ಜ್ಞಾನವಾಪಿ ಮಸೀದಿ ಪ್ರಕರಣ: ನಾಳೆಗೆ ವಿಚಾರಣೆ ಮುಂದೂಡಿದ ಸುಪ್ರೀಂ ಕೋರ್ಟ್
ಜ್ಞಾನವಾಪಿ ಮಸೀದಿ ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಾಳೆ ಶುಕ್ರವಾರಕ್ಕೆ ಮುಂದೂಡಿದೆ. ನಾಳೆ ಅಪರಾಹ್ನ 3 ಗಂಟೆಗೆ ವಾದ ಪ್ರತಿವಾದ ಆಲಿಸಿ ತೀರ್ಪು ನೀಡಲು ಸುಪ್ರೀಂ ಕೋರ್ಟ್ ನಿರ್ಧರಿಸಿದೆ.
Published: 19th May 2022 11:40 AM | Last Updated: 19th May 2022 01:57 PM | A+A A-

ಜ್ಞಾನವಾಪಿ ಮಸೀದಿ
ನವದೆಹಲಿ: ಜ್ಞಾನವಾಪಿ ಮಸೀದಿ ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಾಳೆ ಶುಕ್ರವಾರಕ್ಕೆ ಮುಂದೂಡಿದೆ. ನಾಳೆ ಅಪರಾಹ್ನ 3 ಗಂಟೆಗೆ ವಾದ ಪ್ರತಿವಾದ ಆಲಿಸಿ ತೀರ್ಪು ನೀಡಲು ಸುಪ್ರೀಂ ಕೋರ್ಟ್ ನಿರ್ಧರಿಸಿದೆ.
ವಾರಣಾಸಿಯ ವಿಚಾರಣಾ ನ್ಯಾಯಾಲಯದ ವಿಚಾರಣೆಯನ್ನು ಸ್ಥಗಿತಗೊಳಿಸುವಂತೆ ಜ್ಞಾನವಾಪಿ ಮಸೀದಿ ಆಡಳಿತ ಸಮಿತಿ ಇಂದು ಸುಪ್ರೀಂ ಕೋರ್ಟ್ಗೆ ಮನವಿ ಮಾಡಿದೆ. ಈ ಮಧ್ಯೆ, ಜ್ಞಾನವಾಪಿ ಮಸೀದಿ ಸಮೀಕ್ಷೆ ಕುರಿತು ನ್ಯಾಯಾಲಯ ನೇಮಿಸಿದ ವಿಶೇಷ ಸಹಾಯಕ ಆಯುಕ್ತರ ವರದಿಯನ್ನು ವಾರಣಾಸಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಎರಡೂ ಕಡೆಯ ಕಕ್ಷಿದಾರರು ನ್ಯಾಯಾಲಯದ ಮುಂದೆ ಹಾಜರಾಗಲಿದ್ದು, 10-15 ಪುಟಗಳ ಸುದೀರ್ಘ ವರದಿಯಾಗಿದೆ ಎಂದು ನ್ಯಾಯಾಲಯದ ಸಹಾಯಕ ಆಯುಕ್ತ ಅಜಯ್ ಪ್ರತಾಪ್ ಸಿಂಗ್ ಹೇಳಿದ್ದಾರೆ.
ಹಿಂದೂ ಪರ ವಕೀಲ ವಿಷ್ಣು ಶಂಕರ್ ಜೈನ್ ಅವರು ಸುಪ್ರೀಂ ಕೋರ್ಟ್ಗೆ ಹಿರಿಯ ವಕೀಲ ಹರಿಶಂಕರ್ ಜೈನ್ಗೆ ಆರೋಗ್ಯ ಸರಿಯಿಲ್ಲ ಎಂದು ಹೇಳಿ ಜ್ಞಾನವಾಪಿ ಮಸೀದಿ ಸಮಸ್ಯೆಯನ್ನು ನಾಳೆ ಆಲಿಸುವಂತೆ ಮನವಿ ಮಾಡಿದರು. ಮುಸ್ಲಿಂ ಪರ ವಾದ ಮಂಡಿಸಿದ ಹಿರಿಯ ವಕೀಲ ಹುಝೆಫಾ ಅಹ್ಮದಿ, ದೇಶಾದ್ಯಂತ ಹಲವು ವ್ಯಾಜ್ಯಗಳಿದ್ದು, ತುರ್ತು ಅಗತ್ಯವಿದ್ದು, ಇಂದೇ ವಿಚಾರಣೆ ನಡೆಸಬೇಕು ಎಂದು ನ್ಯಾಯಾಲಯಕ್ಕೆ ಒತ್ತಾಯಿಸಿದ್ದರು.
ಇದನ್ನೂ ಓದಿ: ವಕೀಲರ ಪ್ರತಿಭಟನೆಯಿಂದ ಗ್ಯಾನ್ ವಾಪಿ ಪ್ರಕರಣದ ವಿಚಾರಣೆಯಲ್ಲಿ ವ್ಯತ್ಯಾಸ
ಹಿಂದೂ ಪರ ವಕೀಲರು ವಾದ ವಿವಾದ ವಿಚಾರಣೆಯನ್ನು ದಾಖಲಿಸಿದ ನಂತರ ಸುಪ್ರೀಂ ಕೋರ್ಟ್ ಇಂದು ಜ್ಞಾನವಾಪಿ ಮಸೀದಿ ವಿಚಾರಣೆ ಪ್ರಕರಣವನ್ನು ನಾಳೆ ಅಪರಾಹ್ನಕ್ಕೆ ಮುಂದೂಡಿತು. ಸುಪ್ರೀಂ ಕೋರ್ಟ್ನ ವಿಚಾರಣೆಗೆ ಮುನ್ನ, 10 ರಿಂದ 15 ಪುಟಗಳನ್ನು ಒಳಗೊಂಡಿರುವ ಸಮೀಕ್ಷೆಯ ವರದಿಯನ್ನು ವಾರಣಾಸಿ ನ್ಯಾಯಾಲಯಕ್ಕೆ ಸಲ್ಲಿಸಲಾಯಿತು. ವಾರಣಾಸಿ ನ್ಯಾಯಾಲಯಕ್ಕೆ ವಿಡಿಯೋ ಚಿಪ್ ಅನ್ನು ಸಹ ಸಲ್ಲಿಸಲಾಗಿದೆ ಎಂದು ನ್ಯಾಯಾಲಯ ನೇಮಿಸಿದ ವಿಶೇಷ ಸಹಾಯಕ ಕಮಿಷನರ್ ವಕೀಲ ವಿಶಾಲ್ ಸಿಂಗ್ ಹೇಳಿದ್ದಾರೆ.
ಇದನ್ನೂ ಓದಿ: ಜ್ಞಾನವಾಪಿ ಮಸೀದಿ: ವಾರಣಾಸಿ ಕೋರ್ಟ್ ಆದೇಶದಿಂದ ಅನ್ಯಾಯವಾಗಿದೆ; ನಾನು ಯಾವ ಮೋದಿ, ಯೋಗಿಗೆ ಹೆದರೊಲ್ಲ: ಒವೈಸಿ
ಜ್ಞಾನವಾಪಿ ಮಸೀದಿ ಆವರಣದಲ್ಲಿ ಶಿವಲಿಂಗದ ಇರುವುದನ್ನು ಮುಸಲ್ಮಾನರು ನಿರಾಕರಿಸುತ್ತಲೇ ಬಂದಿದ್ದಾರೆ. ಶಿವಲಿಂಗ ಕಂಡುಬಂದಿದೆ ಎಂದು ಹೇಳಲಾದ ಸ್ಥಳವನ್ನು ಮುಸ್ಲಿಮರ ಪ್ರಾರ್ಥನೆಗೆ ಅಡ್ಡಿಯಾಗದಂತೆ 'ರಕ್ಷಿತ ಪ್ರದೇಶ' ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ.
ಇದೇ ಸಂದರ್ಭದಲ್ಲಿ ಇಂದು ಯಾವುದೇ ಆದೇಶ ಹೊರಡಿಸದಂತೆ ವಾರಣಾಸಿ ಕೋರ್ಟ್ ಗೆ ಸುಪ್ರೀಂ ಕೋರ್ಟ್ ಸೂಚಿಸಿದೆ.