ಬತ್ತಿ ಹೋಗುತ್ತಿರುವ ಯಮುನಾ; ನೀರು ಸಂಸ್ಕರಣ ಘಟಕಗಳಿಂದ ಪೂರೈಕೆ ಶೇ.40 ರಷ್ಟು ಇಳಿಕೆ
ಯಮುನಾ ನದಿ ಬತ್ತಿ ಹೋಗುತ್ತಿದ್ದು, ವಾಜಿರಾಬಾದ್ ಚಂದ್ರವಾಲ್ ಹಾಗೂ ಓಖ್ಲಾ ನೀರು ಸಂಸ್ಕರಣ ಘಟಕ (ಡಬ್ಲ್ಯುಟಿಪಿಎಸ್) ಗಳಿಂದ ಪೂರೈಕೆ ಶೇ.40 ರಷ್ಟು ಕುಸಿತ ಕಂಡಿದೆ.
Published: 17th May 2022 01:15 PM | Last Updated: 17th May 2022 01:52 PM | A+A A-

ನೀರಿನ ಮಟ್ಟ ಕುಸಿತ (ಸಂಗ್ರಹ ಚಿತ್ರ)
ನವದೆಹಲಿ: ಯಮುನಾ ನದಿ ಬತ್ತಿ ಹೋಗುತ್ತಿದ್ದು, ವಾಜಿರಾಬಾದ್ ಚಂದ್ರವಾಲ್ ಹಾಗೂ ಓಖ್ಲಾ ನೀರು ಸಂಸ್ಕರಣ ಘಟಕ (ಡಬ್ಲ್ಯುಟಿಪಿಎಸ್) ಗಳಿಂದ ಪೂರೈಕೆ ಶೇ.40 ರಷ್ಟು ಕುಸಿತ ಕಂಡಿದೆ.
ಪರಿಣಾಮವಾಗಿ ದೆಹಲಿಯ ಹಲವು ಪ್ರದೇಶಗಳಲ್ಲಿ ನೀರಿನ ಸಮಸ್ಯೆ ತಲೆದೋರಿದೆ ಎಂದು ಡಿಜೆಬಿ ಅಧಿಕಾರಿಗಳು ತಿಳಿಸಿದ್ದಾರೆ.
ಯಮುನಾ ನದಿ ಸಂಪೂರ್ಣ ಬತ್ತಿಹೋಗುತ್ತಿದೆ. ವಾಜಿರಾಬಾದ್ ನ ಜಲಮಟ್ಟ 669.40 ಅಡಿಗಳಿಗೆ ಕುಸಿದಿದ್ದು, ವರ್ಷದಲ್ಲೇ ಅತ್ಯಂತ ಕಡಿಮೆ ಪ್ರಮಾಣದಲ್ಲಿ ದಾಖಲಾಗಿದೆ. ಪರಿಣಾಮ ವಾಜಿರಾಬಾದ್, ಚಂದ್ರವಾಲ್ ಹಾಗೂ ಓಖ್ಲಾ ನೀರು ಸಂಸ್ಕರಣ ಘಟಕಗಳಲ್ಲಿ ಉತ್ಪಾದನೆಯ ಸಾಮರ್ಥ್ಯ ಶೇ.60-70 ರಷ್ಟು ಕುಸಿತ ಕಂಡಿದೆ.
ಕಳೆದ ವರ್ಷ ಜುಲೈ11 ರಂದು ಕೆರೆಯ ನೀರಿನ ಮಟ್ಟ 667 ಅಡಿಗಳಷ್ಟು ಕುಸಿತ ಕಂಡಿತ್ತು. ಪರಿಣಾಮ ಡಿಜೆಬಿ ಹರ್ಯಾಣದಿಂದ ಹೆಚ್ಚುವರಿ ನೀರನ್ನು ಬಿಡುವಂತೆ ನಿರ್ದೇಶನ ಕೋರಿ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು.