
ರಾಹುಲ್ ಗಾಂಧಿ
ನವದೆಹಲಿ: ರಾಜಸ್ಥಾನದ ಉದಯಪುರದಲ್ಲಿ ಆಯೋಜಿಸಲಾಗಿದ್ದ ಕಾಂಗ್ರೆಸ್ನ ಮೂರು ದಿನಗಳ ಚಿಂತನ್ ಶಿಬಿರದಲ್ಲಿ ಹಿಂದಿ ಪ್ರಾಬಲ್ಯ ಸಾಧಿಸಿರುವುದು ಕಂಡುಬಂದಿತು. ಹಿಂದಿ ಪ್ರೇಮ ಎಷ್ಟಿತ್ತೆಂದರೆ, ಹಿಂದಿಯಲ್ಲೇ ಆಲೋಚನೆ, ಹಿಂದಿಯಲ್ಲೆ ಪ್ರಸ್ತಾಪ ಮತ್ತು ಟಿಪ್ಪಣಿಗಳನ್ನು ಸಹ ಹಿಂದಿ ಭಾಷೆಯಲ್ಲೇ ಓದಲಾಯಿತು. ಇಂತಹದ್ದೊಂದು ಪಕ್ಷದ ಹೊಸ ಬದಲಾವಣೆಗೆ ಉದಯಪುರದ ಚಿಂತನ್ ಬೈಟಕ್ ಸಾಕ್ಷಿಯಾಯಿತು.
ಕಾಂಗ್ರೆಸ್ನ ಹಿರಿಯ ನಾಯಕರೊಬ್ಬರು ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ಸ್ವತಂತ್ರ ಭಾರತದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕಾಂಗ್ರೆಸ್ನ ಚಿಂತನ್ ಶಿಬಿರದಲ್ಲಿ ಎಲ್ಲಾ ಕೆಲಸಗಳನ್ನು ಹಿಂದಿಯಲ್ಲಿ ಮಾಡಲಾಗಿದೆ. ದೇಶಾದ್ಯಂತದ ಕಾಂಗ್ರೆಸ್ ಪ್ರತಿನಿಧಿಗಳನ್ನು ಶಿಬಿರದಲ್ಲಿ ಹಿಂದಿ ಭಾಷೆಯಲ್ಲಿ ಸ್ವಾಗತಿಸಲಾಯಿತು. ಚಿಂತನ್ ಶಿಬಿರವನ್ನು ಹಿಂದಿ ಮಾತನಾಡುವ ರಾಜ್ಯದಲ್ಲಿ ಆಯೋಜಿಸಿದ್ದರಿಂದ ಪ್ರತಿನಿಧಿಗಳು ಹೆಚ್ಚಾಗಿ ಹಿಂದಿಯಲ್ಲಿ ಮಾತನಾಡುತ್ತಿದ್ದರು. ಹೀಗಾಗಿ ಅಲ್ಲಿನ ವಾತಾವರಣವು ಸಂಪೂರ್ಣವಾಗಿ ಹಿಂದಿಮಯ ಆಗಿತ್ತು ಎಂದರು.
ಈ ಹಿಂದೆ ಕಾಂಗ್ರೆಸ್ ಇಷ್ಟು ದೊಡ್ಡ ವೇದಿಕೆಯಲ್ಲಿ ಹಿಂದಿಯನ್ನು ಬಳಸಿರಲಿಲ್ಲ. ಶಿಬಿರದಲ್ಲಿ ಭಾಗವಹಿಸಿದ ಬಹುತೇಕ ಪ್ರತಿನಿಧಿಗಳು ತಮ್ಮ ಅಭಿಪ್ರಾಯವನ್ನು ಅಧಿವೇಶನದ ಉದ್ದಕ್ಕೂ ಪೂರ್ಣ ಬಳಕೆಯ ಭಾಷೆಯಾಗಿ ಬಳಕೆ ಮಾಡಿದರು. ಉದ್ಘಾಟನಾ ಸಮಾರಂಭದಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮಾತನಾಡಿ, ಸಮಾರೋಪ ಸಮಾರಂಭದಲ್ಲಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಹಿಂದಿ ಹಾಗೂ ಇಂಗ್ಲಿಷ್ನಲ್ಲಿ ಮಾತನಾಡಿದರು ಎಂದು ತಿಳಿಸಿದರು.
ಕಾಂಗ್ರೆಸ್ಗೆ ಹಿಂದಿಯ ಮೇಲಿನ ಪ್ರೀತಿ ಇದ್ದಕ್ಕಿದ್ದಂತೆ ಏಕೆ ಎಚ್ಚರವಾಯಿತು ಎಂದು ಪ್ರಶ್ನಿಸಿದಾಗ, “ಹಿಂದಿ ಮಾತನಾಡುವ ಪ್ರದೇಶದಲ್ಲಿನ 200ರಿಂದ 250 ಲೋಕಸಭಾ ಸ್ಥಾನಗಳನ್ನು ನಿರ್ಲಕ್ಷಿಸಲಾಗುವುದಿಲ್ಲ ಎಂದು ಕಾಂಗ್ರೆಸ್ ನಾಯಕ ಹೇಳಿದರು. ಕಾಂಗ್ರೆಸ್ ತನ್ನ ಪ್ರಣಾಳಿಕೆಯನ್ನು ಇಂಗ್ಲಿಷ್ನಲ್ಲಿ ಸಿದ್ಧಪಡಿಸುವಾಗಲೂ ಈ ಸ್ಥಾನಗಳು ಇದ್ದವು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಕಾಲ ಬದಲಾಗಿದೆ.. ಆದ್ದರಿಂದ ಕಾಂಗ್ರೆಸ್ನಲ್ಲಿ ಬದಲಾವಣೆ ಬರುತ್ತಿದೆ. ಅದನ್ನು ಸಮಯಕ್ಕೆ ತಕ್ಕಂತೆ ಬದಲಾಯಿಸಬೇಕಾಗುತ್ತದೆ ಎಂದು ಹೇಳಿದರು.
ಇದಕ್ಕೂ ಮುನ್ನ ಕಾಂಗ್ರೆಸ್ನ ಯಾವುದೇ ಅಧಿವೇಶನದಲ್ಲಿ ಹಿಂದಿಯಲ್ಲಿ ಚಿಂತನೆಯಾಗಲೀ ನಡೆದಿಲ್ಲ. ಪ್ರಸ್ತಾವನೆಯನ್ನು ಹಿಂದಿಯಲ್ಲಿ ಬರೆದಿಲ್ಲ ಅಥವಾ ಹಿಂದಿಯಲ್ಲಿ ಓದಿಲ್ಲ ಎಂದು ಪಕ್ಷದ ಮುಖಂಡರು ಹೇಳಿದರು. ಅಖಿಲ ಭಾರತ ಮಟ್ಟದಲ್ಲಿ ಆಯೋಜಿಸಲಾದ ಈ ಬೃಹತ್ ಸಮಾವೇಶದಲ್ಲಿ ಹಿಂದಿಗೆ ಕಾಂಗ್ರೆಸ್ ಇಷ್ಟೊಂದು ಪ್ರಾಮುಖ್ಯತೆ ನೀಡಿದ್ದು ಇದೇ ಮೊದಲು. ಸಮ್ಮೇಳನದಲ್ಲಿ ಹಿಂದಿ ಬಳಕೆ ಕುರಿತು ಕೆಲ ಆಂಗ್ಲ ಪತ್ರಿಕೆಗಳ ಪತ್ರಕರ್ತರು ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ತಿಳಿಸಿದರು. ಪ್ರಸ್ತಾವನೆ ಪ್ರತಿಯ ಇಂಗ್ಲಿಷ್ ಅನುವಾದದಲ್ಲೂ ತಡವಾಗಿ ಬಂದಿದೆ ಎಂದು ದೂರಿದ್ದರು.
ಇದಕ್ಕೂ ಮುನ್ನ 1950ರ ನಾಸಿಕ್ ಅಧಿವೇಶನದಲ್ಲಿ ಹಿಂದೂಸ್ತಾನಿ ಬಳಕೆಗೆ ಕಾರಣವಾಯಿತು ಎಂದು ಕಾಂಗ್ರೆಸ್ ನಾಯಕ ಹೇಳಿದರು. ಆ ಸಮ್ಮೇಳನದಲ್ಲಿ ಪಂಡಿತ್ ಜವಾಹರಲಾಲ್ ನೆಹರೂ ಕೂಡ ಇದ್ದರು. ಆದರೆ ಅಲ್ಲಿ ಹಿಂದಿಗೆ ಅಲ್ಲ. ಹಿಂದೂಸ್ಥಾನ ಭಾಷೆಗೆ ಪ್ರಾಮುಖ್ಯತೆ ನೀಡಲಾಯಿತು. ಆ ನಂತರ ಕಾಂಗ್ರೆಸ್ನ ಎಲ್ಲ ಅಧಿವೇಶನಗಳಲ್ಲೂ ಇಂಗ್ಲಿಷ್ನದ್ದೇ ಪ್ರಾಬಲ್ಯ ಕಂಡುಬಂದಿದೆ ಎಂದು ಕಾಂಗ್ರೆಸ್ ನಾಯಕರು ತಿಳಿಸಿದರು.