ನಕಲಿ ಹಿಂದುತ್ವ ಪಕ್ಷ ದೇಶವನ್ನು ದಾರಿತಪ್ಪಿಸುತ್ತಿದೆ: ಬಿಜೆಪಿ ವಿರುದ್ಧ ಉದ್ಧವ್ ಠಾಕ್ರೆ ವಾಗ್ದಾಳಿ
ನಕಲಿ ಹಿಂದುತ್ವ ಪಕ್ಷವೊಂದು ದೇಶದ ಜನತೆಯ ದಾರಿ ತಪ್ಪಿಸುತ್ತಿದೆ ಎಂದು ಮಹಾರಾಷ್ಟ್ರ ಸಿಎಂ ಹಾಗೂ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
Published: 15th May 2022 01:25 AM | Last Updated: 15th May 2022 01:28 AM | A+A A-

ಉದ್ಧವ್ ಠಾಕ್ರೆ
ಮುಂಬೈ: ನಕಲಿ ಹಿಂದುತ್ವ ಪಕ್ಷವೊಂದು ದೇಶದ ಜನತೆಯ ದಾರಿ ತಪ್ಪಿಸುತ್ತಿದೆ ಎಂದು ಮಹಾರಾಷ್ಟ್ರ ಸಿಎಂ ಹಾಗೂ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್ ನಲ್ಲಿ ನಡೆದ ಬೃಹತ್ ರ್ಯಾಲಿಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಉದ್ಧವ್ ಠಾಕ್ರೆ, ದೇಶವನ್ನು ದಾರಿ ತಪ್ಪಿಸುವ ನಕಲಿ ಹಿಂದುತ್ವ ಪಕ್ಷವಿದೆ. ದೇವೇಂದ್ರ ಫಡ್ನವಿಸ್ (ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ) ಅವರು ಹಿಂದುತ್ವದ ಬಗ್ಗೆ ಮಾತನಾಡುತ್ತಿದ್ದರು. ನಾವು ನಿಮ್ಮನ್ನು ಅಧಿಕಾರದಿಂದ ಹೊರಹಾಕಿದ್ದೇವೆ. ಅವರು ತಮ್ಮನ್ನು ಹಿಂದುತ್ವದ ರಕ್ಷಕರು ಎಂದು ಭಾವಿಸುತ್ತಾರೆ. ಹಾಗಾದರೆ ಇಲ್ಲಿನ ಜನರ ಬಗ್ಗೆ ಏನು? ಅವರು ಯಾರು? ಎಂದು ಪ್ರಶ್ನಿಸಿದರು.
Our 'Hindutva' is 'Gadadhari'. Rahul Bhat was killed by terrorists at Tehsil's office in J&K, now what will you (BJP) do? Will you read Hanuman Chalisa there?: Maharashtra Chief Minister Udhav Thackeray in Mumbai pic.twitter.com/WROyxMnAjs
— Economic Times (@EconomicTimes) May 14, 2022
ಶಿವಸೇನೆಯು ಬಾಳಾ ಠಾಕ್ರೆಯವರ ಆದರ್ಶಗಳಿಂದ ದೂರ ಸರಿದಿದೆ ಎಂದು ಬಿಂಬಿಸಲು ಹಲವಾರು ಪ್ರಯತ್ನಗಳನ್ನು ಮಾಡಲಾಗಿದ್ದರೂ, ಪಕ್ಷವು ತನ್ನ ಸಂಸ್ಥಾಪಕ ಬಾಳಾ ಠಾಕ್ರೆಯವರ ಹಾದಿಯಲ್ಲಿ ದೃಢವಾಗಿ ಹೆಜ್ಜೆ ಹಾಕುತ್ತಿದೆ. ನಿಮ್ಮ ಮಾತೃ ಸಂಸ್ಥೆ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಎಂದಿಗೂ ಸ್ವಾತಂತ್ರ್ಯ ಹೋರಾಟದ ಭಾಗವಾಗಿಲ್ಲ. ಆರ್‌ಎಸ್‌ಎಸ್ ಬಿಜೆಪಿಯ ಸೈದ್ಧಾಂತಿಕ ಚಿಲುಮೆಯಾಗಿದೆ ಎಂದು ಉದ್ಧವ್ ಹೇಳಿದರು.
They (BJP) can even give the party ticket to Dawood Ibrahim. The situation is very dangerous in the country. Whom we voted to power and trusted are backstabbing us. During the pandemic, the best work was done by Maharashtra: Chief Minister Udhav Thackeray in Mumbai
— ANI (@ANI) May 14, 2022
ಹಣದುಬ್ಬರದ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ಬಿಜೆಪಿ ಜೊತೆಗಿನ ಮೈತ್ರಿಯಿಂದಾಗಿ ನಾವು ನಮ್ಮ 25 ವರ್ಷಗಳನ್ನು ವ್ಯರ್ಥ ಮಾಡಿದ್ದೇವೆ, ಅವರು ಕೆಟ್ಟವರು. ಈ ಹಿಂದೆ ನಮ್ಮೊಂದಿಗಿದ್ದ ನಕಲಿ ಹಿಂದುತ್ವ ಪಕ್ಷ ದೇಶವನ್ನು ನರಕಕ್ಕೆ ಕೊಂಡೊಯ್ದಿದೆ ಎಂದು ಹೇಳಿದರು.
ಕಾಶ್ಮೀರ ಪಂಡಿತ್ ಹತ್ಯೆ ವಿಚಾರವಾಗಿ ಮಾತನಾಡಿದ ಉದ್ಧವ್ ಠಾಕ್ರೆ, ರಾಹುಲ್ ಭಟ್ (ಕಾಶ್ಮೀರಿ ಪಂಡಿತ್) ಅವರನ್ನು ಸರ್ಕಾರಿ ಕಚೇರಿಯಲ್ಲಿ ಕೊಲ್ಲಲಾಯಿತು. ಉಗ್ರಗಾಮಿಗಳು ಬಂದು ಅವರನ್ನು ಕೊಂದರು. ನೀವು ಅಲ್ಲಿ ಹನುಮಾನ್ ಚಾಲೀಸಾವನ್ನು ಓದುತ್ತೀರಾ?”. ನಾವು ಕಾಂಗ್ರೆಸ್ ಜೊತೆ ಹೋದೆವು ಎಂದು ಅವರು ಹೇಳುತ್ತಾರೆ, ನಾವು ಬಹಿರಂಗವಾಗಿ/s ಹೋದೆವು, ನಿಮ್ಮ ಬೆಳಿಗ್ಗೆ ಪ್ರಮಾಣ ವಚನದ ಬಗ್ಗೆ ಏನು? ಹೌದು, ನಾವು ಎನ್ಸಿಪಿ ಜೊತೆ ಹೋಗಿದ್ದೇವೆ. ಅವರು ನಿಮ್ಮೊಂದಿಗಿದ್ದರೆ, ನೀವು ನವಾಬ್ ಮಲಿಕ್ ಅವರಂತಹವರನ್ನು ಹಾಡಿ ಹೊಗಳುತ್ತೀರಿ. ಬೋಗಸ್ ಹಿಂದುತ್ವದ ಬಿಜೆಪಿ ಮೆಹಬೂಬಾ ಮುಫ್ತಿ ಜೊತೆ ಮೈತ್ರಿ ಮಾಡಿಕೊಂಡಿತ್ತು ಎಂದು ಠಾಕ್ರೆ ವಾಗ್ದಾಳಿ ನಡೆಸಿದರು.
I'm warning you, if you will use central agencies to register false cases & trouble my people then we will not keep quiet, a befitting reply will be given, and none of you will be spared: Maharashtra Chief Minister Udhav Thackeray in Mumbai on Rana couple & Raj Thackeray
— ANI (@ANI) May 14, 2022
ಎನ್‌ಸಿಪಿ ನಾಯಕ ಮತ್ತು ಮಹಾರಾಷ್ಟ್ರ ಸರ್ಕಾರದ ಸಚಿವ ನವಾಬ್ ಮಲಿಕ್ ಅವರನ್ನು ಫೆಬ್ರವರಿ 23 ರಂದು ಜಾರಿ ನಿರ್ದೇಶನಾಲಯವು ಪರಾರಿಯಾದ ದರೋಡೆಕೋರ ದಾವೂದ್ ಇಬ್ರಾಹಿಂ ಮತ್ತು ಆತನ ಸಹಾಯಕರ ಚಟುವಟಿಕೆಗಳಿಗೆ ಸಂಬಂಧಿಸಿದ ಹಣ ವರ್ಗಾವಣೆ ತನಿಖೆಯಲ್ಲಿ ಬಂಧಿಸಿತ್ತು.