ಶರದ್ ಪವಾರ್ ವಿರುದ್ಧ ಅವಹೇಳನಕಾರಿ ಪೋಸ್ಟ್: ಮರಾಠಿ ನಟಿ ಚಿತಳೆ ಮೇ 18ರ ವರೆಗೆ ಪೊಲೀಸ್ ಕಸ್ಟಡಿಗೆ
ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಪೋಸ್ಟ್ ಶೇರ್ ಮಾಡಿದ ಆರೋಪದ ಮೇಲೆ ಶನಿವಾರ ಬಂಧನಕ್ಕೊಳಗಾಗಿರುವ ಮರಾಠಿ ನಟಿ ಕೇತಕಿ ಚಿತಳೆ...
Published: 15th May 2022 01:25 PM | Last Updated: 15th May 2022 01:25 PM | A+A A-

ನಟಿ ಕೇತಕಿ ಚಿತಳೆ
ಮುಂಬೈ: ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಪೋಸ್ಟ್ ಶೇರ್ ಮಾಡಿದ ಆರೋಪದ ಮೇಲೆ ಶನಿವಾರ ಬಂಧನಕ್ಕೊಳಗಾಗಿರುವ ಮರಾಠಿ ನಟಿ ಕೇತಕಿ ಚಿತಳೆ ಅವರನ್ನ ಕೋರ್ಟ್ ಮೇ 18 ವರೆಗೆ ಪೊಲೀಸ್ ಕಸ್ಟಡಿಗೆ ನೀಡಿದೆ.
ಬಂಧಿತ ನಟಿಯನ್ನು ಪೊಲೀಸರು ಇಂದು ಠಾಣೆ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ವಿಚಾರಣೆ ನಡೆಸಿದ ಕೋರ್ಟ್ ಆರೋಪಿಯನ್ನು ಮೇ 18ರ ವರೆಗೆ ಪೊಲೀಸ್ ವಶಕ್ಕೆ ನೀಡಿ ಆದೇಶಿಸಿದೆ.
ಇದನ್ನು ಓದಿ: ಶರದ್ ಪವಾರ್ ವಿರುದ್ಧದ ಫೇಸ್ ಬುಕ್ ಪೋಸ್ಟ್; ಮರಾಠಿ ನಟಿ ಬಂಧನ
ಶರದ್ ಪವಾರ್ ವಿರುದ್ಧದ ಬೇರೊಬ್ಬರ ಪೋಸ್ಟ್ ಅನ್ನ ನಟಿ ಕೇತಕಿ ಚಿತಳೆ ಅವರು ಶುಕ್ರವಾರ ಶೇರ್ ಮಾಡಿಕೊಂಡಿದ್ದರು. ಈ ಪೋಸ್ಟ್ ನಲ್ಲಿ ಪವಾರ್ ಎಂಬ ಉಪನಾಮ ಮತ್ತು ಎನ್ಸಿಪಿ ಮುಖ್ಯಸ್ಥರಿಗೆ 81 ವರ್ಷ ಎಂದು ಉಲ್ಲೇಖಿಸಲಾಗಿತ್ತು.
ಪೋಸ್ಟ್ನಲ್ಲಿ “ನರಕ ಕಾಯುತ್ತಿದೆ” ಮತ್ತು “ನೀವು ಬ್ರಾಹ್ಮಣರನ್ನು ದ್ವೇಷಿಸುತ್ತೀರಿ” ಎಂಬ ಪದಗಳನ್ನು ಹೊಂದಿದ್ದು, ಶಿವಸೇನೆ ಮತ್ತು ಕಾಂಗ್ರೆಸ್ನೊಂದಿಗೆ ಮಹಾರಾಷ್ಟ್ರದಲ್ಲಿ ಅಧಿಕಾರವನ್ನು ಹಂಚಿಕೊಂಡಿರುವ ಪವಾರ್ ಅವರನ್ನು ಉಲ್ಲೇಖಿಸಲಾಗಿದೆ.
ಈ ಸಂಬಂಧ ನಟಿ ವಿರುದ್ಧ “ಸ್ವಪ್ನಿಲ್ ನೆಟ್ಕೆ ನೀಡಿದ ದೂರಿನ ಆಧಾರದ ಮೇಲೆ ಶನಿವಾರ ಥಾಣೆಯ ಕಲ್ವಾ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನಟಿ ಕೇತಕಿ ಚಿತಳೆ ಅವರನ್ನು ಥಾಣೆ ಪೊಲೀಸರ ಅಪರಾಧ ವಿಭಾಗದ ಪೊಲೀಸರು ನವಿ ಮುಂಬೈನಲ್ಲಿ ಬಂಧಿಸಿದ್ದರು.