ಜೈಪುರ: ಉದಯಪುರದಲ್ಲಿ ಇಂದಿನಿಂದ ಮೂರು ದಿನ 'ಕಾಂಗ್ರೆಸ್ ನವ ಸಂಕಲ್ಪ ಶಿಬಿರ
ಇಂದಿನಿಂದ ಉದಯಪುರದಲ್ಲಿ ಮೂರು ದಿನ ನವ ಸಂಕಲ್ಪ ಶಿಬಿರ ಆರಂಭವಾಗಲಿದ್ದು, ದೇಶದ ವಿವಿಧ ಭಾಗಗಳಿಂದ ಕಾಂಗ್ರೆಸ್ ಮುಖಂಡರು ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ. ಕಾಂಗ್ರೆಸ್ ಶಿಬಿರ ಹಿನ್ನೆಲೆಯಲ್ಲಿ ನಗರೆದೆಲ್ಲೆಡೆ ಕಾಂಗ್ರೆಸ್ ಧ್ವಜಗಳು, ಬ್ಯಾನರ್ ಗಳು, ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರ ಭಾವಚಿತ್ರಗಳು ರಾರಾಜಿಸುತ್ತಿವೆ.
Published: 13th May 2022 08:13 AM | Last Updated: 13th May 2022 08:21 AM | A+A A-

ಸಾಂದರ್ಭಿಕ ಚಿತ್ರ
ಜೈಪುರ: ಇಂದಿನಿಂದ ಉದಯಪುರದಲ್ಲಿ ಮೂರು ದಿನ ನವ ಸಂಕಲ್ಪ ಶಿಬಿರ ಆರಂಭವಾಗಲಿದ್ದು, ದೇಶದ ವಿವಿಧ ಭಾಗಗಳಿಂದ ಕಾಂಗ್ರೆಸ್ ಮುಖಂಡರು ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ. ಕಾಂಗ್ರೆಸ್ ಶಿಬಿರ ಹಿನ್ನೆಲೆಯಲ್ಲಿ ನಗರೆದೆಲ್ಲೆಡೆ ಕಾಂಗ್ರೆಸ್ ಧ್ವಜಗಳು, ಬ್ಯಾನರ್ ಗಳು, ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರ ಭಾವಚಿತ್ರಗಳು ರಾರಾಜಿಸುತ್ತಿವೆ.
ಪ್ರವಾಸಿ ನಗರದಲ್ಲಿ ಕಾಂಗ್ರೆಸ್ ಮುಖಂಡರ ಬೃಹತ್ ಹೋರ್ಡಿಂಗ್ಸ್ ಗಳು, ಫ್ಲೆಕ್ಸ್ ಗಳು ಕಂಡುಬರುತ್ತಿವೆ. ಬುಧವಾರ ಸಂಜೆ ಶಿಬಿರ ನಡೆಯಲಿರುವ ತಾಜ್ ಅರವಲ್ಲಿಗೆ ತೆರಳಿದ್ದ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಪೂರ್ವಭಾವಿ ಸಿದ್ಧತೆ ಕುರಿತು ಪರಿಶೀಲನೆ ನಡೆಸಿದ್ದರು.
ಇದನ್ನೂ ಓದಿ: ನನಗೆ ಕಾಂಗ್ರೆಸ್ ನಲ್ಲಿ ಅವಕಾಶ ನೀಡಿದ್ದು ರಾಹುಲ್ ಗಾಂಧಿ; ನನ್ನ ವಿರುದ್ಧ 8 ಕೋಟಿ ರೂ. ವಂಚನೆ ಆರೋಪ ಸುಳ್ಳು': ಮತ್ತೆ ಸಿಡಿದೆದ್ದ ರಮ್ಯಾ
ಮಧ್ಯಾಹ್ನ 12 ಗಂಟೆಗೆ ನವ ಸಂಕಲ್ಪ ಶಿಬಿರ ಆರಂಭವಾಗಲಿದ್ದು, ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಉದ್ಘಾಟನಾ ಭಾಷಣ ಮಾಡಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಆರು ಸಮಿತಿಗಳ ಸಮನ್ವಯಕಾರರ ಸಭೆ ನಡೆಯಲಿದೆ. ನಾಳೆ ಸಮಿತಿ ಚರ್ಚೆ ನಡೆಯಲಿದ್ದು, ರಾತ್ರಿ 8 ಗಂಟೆಯವರೆಗೂ ಗುಂಪು ಚರ್ಚೆ ನಡೆಯಲಿದೆ.
ಕಾಂಗ್ರೆಸ್ ಪಕ್ಷದ ಭವಿಷ್ಯದ ಕುರಿತ ಚಿಂತನ ಮಂಥನ ಶಿಬಿರದಲ್ಲಿ ನಡೆಯಲಿರುವ ಸಮಾಲೋಚನೆಯ ಮಾಹಿತಿ ಹೋಗುವುದನ್ನು ಖಚಿತಪಡಿಸಿಕೊಳ್ಳಲು ಪಕ್ಷವು ಎಲ್ಲಾ ಪ್ರತಿನಿಧಿಗಳಿಗೆ ನಿರ್ದೇಶನಗಳನ್ನು ನೀಡಿದೆ. ಕೆಲ ದಿನಗಳ ಹಿಂದೆ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಸಭೆಯಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಈ ವಿಚಾರವನ್ನು ಪ್ರಸ್ತಾಪಿಸಿದ್ದರು.
ತಮ್ಮ ಮೊಬೈಲ್ ಫೋನ್ಗಳನ್ನು ಸ್ಥಳದೊಳಗೆ ಕೊಂಡೊಯ್ಯಲು ಅನುಮತಿಸುವುದಿಲ್ಲ ಎಂದು ಪಕ್ಷವು ಎಲ್ಲಾ ಪ್ರತಿನಿಧಿಗಳಿಗೆ ತಿಳಿಸಿದೆ. ಈ ಹಿಂದೆ ನಡೆದ ಸಿಡಬ್ಲ್ಯೂ ಸಭೆಗಳ ವಿವರಗಳನ್ನು ಮಾಧ್ಯಮಗಳು ತಕ್ಷಣವೇ ಫ್ಲ್ಯಾಶ್ ಮಾಡಿದ ಕಾರಣ ಈ ಕ್ರಮ ಕೈಗೊಳ್ಳಲಾಗಿದೆ.