ವಾರಾಣಸಿ: ವಿವಾದಿತ 'ಜ್ಞಾನವಾಪಿ ಮಸೀದಿ' ಸಮೀಕ್ಷೆ ಕಾರ್ಯ ಬಿಗಿ ಭದ್ರತೆ ನಡುವೆ ಮುಂದುವರಿಕೆ
ವಿವಾದಿತ ಜ್ಞಾನವಾಪಿ ಮಸೀದಿಯ ವಿಡಿಯೋಗ್ರಫಿ ಸಮೀಕ್ಷೆ ಕಾರ್ಯ ಇಂದು ಕೂಡಾ ಭಿಗಿ ಭದ್ರತೆ ನಡುವೆ ಮುಂದುವರೆದಿದೆ. ಇದುವರೆಗೂ ಇಲ್ಲಿನ ಎರಡು ನೆಲಮಾಳಿಗೆಗಳ ಸಮೀಕ್ಷೆ ಕಾರ್ಯ ಪೂರ್ಣಗೊಂಡಿದೆ.
Published: 14th May 2022 11:55 AM | Last Updated: 14th May 2022 12:05 PM | A+A A-

ಜ್ಞಾನವಾಪಿ ಮಸೀದಿ
ವಾರಾಣಸಿ: ವಿವಾದಿತ ಜ್ಞಾನವಾಪಿ ಮಸೀದಿಯ ವಿಡಿಯೋಗ್ರಫಿ ಸಮೀಕ್ಷೆ ಕಾರ್ಯ ಇಂದು ಕೂಡಾ ಭಿಗಿ ಭದ್ರತೆ ನಡುವೆ ಮುಂದುವರೆದಿದೆ. ಇದುವರೆಗೂ ಇಲ್ಲಿನ ಎರಡು ನೆಲಮಾಳಿಗೆಗಳ ಸಮೀಕ್ಷೆ ಕಾರ್ಯ ಪೂರ್ಣಗೊಂಡಿದೆ.
ನ್ಯಾಯಾಲಯ ಸೂಚಿಸಿದ ಸಮೀಕ್ಷಾ ಸಮಿತಿ ತನ್ನ ಕಾರ್ಯ ಮುಂದುವರೆಸಲು ಮಸೀದಿ ಸಮಿತಿ ಸಹಕಾರ ನೀಡಿದೆ. ಇಂದು ಬೆಳಗ್ಗೆ ಸಮೀಕ್ಷೆ ಆರಂಭಿಸಿದ ಸಮಿತಿ ಜ್ಞಾನವಾಪಿ- ಗೌರಿ ಶಂಗಾರ್ ಸಂಕೀರ್ಣದಲ್ಲಿ ಎರಡು ನೆಲಮಾಳಿಗೆಗಳ ವಿಡಿಯೋ ಚಿತ್ರೀಕರಣ ಮಾಡಿದೆ.
UP Police make elaborate security arrangements near Gyanvapi mosque in Varanasi
— ANI Digital (@ani_digital) May 14, 2022
Read @ANI Story | https://t.co/q0xuW1e55B#GyanvapiMasjid #GyanvapiMosqueSurvey #GyanvapiSurvey #KashiVishwanathTemple #Varanasi #UPPolice pic.twitter.com/DRCm5UYitS
ನೆಲಮಾಳಿಗೆಯಲ್ಲಿರುವ ಮೂರು ಕೊಠಡಿಗಳು ಮುಸ್ಲಿಮರ ಪಾಲಿಗೆ ಸೇರಿದ್ದು, ಅವುಗಳಿಗೆ ಬೀಗ ಹಾಕಲಾಗಿತ್ತು. ಮಸೀದಿ ಆಡಳಿತ ಸಮಿತಿಯವರು ಮುಚ್ಚಿದ ಕೊಠಡಿಗಳನ್ನು ತೆರೆದು ಸಮೀಕ್ಷೆ ಕೈಗೊಳ್ಳಲು ಅನುವು ಮಾಡಿಕೊಟ್ಟರು. ನಾಲ್ಕನೇ ಕೊಠಡಿ ಹಿಂದೂಗಳ ಪಾಲಿಗೆ ಸೇರಿದ್ದು, ಬಾಗಿಲು ಇಲ್ಲದ ಕಾರಣ ಅಡೆತಡೆಯಿಲ್ಲದೆ ಸರ್ವೆ ನಡೆದಿದೆ.