ಭಟ್ ಹೇಳಿದರು.
#WATCH Government employees and families of Kashmiri Pandits living in the Kashmir Valley protest against the LG administration over the targeted killing of Kashmiri Pandit govt employee Rahut Bhat, in Budgam pic.twitter.com/8XXClAypai
— ANI (@ANI) May 13, 2022
ಲೆಫ್ಟಿನೆಂಟ್ ಜನರಲ್ ಆಡಳಿತ ನಮಗೆ ರಕ್ಷಣೆ ಒದಗಿಸಬೇಕು, ಇಲ್ಲದಿದ್ದರೆ ನಾವು ಸಾಮೂಹಿಕ ರಾಜೀನಾಮೆ ನೀಡಬೇಕಾಗುತ್ತದೆ ಎಂದು ಕಾಶ್ಮೀರಿ ಪಂಡಿತ್ ನೌಕರ ಅಮಿತ್ ಎಚ್ಚರಿಕೆ ನೀಡಿದರು.