ಗೋಧಿ ರಫ್ತು ನಿಷೇಧ, ಕೇಂದ್ರ ಸರ್ಕಾರದಿಂದ ರೈತ ವಿರೋಧಿ ನಡೆ- ಕಾಂಗ್ರೆಸ್ ಟೀಕೆ
ಗೋಧಿ ರಫ್ತು ನಿಷೇಧಿಸಿರುವ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಶನಿವಾರ ವಾಗ್ದಾಳಿ ನಡೆಸಿದೆ. ಇದು ರೈತ ವಿರೋಧಿ ನಡೆಯಾಗಿದೆ. ಈ ಮೂಲಕ ರಫ್ತಿನಿಂದ ಸಿಗುವ ಹೆಚ್ಚುವರಿ ಬೆಲೆಯ ಪ್ರಯೋಜನ ರೈತರಿಗೆ ಸಿಗದಂತೆ ಮಾಡಲಾಗಿದೆ ಎಂದು ಟೀಕಿಸಿದೆ.
Published: 14th May 2022 01:29 PM | Last Updated: 14th May 2022 01:31 PM | A+A A-

ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ ಮತ್ತಿತರರು
ಉದಯಪುರ: ಗೋಧಿ ರಫ್ತು ನಿಷೇಧಿಸಿರುವ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಶನಿವಾರ ವಾಗ್ದಾಳಿ ನಡೆಸಿದೆ. ಇದು ರೈತ ವಿರೋಧಿ ನಡೆಯಾಗಿದೆ. ಈ ಮೂಲಕ ರಫ್ತಿನಿಂದ ಸಿಗುವ ಹೆಚ್ಚುವರಿ ಬೆಲೆಯ ಪ್ರಯೋಜನ ರೈತರಿಗೆ ಸಿಗದಂತೆ ಮಾಡಲಾಗಿದೆ ಎಂದು ಟೀಕಿಸಿದೆ.
ಅಧಿಕೃತ ನೋಟಿಫಿಕೇಷನ್ ಪ್ರಕಾರ, ದೇಶದಲ್ಲಿ ದರ ಏರಿಕೆ ತಡೆಯಲು ಗೋಧಿ ರಫ್ತನ್ನು ನಿಷೇಧಿಸಿ ಕೇಂದ್ರ ಸರ್ಕಾರ ಶುಕ್ರವಾರ ಅಧಿಸೂಚನೆ ಹೊರಡಿಸಿದೆ.
ಇದನ್ನೂ ಓದಿ: ಆರ್ಥಿಕ ಸ್ಥಿತಿ ತೀವ್ರ ಕಳವಳಕ್ಕೆ ಕಾರಣವಾಗಿದೆ: ಮೋದಿ ಸರ್ಕಾರದ ವಿರುದ್ಧ ಚಿದಂಬರಂ ವಾಗ್ದಾಳಿ
ಈ ಬಗ್ಗೆ ರಾಜಸ್ಥಾನದ ಉದಯಪುರದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಚಿಂತನಾ ಶಿಬಿರದ ಎರಡನೇ ದಿನವಾದ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಿ. ಚಿದಂಬರಂ, ಕೇಂದ್ರ ಸರ್ಕಾರ ಸಾಕಷ್ಟು ಪ್ರಮಾಣದಲ್ಲಿ ಗೋಧಿ ಸಂಗ್ರಹಿಸುವಲ್ಲಿ ವಿಫಲವಾಗಿರುವುದೇ ಇದಕ್ಕೆ ಕಾರಣ ಅಂದುಕೊಳ್ಳುತ್ತೇನೆ. ಗೋಧಿ ಉತ್ಪಾದನೆ ಕಡಿಮೆಯಾಗಿಲ್ಲ, ಸ್ವಲ್ಪ ಹೆಚ್ಚು ಅಥವಾ ಕಡಿಮೆ ಆಗಿರಬಹುದು. ವಾಸ್ತವವಾಗಿ ಸ್ವಲ್ಪ ಹೆಚ್ಚಾಗಿರಬಹುದು ಎಂದರು.
ಒಂದು ವೇಳೆ ಖರೀದಿ ನಡೆದಿದ್ದರೆ ಗೋಧಿ ರಫ್ತು ನಿಷೇಧಿಸುವ ಅಗತ್ಯವೇ ಇರಲಿಲ್ಲ, ಆದರೆ, ಗೋಧಿ ರಫ್ತು ನಿಷೇಧವು ರೈತ ವಿರೋಧಿ ಕ್ರಮವಾಗಿದೆ. ಇದರಲ್ಲಿ ಏನೂ ಆಶ್ಚರ್ಯವಿಲ್ಲ, ಈ ಸರ್ಕಾರ ಯಾವತ್ತೂ ಕೂಡಾ ರೈತರೊಂದಿಗೆ ಸ್ನೇಹಪರವಾಗಿಲ್ಲ ಎಂದು ಪಿ.ಚಿದಂಬರಂ ಹೇಳಿದರು.