ಲಂಕಾ ಅಧ್ಯಕ್ಷರ ರಾಜೀನಾಮೆಗೆ ಆಗ್ರಹಿಸಿ ನಡೆಯುತ್ತಿರುವ ಪ್ರತಿಭಟನೆಗೆ ಪ್ರಧಾನಿ ವಿಕ್ರಮ ಸಿಂಘೆ ಬೆಂಬಲ!
ಈಗಾಗಲೇ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಲಂಕಾದಲ್ಲಿ ವಿಲಕ್ಷಣ ಬೆಳವಣಿಗೆಯಲ್ಲಿ ಲಂಕಾ ಪ್ರಧಾನಿ ರನಿಲ್ ವಿಕ್ರಮ ಸಿಂಘೆ ರಾಷ್ಟ್ರಾಧ್ಯಕ್ಷರ ರಾಜೀನಾಮೆಗೆ ಆಗ್ರಹಿಸಿ ನಡೆಯುತ್ತಿರುವ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ.
Published: 15th May 2022 03:00 PM | Last Updated: 16th May 2022 01:28 PM | A+A A-

ಲಂಕಾ ಪ್ರಧಾನಿ ರನಿಲ್ ವಿಕ್ರಮ ಸಿಂಘೆ
ಕೊಲಂಬೋ: ಈಗಾಗಲೇ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಲಂಕಾದಲ್ಲಿ ವಿಲಕ್ಷಣ ಬೆಳವಣಿಗೆಯಲ್ಲಿ ಲಂಕಾ ಪ್ರಧಾನಿ ರನಿಲ್ ವಿಕ್ರಮ ಸಿಂಘೆ ರಾಷ್ಟ್ರಾಧ್ಯಕ್ಷರ ರಾಜೀನಾಮೆಗೆ ಆಗ್ರಹಿಸಿ ನಡೆಯುತ್ತಿರುವ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ.
ದೇಶದ ಆರ್ಥಿಕ ಬಿಕ್ಕಟ್ಟನ್ನು ಸರಿಯಾಗಿ ನಿಭಾಯಿಸುವಲ್ಲಿ ವಿಫಲರಾದ ರಾಷ್ಟ್ರಾಧ್ಯಕ್ಷ ಗೊಟಾಬಯಾ ರಾಜಪಕ್ಸ ಅವರ ರಾಜೀನಾಮೆಗೆ ಆಗ್ರಹಿಸಿ ಲಂಕಾದಲ್ಲಿ ಪ್ರತಿಭಟನೆಗಳು ತೀವ್ರಗೊಳ್ಳುತ್ತಿವೆ.
ಗೋಟಾ ಗೋ ಹೋಮ್ ಹೆಸರಿನಲ್ಲಿ ನಡೆಯುತ್ತಿರುವ ಈ ಪ್ರತಿಭಟನೆ ಬಗ್ಗೆ ಬಿಬಿಸಿ ಸಿಂಹಳ ಚಾನೆಲ್ ನೊಂದಿಗೆ ಮಾತನಾಡಿರುವ ವಿಕ್ರಮ ಸಿಂಘೆ, ಗೋಟಾ ಗೋ ಹೋಮ್ ಗ್ರಾಮೀಣ ಪ್ರತಿಭಟನಾಕಾರರ ಹಿತಾಸಕ್ತಿಗಳನ್ನು ಗಮನಿಸುವುದಕ್ಕಾಗಿ ಸಮಿತಿಯನ್ನು ನೇಮಕ ಮಾಡಿರುವುದಾಗಿ ತಿಳಿಸಿದ್ದಾರೆ ಹಾಗೂ ದೇಶದ ರಾಜಕೀಯ ವ್ಯವಸ್ಥೆಯನ್ನು ಬದಲಾವಣೆ ಮಾಡಲು ತಾವು ಈ ಪ್ರತಿಭಟನೆಯನ್ನು ಬೆಂಬಲಿಸುವುದಾಗಿ ಹೇಳಿದ್ದು ಈ ಪ್ರತಿಭಟನೆಯ ಮೂಲಕ ಯುವಕರು ದೇಶ ಮುನ್ನಡೆಸುವುದಕ್ಕೆ ಅವಕಾಶ ದೊರೆಯಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಶ್ರೀಲಂಕಾದ ನೂತನ ಪ್ರಧಾನಿಯಾಗಿ ರಾನಿಲ್ ವಿಕ್ರಮಸಿಂಘೆ ನೇಮಕ
ಯುನೈಟೆಡ್ ನ್ಯಾಷನಲ್ ಪಾರ್ಟಿ (ಯುಎನ್ ಪಿ)ಯ ನಾಯಕನಾಗಿರುವ ವಿಕ್ರಮ ಸಿಂಘೆ ಅವರನ್ನು ಗುರುವಾರ ಪ್ರಧಾನಿಯನ್ನಾಗಿ ನೇಮಕ ಮಾಡಲಾಗಿತ್ತು. ದೇಶದಲ್ಲಿ ಸರ್ಕಾರದ ವಿರುದ್ಧ ಜನತೆ ದಂಗೆ ಎದ್ದ ಹಿನ್ನೆಲೆಯಲ್ಲಿ ಮಹೀಂದ ರಾಜಪಕ್ಸ ಅವರು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ್ದರು.
ರಾಜಪಕ್ಸೆ ಅವರ ಎಸ್ಎಲ್ ಪಿಪಿ ಯ ಸದಸ್ಯರು ವಿಕ್ರಮ ಸಿಂಘೆ ಅವರಿಗೆ ಬೆಂಬಲ ನೀಡಿದ್ದರು ಹಾಗೂ ದೇಶದ ಆರ್ಥಿಕತೆಯನ್ನು ಸರಿದಾರಿಗೆ ತರಲು ವಿಕ್ರಮಸಿಂಘೆ ಸರ್ಕಾರಕ್ಕೆ ಬೆಂಬಲ ನೀಡುವುದಾಗಿ ಎಸ್ಎಲ್ ಪಿಪಿ ಸದಸ್ಯರು ಘೋಷಿಸಿದ್ದರು.