2019 ರಲ್ಲಿ ಜಗತ್ತಿನಲ್ಲೇ ಅತಿ ಹೆಚ್ಚು ಸಂಖ್ಯೆಯ ಅಕಾಲಿಕ ಮರಣ ದಾಖಲಾಗಿದ್ದು ಭಾರತದಲ್ಲಿ!
ಭಾರತದಲ್ಲಿ ಮಾಲಿನ್ಯದ ಪರಿಣಾಮ 2019 ರಲ್ಲಿ 23.5 ಲಕ್ಷ ಮಂದಿ ಅವಧಿಪೂರ್ವ ನಿಧನರಾಗಿದ್ದಾರೆ ಈ ಪೈಕಿ 16.7 ಲಕ್ಷ ಮಂದಿ ವಾಯು ಮಾಲಿನ್ಯದಿಂದ ಜೀವ ಕಳೆದುಕೊಂಡಿದ್ದಾರೆ
Published: 18th May 2022 03:42 PM | Last Updated: 20th May 2022 04:28 PM | A+A A-

ವಾಯುಮಾಲಿನ್ಯ (ಸಾಂಕೇತಿಕ ಚಿತ್ರ)
ನವದೆಹಲಿ: ಭಾರತದಲ್ಲಿ ಮಾಲಿನ್ಯದ ಪರಿಣಾಮ 2019 ರಲ್ಲಿ 23.5 ಲಕ್ಷ ಮಂದಿ ಅವಧಿಪೂರ್ವ ನಿಧನರಾಗಿದ್ದಾರೆ ಈ ಪೈಕಿ 16.7 ಲಕ್ಷ ಮಂದಿ ವಾಯು ಮಾಲಿನ್ಯದಿಂದ ಜೀವ ಕಳೆದುಕೊಂಡಿದ್ದಾರೆ ಎಂಬ ಅಂಶ ಲ್ಯಾನ್ಸೆಟ್ ಪ್ಲಾನೆಟ್ರಿ ಹೆಲ್ತ್ ಜರ್ನಲ್ ನ ಅಧ್ಯಯನ ವರದಿಯ ಮೂಲಕ ಬಹಿರಂಗಗೊಂಡಿದೆ.
2019 ರಲ್ಲಿ ಭಾರತದಲ್ಲಿ ಸಂಭವಿಸಿದ ಅಕಾಲಿಕ ಮರಣಗಳು ಜಗತ್ತಿನಲ್ಲೇ ಅತಿ ಹೆಚ್ಚಿನ ಸಂಖ್ಯೆಯದ್ದಾಗಿದೆ ಹಾಗೂ ಭಾರತದಲ್ಲೇ ಅತಿ ಹೆಚ್ಚು ಅಂದರೆ 9.8 ಲಕ್ಷ ಮಂದಿ ಪಿಎಂ 2.5 ಮಾಲಿನ್ಯದಿಂದ ಜೀವ ಕಳೆದುಕೊಂಡ್ದಿದಾರೆ ಎಂದು ಸಂಶೋಧಕರು ಹೇಳಿದ್ದಾರೆ.
ಜಾಗತಿಕವಾಗಿ 2019 ರಲ್ಲಿ ಯಾವುದೇ ರೀತಿಯ ಮಾಲಿನ್ಯದಿಂದ 9 ಮಿಲಿಯನ್ ಮಂದಿ ಸಾವನ್ನಪ್ಪಿದ್ದಾರೆ.
ಉತ್ತರ ಭಾರತದಲ್ಲಿ ವಾಯು ಮಾಲಿನ್ಯ ಅತಿ ಹೆಚ್ಚು ವಾಯುಮಾಲಿನ್ಯವಿದ್ದು, ಎನರ್ಜಿ, ಮೊಬಿಲಿಟಿ, ಕೈಗಾರಿಕೆ, ಕೃಷಿ ಸೇರಿದಂತೆ ಹಲವು ಚಟುವಟಿಕೆಗಳಿಂದ ಮಾಲಿನ್ಯ ಹೆಚ್ಚುತ್ತಿದೆ ಎಂದು ಸಂಶೋಧಕರು ಹೇಳಿದ್ದಾರೆ.
ಮನೆಗಳಲ್ಲಿ ಸುಡುವ ಬಯೋಮಾಸ್ ನಿಂದ ಉಂಟಾಗುತ್ತಿರುವ ಮಾಲಿನ್ಯ ಹೆಚ್ಚಿನ ಪ್ರಮಾಣದ ಸಾವಿಗೆ ಕಾರಣವಾಗಿದ್ದು, ನಂತರದಲ್ಲಿ ಕೃಷಿ ತ್ಯಾಜ್ಯಗಳನ್ನು ಸುಡುವುದು, ಕಲ್ಲಿದ್ದಲಿನ ದಹನದಿಂದ ಉಂಟಾಗುತ್ತಿರುವ ಮಾಲಿನ್ಯ ಸಾವಿನ ಸಂಖ್ಯೆ ಹೆಚ್ಚಳವಾಗಲು ಕಾರಣ ಎನ್ನಲಾಗುತ್ತಿದೆ.