ಮಥುರಾದ ಶಾಹಿ ಈದ್ಗಾ ವಿಡಿಯೋಗ್ರಫಿಗೆ ಮನವಿ ಸಲ್ಲಿಸಿದ ಅರ್ಜಿ ವಿಚಾರಣೆಗೆ ಕೋರ್ಟ್ ಒಪ್ಪಿಗೆ
ಕಾಶಿಯಲ್ಲಿನ ಜ್ಞಾನವಾಪಿ ಮಸೀದಿಯ ವಿಡಿಯೋಗ್ರಫಿ ಪೂರ್ಣಗೊಳ್ಳುತ್ತಿದ್ದಂತೆಯೇ ಮಥುರಾದ ಶಾಹಿ ಈದ್ಗಾ ಮಸೀದಿಯ ಒಳಭಾಗದಲ್ಲೂ ವಿಡಿಯೋಗ್ರಫಿ ನಡೆಸಬೇಕೆಂಬ ಮನವಿ ಕೇಳಿಬಂದಿದ್ದು, ಈ ಬಗ್ಗೆ ವಿಚಾರಣೆ ನಡೆಸಲು ಮಥುರಾದ ಕೋರ್ಟ್ ಒಪ್ಪಿಗೆ ಸೂಚಿಸಿದೆ.
Published: 17th May 2022 04:51 PM | Last Updated: 17th May 2022 06:12 PM | A+A A-

ಕೃಷ್ಣ ಜನ್ಮಭೂಮಿ- ಶಾಹಿ ಈದ್ಗಾ
ಮಥುರಾ: ಕಾಶಿಯಲ್ಲಿನ ಜ್ಞಾನವಾಪಿ ಮಸೀದಿಯ ವಿಡಿಯೋಗ್ರಫಿ ಪೂರ್ಣಗೊಳ್ಳುತ್ತಿದ್ದಂತೆಯೇ ಮಥುರಾದ ಶಾಹಿ ಈದ್ಗಾ ಮಸೀದಿಯ ಒಳಭಾಗದಲ್ಲೂ ವಿಡಿಯೋಗ್ರಫಿ ನಡೆಸಬೇಕೆಂಬ ಮನವಿ ಕೇಳಿಬಂದಿದ್ದು, ಈ ಬಗ್ಗೆ ವಿಚಾರಣೆ ನಡೆಸಲು ಮಥುರಾದ ಕೋರ್ಟ್ ಒಪ್ಪಿಗೆ ಸೂಚಿಸಿದೆ.
ಶಾಹಿ ಈದ್ಗಾ ಮಸೀದಿ ಕೃಷ್ಣ ಜನ್ಮಭೂಮಿಯ ಪಕ್ಕದಲ್ಲೇ ಇದ್ದು, ಮನೀಷ್ ಯಾದವ್, ಮಹೇಂದ್ರ ಪ್ರತಾಪ್ ಸಿಂಗ್ ಹಾಗೂ ದಿನೇಶ್ ಶರ್ಮಾ ಎಂಬುವವರು ಈ ಈದ್ಗಾ ಮಸೀದಿಯ ವಿಡಿಯೋಗ್ರಫಿಗೆ ಮನವಿ ಮಾಡಿ ಕೋರ್ಟ್ ಮೊರೆ ಹೋಗಿದ್ದರು.
13.37 ಎಕರೆ ಪ್ರದೇಶದಲ್ಲಿದ್ದ ಕೃಷ್ಣ ಜನ್ಮಭೂಮಿ ಇದ್ದ ಭಾಗದಲ್ಲಿ ಮಂದಿರವನ್ನು ಕೆಡವಿ ಈದ್ಗಾ ಮಸೀದಿಯನ್ನು ನಿರ್ಮಿಸಲಾಗಿದೆ ಎಂದು ಅರ್ಜಿಯಲ್ಲಿ ಹೇಳಿದ್ದಾರೆ. ಅರ್ಜಿದಾರರು ಮಸೀದಿಯನ್ನು ತೆರವುಗೊಳಿಸಿ ಭೂಮಿಯನ್ನು ದೇವಾಲಯಕ್ಕೆ ಹಸ್ತಾಂತರಿಸಬೇಕೆಂದು ಮನವಿ ಸಲ್ಲಿಸಿದ್ದಾರೆ.
ಮೇ.12 ರಂದು ಪ್ರಯಾಗ್ ರಾಜ್ ಹೈಕೋರ್ಟ್ ಕೃಷ್ಣ ಜನ್ಮಭೂಮಿ-ಶಾಹಿ ಈದ್ಗಾ ಮಸೀದಿಗೆ ಸಂಬಂಧಿಸಿದ ಎಲ್ಲಾ ಪ್ರಕರಣಗಳನ್ನೂ ನಾಲ್ಕು ತಿಂಗಳಲ್ಲು ಇತ್ಯರ್ಥಗೊಳಿಸುವಂತೆ ನಿರ್ದೇಶನ ನೀಡಿತ್ತು.