ಬಿಜೆಪಿ ಸೇರಿದ ಸುನೀಲ್ ಜಾಖರ್; ವೈಯಕ್ತಿಕ ಲಾಭಕ್ಕಾಗಿ ಅಲ್ಲ ಎಂದ ಮಾಜಿ ಕಾಂಗ್ರೆಸ್ ನಾಯಕ
ಇತ್ತೀಚಿಗಷ್ಟೇ ಕಾಂಗ್ರೆಸ್ ಗೆ ರಾಜೀನಾಮೆ ನೀಡಿದ್ದ ಪಂಜಾಬ್ ಪ್ರದೇಶ ಕಾಂಗ್ರೆಸ್ ಮಾಜಿ ಅಧ್ಯಕ್ಷ ಸುನೀಲ್ ಜಾಖರ್ ಅವರು ಗುರುವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾದರು.
Published: 19th May 2022 03:54 PM | Last Updated: 19th May 2022 03:54 PM | A+A A-

ಬಿಜೆಪಿ ಸೇರಿದ ಸುನೀಲ್ ಜಾಖರ್
ನವದೆಹಲಿ: ಇತ್ತೀಚಿಗಷ್ಟೇ ಕಾಂಗ್ರೆಸ್ ಗೆ ರಾಜೀನಾಮೆ ನೀಡಿದ್ದ ಪಂಜಾಬ್ ಪ್ರದೇಶ ಕಾಂಗ್ರೆಸ್ ಮಾಜಿ ಅಧ್ಯಕ್ಷ ಸುನೀಲ್ ಜಾಖರ್ ಅವರು ಗುರುವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾದರು.
ಜಾಖರ್ ಅವರನ್ನು ಪಕ್ಷಕ್ಕೆ ಸ್ವಾಗತಿಸಿದ ಜೆಪಿ ನಡ್ಡಾ, "ಬಿಜೆಪಿ ಪಂಜಾಬ್ನಲ್ಲಿ ನಂಬರ್ ಒನ್ ರಾಷ್ಟ್ರೀಯವಾದಿ ಶಕ್ತಿಯಾಗಿ ಹೊರಹೊಮ್ಮುತ್ತಿದೆ. ಆದ್ದರಿಂದ ಪಕ್ಷವನ್ನು ಬಲಪಡಿಸಲು ಮತ್ತು ಬಲಿಷ್ಠ ಪಂಜಾಬ್ಗಾಗಿ ರಾಷ್ಟ್ರೀಯವಾದಿ ಸಿದ್ಧಾಂತ ಹೊಂದಿರುವ ಎಲ್ಲಾ ನಾಯಕರು ಬಿಜೆಪಿಗೆ ಸೇರುವ ಅಗತ್ಯ ಇದೆ" ಎಂದು ಹೇಳಿದರು.
ಇದನ್ನು ಓದಿ: ಪಂಜಾಬ್: ಕಾಂಗ್ರೆಸ್ ಪಕ್ಷಕ್ಕೆ ಸುನಿಲ್ ಜಾಖರ್ ವಿದಾಯ!
ಗುರುದಾಸ್ಪುರದಿಂದ ಮೂರು ಬಾರಿ ಶಾಸಕರಾಗಿ ಮತ್ತು ಮಾಜಿ ಸಂಸದರಾಗಿ ಆಯ್ಕೆಯಾಗಿರುವ ಜಾಖರ್ ಅವರು ತಮ್ಮ ಕುಟುಂಬದ ಐದು ದಶಕಗಳ ಕಾಂಗ್ರೆಸ್ನೊಂದಿಗಿನ ಒಡನಾಟವನ್ನು ನೆನಪಿಸಿಕೊಂಡಾಗ ಭಾವುಕರಾದರು. "1972 ರಿಂದ ಇಲ್ಲಿಯವರೆಗೆ ಮೂರು ತಲೆಮಾರುಗಳ ಕಾಂಗ್ರೆಸ್ ಜೊತೆಗಿನ ಸಂಬಂಧವನ್ನು ಮುರಿಯುವುದು ಸುಲಭವಲ್ಲ. ನಾವು ಒಳ್ಳೆಯ ಮತ್ತು ಕೆಟ್ಟ ಸಮಯದಲ್ಲೂ ಕಾಂಗ್ರೆಸ್ ಜೊತೆ ಇದ್ದೇವೆ" ಎಂದು ಜಾಖರ್ ಹೇಳಿದರು.
ನಾನು ಯಾವುದೇ ವೈಯಕ್ತಿಕ ಲಾಭ, ಹಿತಾಸಕ್ತಿಗಾಗಿ ರಾಜಕೀಯ ಮಾಡದ ಕಾರಣ ಬಿಜೆಪಿ ನನ್ನನ್ನು ಸ್ವಾಗತಿಸಿದೆ ಎಂದು ಜಾಖರ್ ಹೇಳಿದ್ದಾರೆ.