
ಇಂದ್ರಾಣಿ ಮುಖರ್ಜಿ
ನವದೆಹಲಿ: ಶೀನಾ ಬೋರಾ ಹತ್ಯೆ ಪ್ರಕರಣದಲ್ಲಿ ಆರೋಪಿ, ಮಾಧ್ಯಮ ಸಂಸ್ಥೆಯೊಂದರ ಮಾಜಿ ಮುಖ್ಯಸ್ಥೆ ಇಂದ್ರಾಣಿ ಮುಖರ್ಜಿಗೆ ಸುಪ್ರೀಂ ಕೋರ್ಟ್ ಮೇ.18 ರಂದು ಜಾಮೀನು ಮಂಜೂರು ಮಾಡಿದೆ.
ಹತ್ಯೆ ಪ್ರಕರಣ ಸಾಂದರ್ಭಿಕ ಸಾಕ್ಷ್ಯಗಳ ಆಧಾರಿತವಾಗಿದ್ದು, ಇಂದ್ರಾಣಿ ಮುಖರ್ಜಿ 6 ವರ್ಷಗಳಿಂದ ವಶದಲ್ಲಿದ್ದಾರೆ. ಜಾಮೀನು ಆಧಾರದಲ್ಲಿ ಇಂದ್ರಾಣಿ ಅವರ ಬಿಡುಗಡೆ ವಿಚಾರಣಾಧೀನ ನ್ಯಾಯಾಲಯದ ಅನುಮೋದನೆಗೆ ಒಳಪಟ್ಟಿರುತ್ತದೆ. ಪೀಟರ್ ಮುಖರ್ಜಿ ಅವರಿಗೆ ವಿಧಿಸಲಾಗಿದ್ದ ಷರತ್ತುಗಳೇ ಇಂದ್ರಾಣಿ ಮುಖರ್ಜಿಗೂ ಅನ್ವಯಿಸುತ್ತದೆ ಎಂದು ಕೋರ್ಟ್ ಹೇಳಿದೆ.
ಇಂದ್ರಾಣಿ ಮುಖರ್ಜಿ ವಿರುದ್ಧ 2012 ರ ಏ.24 ರಂದು ತನ್ನ ಮಗಳು ಶೀನಾ ಬೋರಾಳನ್ನು ಹತ್ಯೆ ಮಾಡಿರುವ ಆರೋಪವಿದೆ. ಆಗಸ್ಟ್ 25, 2015 ರಂದು ಖರ್ ಪೊಲೀಸರು ಬಂಧಿಸಿದ್ದರು.