
ರೈಲುಗಳ ಮೂಲಕ ಬಸ್ ಸಾಗಣೆ
ನವದೆಹಲಿ: ಭಾರತೀಯ ರೈಲ್ವೆ ಇಲಾಖೆಯು ಪ್ರಯಾಣಿಕ ಸ್ನೇಹಿಯಾಗಲು ಒಂದಲ್ಲಾ ಒಂದು ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ. ಇದೀಗ ಬಸ್ ಗಳನ್ನು ಬೇರೊಂದು ರಾಜ್ಯಕ್ಕೆ ರೈಲುಗಳ ಮೂಲಕ ರವಾನಿಸಲಾಗುತ್ತಿದೆ.
ಬೆಂಗಳೂರಿನ ದೊಡ್ಡಬಳ್ಳಾಪುರದಿಂದ ಚಂಡೀಗಢಕ್ಕೆ ಮೊದಲ ಬಾರಿಗೆ ಪ್ರಯಾಣಿಕರ ಬಸ್ ಗಳನ್ನು ಸಾಗಿಸಲಾಗುತ್ತಿದೆ. ಈ ಮೂಲಕ ಭಾರತೀಯ ರೈಲ್ವೆ ಸರಕು ಸಾಗಣೆಯ ಹೊಸ ಉಪ ಯೋಜನೆಗೆ ಮುಂದಾಗಿದೆ ಎಂದು ಹೇಳಿದೆ.
ಈ ಸಂಬಂಧ ವಿಡಿಯೋವೊಂದನ್ನು ರೈಲ್ವೆ ಬಿಡುಗಡೆ ಮಾಡಿದ್ದು, ಹಿಮಾಚಲ ರಸ್ತೆ ಸಾರಿಗೆ ಸಂಸ್ಥೆಯ ಬಳಕೆಗಾಗಿ ಬೆಂಗಳೂರಿನ ದೊಡ್ಡಬಳ್ಳಾಪುರದಿಂದ ಚಂಡೀಗಢಕ್ಕೆ ಅಶೋಕ್ ಲೇಲ್ಯಾಂಡ್ ಬಸ್ ಗಳನ್ನು ಭಾರತೀಯ ರೈಲ್ವೆ ಮೂಲಕ ರವಾನೆ ಮಾಡಲಾಗುತ್ತಿದೆ.
ಈ ಕುರಿತು ರೈಲ್ವೆ ಅಶ್ವಿನಿ ವೈಷ್ಣವ್ ಕೂಡಾ ಟ್ವೀಟ್ ಮಾಡಿದ್ದು, ಮೊದಲ ಬಾರಿಗೆ ಪ್ರಯಾಣಿಕರ ಬಸ್ ಗಳನ್ನು ಸಾಗಿಸಲಾಗುತ್ತಿದೆ ಎಂದು ಹೇಳಿದ್ದಾರೆ.
Buses on Train!
— Ashwini Vaishnaw (@AshwiniVaishnaw) May 18, 2022
Transporting passenger buses for the first time. pic.twitter.com/QWggwXfww1