ನೇಪಾಳ-ಭಾರತ ಬಾಂಧವ್ಯ ಮತ್ತಷ್ಟು ಗಾಢವಾಗಲಿದೆ: ಪ್ರಧಾನಿ ಮೋದಿ
ನೇಪಾಳದೊಂದಿಗಿನ ಭಾರತದ ಬಾಂಧವ್ಯ ಅನನ್ಯ. ತಮ್ಮ ನೇಪಾಳ ಭೇಟಿಯು ಪರಸ್ಪರ ಸಂಬಂಧಗಳನ್ನು ಮತ್ತಷ್ಟ ಗಾಢವಾಗಿಸುವ ಗುರಿಯನ್ನು ಹೊಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಇಂದು ಹೇಳಿದ್ದಾರೆ.
Published: 15th May 2022 06:12 PM | Last Updated: 15th May 2022 06:12 PM | A+A A-

ಶೇರ್ ಬಹದ್ದೂರ್ ದೇವುಬಾ-ಪ್ರಧಾನಿ ಮೋದಿ
ನವದೆಹಲಿ: ನೇಪಾಳದೊಂದಿಗಿನ ಭಾರತದ ಬಾಂಧವ್ಯ ಅನನ್ಯ. ತಮ್ಮ ನೇಪಾಳ ಭೇಟಿಯು ಪರಸ್ಪರ ಸಂಬಂಧಗಳನ್ನು ಮತ್ತಷ್ಟ ಗಾಢವಾಗಿಸುವ ಗುರಿಯನ್ನು ಹೊಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಇಂದು ಹೇಳಿದ್ದಾರೆ.
ತಮ್ಮ ಹೇಳಿಕೆಯಲ್ಲಿ ಮೋದಿ ಅವರು, ನೇಪಾಳದೊಂದಿಗಿನ ನಮ್ಮ ಸಂಬಂಧ ಅನನ್ಯವಾಗಿದೆ. ಭಾರತ ಮತ್ತು ನೇಪಾಳದ ನಡುವಿನ ನಾಗರಿಕತೆ ಮತ್ತು ನಮ್ಮ ನಿಕಟ ಸಂಬಂಧಗಳ ಬಲವಾದ ಅಡಿಪಾಯವಾಗಿದೆ. ಶತ ಶತಮಾನಗಳಿಂದಲೂ ಕಾಲದ ಪರೀಕ್ಷೆಯಲ್ಲಿ ನಿಂತಿರುವ ಈ ಬಂಧಗಳನ್ನು ಆಚರಿಸುವುದು ಮತ್ತು ಗಾಢವಾಗಿಸುವುದು ನನ್ನ ಭೇಟಿಯ ಉದ್ದೇಶವಾಗಿದೆ ಎಂದು ತಿಳಿಸಿದ್ದಾರೆ.
ನೇಪಾಳದ ಪ್ರಧಾನಿ ಶೇರ್ ಬಹದ್ದೂರ್ ದೇವುಬಾ ಅವರ ಆಹ್ವಾನದ ಮೇರೆಗೆ ಮೋದಿ ಅವರು ಮೇ 16ರಂದು ಲುಂಬಿನಿಗೆ ಭೇಟಿ ನೀಡಲಿದ್ದಾರೆ. ಬುದ್ಧ ಜಯಂತಿಯ ಶುಭ ಸಂದರ್ಭದಲ್ಲಿ ಮಾಯಾದೇವಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಲು ಉತ್ಸುಕನಾಗಿದ್ದೇನೆ. ಭಗವಾನ್ ಬುದ್ಧನ ಪವಿತ್ರ ಜನ್ಮಸ್ಥಳದಲ್ಲಿ ಲಕ್ಷಾಂತರ ಭಾರತೀಯರು ಗೌರವ ಸಲ್ಲಿಸುವುದಕ್ಕಾಗಿ ನನಗೆ ಗೌರವವಿದೆ.
ಕಳೆದ ತಿಂಗಳು ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಫಲಪ್ರದ ಚರ್ಚೆಯ ನಂತರ ಮತ್ತೊಮ್ಮೆ ದೇವುಬಾ ಅವರನ್ನು ಭೇಟಿ ಮಾಡಲು ಎದುರು ನೋಡುತ್ತಿದ್ದೇನೆ. ಜಲವಿದ್ಯುತ್, ಅಭಿವೃದ್ಧಿ ಮತ್ತು ಸಂಪರ್ಕ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸಹಕಾರವನ್ನು ಮುಂದುವರಿಸುತ್ತೇವೆ ಎಂದು ಹೇಳಿದರು.
ನಾನು ಪವಿತ್ರ ಮಾಯಾದೇವಿ ದೇವಸ್ಥಾನಕ್ಕೆ ಭೇಟಿ ನೀಡುವುದರ ಜೊತೆಗೆ ಲುಂಬಿನಿ ಮಠ ಪ್ರದೇಶದಲ್ಲಿ ಬೌದ್ಧ ಸಂಸ್ಕೃತಿ ಮತ್ತು ಪರಂಪರೆಯ ಭಾರತ ಅಂತರರಾಷ್ಟ್ರೀಯ ಕೇಂದ್ರದ ಶಿಲಾನ್ಯಾಸ ಸಮಾರಂಭದಲ್ಲಿ ಭಾಗವಹಿಸುತ್ತೇನೆ ಎಂದು ಪ್ರಧಾನಿ ಹೇಳಿದರು.
ನೇಪಾಳ ಸರ್ಕಾರ ಆಯೋಜಿಸಿರುವ ಬುದ್ಧ ಜಯಂತಿಯಂದು ಆಯೋಜಿಸಲಾದ ಸಮಾರಂಭದಲ್ಲಿ ಅವರು ಭಾಗವಹಿಸಲಿದ್ದಾರೆ. ನೇಪಾಳ ಸರ್ಕಾರದ ಅಧೀನದಲ್ಲಿ ಲುಂಬಿನಿ ಡೆವಲಪ್ಮೆಂಟ್ ಟ್ರಸ್ಟ್ ಆಯೋಜಿಸಿರುವ ಬುದ್ಧ ಜಯಂತಿ ಕಾರ್ಯಕ್ರಮವನ್ನು ಉದ್ದೇಶಿಸಿ ಮೋದಿ ಮಾತನಾಡಲಿದ್ದಾರೆ.
ಭಾರತದ 'ನೆರೆಹೊರೆ ಮೊದಲು' ನೀತಿಯನ್ನು ಮುಂದಕ್ಕೆ ಕೊಂಡೊಯ್ಯಲು ಭಾರತ ಮತ್ತು ನೇಪಾಳದ ನಡುವಿನ ವಿನಿಮಯದ ಸಂಪ್ರದಾಯವನ್ನು ಮುಂದುವರೆಸುವಲ್ಲಿ ಮೋದಿಯವರ ಭೇಟಿಯು ಮುಂದಿನ ಹಂತವಾಗಿದೆ ಎಂದು ಪ್ರಧಾನಿ ಕಾರ್ಯಾಲಯ ತಿಳಿಸಿದೆ.