ಆರ್ಥಿಕ ಸ್ಥಿತಿ ತೀವ್ರ ಕಳವಳಕ್ಕೆ ಕಾರಣವಾಗಿದೆ: ಮೋದಿ ಸರ್ಕಾರದ ವಿರುದ್ಧ ಚಿದಂಬರಂ ವಾಗ್ದಾಳಿ
ದೇಶದ ಆರ್ಥಿಕತೆಯ ಸ್ಥಿತಿಯು ತೀವ್ರ ಕಳವಳಕ್ಕೆ" ಕಾರಣವಾಗಿದೆ ಎಂದು ಪ್ರತಿಪಾದಿಸಿರುವ ಹಿರಿಯ ಕಾಂಗ್ರೆಸ್ ಮುಖಂಡ ಪಿ. ಚಿದಂಬರಂ, ಜಾಗತಿಕ ಮತ್ತು ದೇಶೀಯ ಬೆಳವಣಿಗೆಗಳನ್ನು ಗಣನೆಗೆ ತೆಗೆದುಕೊಂಡು, ಆರ್ಥಿಕ ನೀತಿಗಳ ಮರುಹೊಂದಿಕೆಯನ್ನು ಆಲೋಚಿಸುವುದು ಅಗತ್ಯವಾಗಬಹುದು ಎಂದು ಶನಿವಾರ ಹೇಳಿದ್ದಾರೆ
Published: 14th May 2022 11:30 AM | Last Updated: 14th May 2022 11:40 AM | A+A A-

ಪಿ. ಚಿದಂಬರಂ
ಉದಯಪುರ: ದೇಶದ ಆರ್ಥಿಕತೆಯ ಸ್ಥಿತಿಯು ತೀವ್ರ ಕಳವಳಕ್ಕೆ" ಕಾರಣವಾಗಿದೆ ಎಂದು ಪ್ರತಿಪಾದಿಸಿರುವ ಹಿರಿಯ ಕಾಂಗ್ರೆಸ್ ಮುಖಂಡ ಪಿ. ಚಿದಂಬರಂ, ಜಾಗತಿಕ ಮತ್ತು ದೇಶೀಯ ಬೆಳವಣಿಗೆಗಳನ್ನು ಗಣನೆಗೆ ತೆಗೆದುಕೊಂಡು, ಆರ್ಥಿಕ ನೀತಿಗಳ ಮರುಹೊಂದಿಕೆಯನ್ನು ಆಲೋಚಿಸುವುದು ಅಗತ್ಯವಾಗಬಹುದು ಎಂದು ಶನಿವಾರ ಹೇಳಿದ್ದಾರೆ.
ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಚಿದಂಬರಂ, ಕಳೆದ ಎಂಟು ವರ್ಷಗಳಲ್ಲಿ ನಿಧಾನಗತಿಯ ಬೆಳವಣಿಗೆಯು ಪ್ರಸ್ತುತ ಸರ್ಕಾರದ ಹಾಲ್ಮಾರ್ಕ್ ಆಗಿದೆ ಮತ್ತು ಸಾಂಕ್ರಾಮಿಕ ನಂತರದ ಚೇತರಿಕೆಯು ಅಲಸ್ಯ ಹಾಗೂ ಸ್ಥಗಿತಗೊಂಡಿದೆ ಎಂದರು.
ಇದನ್ನೂ ಓದಿ: ಉದಯಪುರ: ಮೋದಿ ಮಾಧ್ಯಮಗಳ ಮುಂದೆ ಬರದಿರುವುದು ಅರ್ಥವಾಗುತ್ತಿಲ್ಲ- ಖರ್ಗೆ
ಮೂರು ದಿನಗಳ 'ಚಿಂತನ ಶಿಬಿರದಲ್ಲಿ ಚರ್ಚೆ ನಡೆಸಲು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ರಚಿಸಿರುವ ಆರ್ಥಿಕತೆಯ ಸಮಿತಿಯ ಮುಖ್ಯಸ್ಥರಾಗಿರುವ ಚಿದಂಬರಂ, ಕೇಂದ್ರ ಮತ್ತು ರಾಜ್ಯಗಳ ನಡುವಿನ ಹಣಕಾಸಿನ ಸಂಬಂಧಗಳ ಸಮಗ್ರ ಪರಿಶೀಲನೆಗೆ ಸಮಯ ಪಕ್ವವಾಗಿದೆ ಎಂದು ಹೇಳಿದರು.
2017 ರಲ್ಲಿ ಮೋದಿ ಸರ್ಕಾರವು ತಂದ ಕಳಪೆ ಕರಡು ಮತ್ತು ಅನ್ಯಾಯದ ಜಿಎಸ್ಟಿ ಕಾನೂನುಗಳ ಪರಿಣಾಮಗಳನ್ನು ಎಲ್ಲರೂ ನೋಡುತ್ತಿದ್ದಾರೆ. 10 ವರ್ಷಗಳ ಅವಧಿಯಲ್ಲಿ ಸಂಪತ್ತು ಸೃಷ್ಟಿ, ಉದ್ಯೋಗ ಸೃಷ್ಟಿ, ಬಡವರನ್ನು ಬಡತನದಿಂದ ಮೇಲಕ್ಕೆತ್ತುವ ಯಾವುದೇ ಕೆಲಸಗಳು ಆಗಿಲ್ಲ, "30 ವರ್ಷಗಳ ನಂತರ, ಜಾಗತಿಕ ಮತ್ತು ದೇಶೀಯ ಬೆಳವಣಿಗೆಗಳನ್ನು ಗಣನೆಗೆ ತೆಗೆದುಕೊಂಡು, ಆರ್ಥಿಕ ನೀತಿಗಳ ಮರುಹೊಂದಿಕೆಯನ್ನು ಆಲೋಚಿಸುವುದು ಅಗತ್ಯವಾಗಬಹುದು ಎಂದು ಚಿದಂಬರಂ ಹೇಳಿದರು.