ಓವೈಸಿ.. ಕೇಳಿಸಿಕೊಳ್ಳಿ, ನಾಯಿ ಕೂಡ ಔರಂಗಜೇಬನ ಗೋರಿ ಮೇಲೆ ಮೂತ್ರ ಮಾಡಲ್ಲ: ದೇವೇಂದ್ರ ಫಡ್ನವೀಸ್
ಅಸಾದುದ್ದೀನ್ ಓವೈಸಿ ಕೇಳಿಸಿಕೊಳ್ಳಿ, ನಾಯಿ ಕೂಡ ಔರಂಗಜೇಬನ ಗೋರಿ ಮೇಲೆ ಮೂತ್ರ ಮಾಡಲ್ಲ ಎಂದು ಮಹಾರಾಷ್ಟ್ರ ಮಾಜಿ ಸಿಎಂ ಹಾಗೂ ಬಿಜಿಪಿ ನಾಯಕ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ.
Published: 16th May 2022 08:32 PM | Last Updated: 16th May 2022 08:32 PM | A+A A-

ದೇವೇಂದ್ರ ಫಡ್ನವೀಸ್
ಮುಂಬೈ: ಅಸಾದುದ್ದೀನ್ ಓವೈಸಿ ಕೇಳಿಸಿಕೊಳ್ಳಿ, ನಾಯಿ ಕೂಡ ಔರಂಗಜೇಬನ ಗೋರಿ ಮೇಲೆ ಮೂತ್ರ ಮಾಡಲ್ಲ ಎಂದು ಮಹಾರಾಷ್ಟ್ರ ಮಾಜಿ ಸಿಎಂ ಹಾಗೂ ಬಿಜಿಪಿ ನಾಯಕ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ.
ಮುಂಬೈನಲ್ಲಿ ನಡೆದ ಪಕ್ಷದ ಮಹಾಸಂಕಲ್ಪ ಸಭೆಯಲ್ಲಿ ಅವರು ಇತರ ಭಾರತೀಯ ಜನತಾ ಪಕ್ಷದ (ಬಿಜೆಪಿ) ಕಾರ್ಯಕರ್ತರೊಂದಿಗೆ ಹನುಮಾನ್ ಚಾಲೀಸಾವನ್ನು ಪಠಿಸಿದರು. ಬಳಿಕ ಮಾತನಾಡಿದ ಅವರು, 'ಮಹಾ ವಿಕಾಸ್ ಅಘಾಡಿ (ಎಂವಿಎ) ಸರ್ಕಾರವನ್ನು ಬಾಬರಿ ಮಾದರಿಯ ರಚನೆಗೆ ಹೋಲಿಸಿದ್ದು, ಅದನ್ನು ಉರುಳಿಸುವವರೆಗೂ ತಾವು ವಿರಮಿಸುವುದಿಲ್ಲ ಎಂದು ಘೋಷಿಸಿದ್ದಾರೆ.
ಇದನ್ನೂ ಓದಿ: 'ಒಂದು ದೇಶ, ಒಂದೇ ಭಾಷೆ: ಹಿಂದಿಯನ್ನು ರಾಷ್ಟ್ರ ಭಾಷೆಯನ್ನಾಗಿ ಒಪ್ಪಬಹುದು- ಸಂಜಯ್ ರಾವತ್
“ನಾವು ಕೇವಲ ಹನುಮಾನ್ ಚಾಲೀಸಾವನ್ನು ಜಪಿಸಿದ್ದೇವೆ. ಬಾಳಾಸಾಹೇಬ್ ಠಾಕ್ರೆ ಅವರು ತಮ್ಮ ಮಗನ ಆಳ್ವಿಕೆಯಲ್ಲಿ ಹನುಮಾನ್ ಚಾಲೀಸಾವನ್ನು ಓದುವುದು ದೇಶದ್ರೋಹ ಮತ್ತು ಔರಂಗಜೇಬನ ಸಮಾಧಿಗೆ ಭೇಟಿ ನೀಡುವುದು ರಾಜ್ಯದ ಶಿಷ್ಟಾಚಾರ ಎಂದು ಭಾವಿಸಿದ್ದರಾ?” ಎಂದು ಫಡ್ನವಿಸ್ ಪ್ರಶ್ನಿಸಿದರು.
“ಅವರು (ಶಿವಸೇನೆ) ನಿನ್ನೆ ರ್ಯಾಲಿ ನಡೆಸಿ ಅದನ್ನು ಮಾಸ್ಟರ್ ಸಭೆ ಎಂದು ಕರೆದರು. ಆದರೆ ಅದನ್ನು ಕೇಳುವಾಗ ನಮಗದು ನಗೆ ಸಭೆಯಂತಿತ್ತು… ನಿನ್ನೆ ಕೌರವ ಸಭೆ ಮತ್ತು ಇಂದು ಇದು ಪಾಂಡವರ ಸಭೆ” ಎಂದು ದೇವೇಂದ್ರ ಫಡ್ನವೀಸ್, ಉದ್ಧವ್ ಠಾಕ್ರೆ ಅವರ ರ್ಯಾಲಿಯನ್ನು “ನಗು ಪ್ರದರ್ಶನ” ಎಂದು ಬಣ್ಣಿಸಿದರು.
ಇದನ್ನೂ ಓದಿ: ಬಾಬರಿ ಮಸೀದಿಯಂತೆ ಮತ್ತೊಂದು ಮಸೀದಿ ಕಳೆದುಕೊಳ್ಳಲು ನಾನು ಬಯಸುವುದಿಲ್ಲ: ಓವೈಸಿ
ಒವೈಸಿ ವಿರುದ್ಧ ವಾಗ್ದಾಳಿ
ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಮುಖ್ಯಸ್ಥ ಅಸಾದುದ್ದೀನ್ ಓವೈಸಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, “ಅಸಾದುದ್ದೀನ್ ಓವೈಸಿ ಹೋಗಿ ಔರಂಗಜೇಬ್ ಅವರ ಸಮಾಧಿಯ ಮೇಲೆ ಗೌರವ ಸಲ್ಲಿಸುತ್ತಾರೆ ಮತ್ತು ನೀವು ಅದನ್ನು ನೋಡುತ್ತಿರುತ್ತೀರಿ. ನಿಮಗೆ ನಾಚಿಕೆಯಾಗಬೇಕು. ನನ್ನ ಮಾತು ಕೇಳಿಸಿಕೊಳ್ಳಿ ಓವೈಸಿ, ನಾಯಿ ಕೂಡ ಔರಂಗಜೇಬನ ಗುರುತಿನ ಮೇಲೆ ಮೂತ್ರ ಮಾಡಲು ಬಯಸುವುದಿಲ್ಲ. ಹಿಂದೂಸ್ತಾನದಲ್ಲಿ ಕೇಸರಿ ಆಳ್ವಿಕೆ ನಡೆಸುತ್ತದೆ ಎಂದು ತೀವ್ರ ವಾಗ್ದಾಳಿ ನಡೆಸಿದರು.