ಜ್ಞಾನವಾಪಿ ಮಸೀದಿ ವಿವಾದ: ಸತ್ಯ ಮುಚ್ಚಿಡಲು ಸಾಧ್ಯವಿಲ್ಲ- ಆರ್.ಎಸ್.ಎಸ್ ಹೇಳಿಕೆ
ಜ್ಞಾನವಾಪಿ ಮಸೀದಿ ವಿವಾದದ ನಡುವೆ ಐತಿಹಾಸಿಕ ಸತ್ಯಗಳನ್ನು ಸಮಾಜದ ಮುಂದೆ ಸರಿಯಾದ ದೃಷ್ಟಿಕೋನದಲ್ಲಿ ಇಡುವ ಸಮಯ ಬಂದಿದೆ ಎಂದು ಆರ್‌ಎಸ್‌ಎಸ್ ಅಖಿಲ ಭಾರತೀಯ ಪ್ರಚಾರ್ ಪ್ರಮುಖ್ ಸುನೀಲ್ ಅಂಬೇಕರ್ ಹೇಳಿದ್ದಾರೆ.
Published: 19th May 2022 11:30 AM | Last Updated: 19th May 2022 11:32 AM | A+A A-

ಜ್ಞಾನವಾಪಿ ಮಸೀದಿ
ವಾರಾಣಸಿ: ಜ್ಞಾನವಾಪಿ ಮಸೀದಿ ವಿವಾದದ ನಡುವೆ ಐತಿಹಾಸಿಕ ಸತ್ಯಗಳನ್ನು ಸಮಾಜದ ಮುಂದೆ ಸರಿಯಾದ ದೃಷ್ಟಿಕೋನದಲ್ಲಿ ಇಡುವ ಸಮಯ ಬಂದಿದೆ ಎಂದು ಆರ್‌ಎಸ್‌ಎಸ್ ಅಖಿಲ ಭಾರತೀಯ ಪ್ರಚಾರ್ ಪ್ರಮುಖ್ ಸುನೀಲ್ ಅಂಬೇಕರ್ ಹೇಳಿದ್ದಾರೆ.
ಬುಧವಾರ ಆರ್‌ಎಸ್‌ಎಸ್ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅಂಬೇಕರ್ , ಸದ್ಯ ಜ್ಞಾನವಾಪಿ ವಿಷಯ ನಡೆಯುತ್ತಿದೆ, ಸತ್ಯಗಳು ಹೊರಬರುತ್ತಿವೆ, ಅವುಗಳು ಹೊರಬರಲು ಬಿಡಬೇಕು, ಯಾವುದೇ ಸಂದರ್ಭದಲ್ಲಿ, ಸತ್ಯವು ಯಾವಾಗಲೂ ಒಂದು ಮಾರ್ಗವನ್ನು ಕಂಡುಕೊಳ್ಳುತ್ತದೆ. ಹೇಗೆ. ಅದನ್ನು ದೀರ್ಘಕಾಲ ಮುಚ್ಚಿಡಬಹುದು? ಐತಿಹಾಸಿಕ ಸತ್ಯಗಳನ್ನು ನಾವು ಸಮಾಜದ ಮುಂದೆ ಸರಿಯಾದ ದೃಷ್ಟಿಕೋನದಲ್ಲಿ ಇರಿಸುವ ಸಮಯ ಇದಾಗಿದೆ ಎಂದರು.
ಇದನ್ನೂ ಓದಿ: ಜ್ಞಾನವಾಪಿ ಮಸೀದಿ: ವಾರಣಾಸಿ ಕೋರ್ಟ್ ಆದೇಶದಿಂದ ಅನ್ಯಾಯವಾಗಿದೆ; ನಾನು ಯಾವ ಮೋದಿ, ಯೋಗಿಗೆ ಹೆದರೊಲ್ಲ: ಒವೈಸಿ
ವಾರಾಣಾಸಿಯ ಕಾಶಿ ವಿಶ್ವನಾಥ ದೇವಸ್ಥಾನ-ಜ್ಞಾನವಾಪಿ ಮಸೀದಿ ಸಂಕೀರ್ಣದ ಮೂರು ದಿನಗಳ ನ್ಯಾಯಾಲಯದ ಮೇಲ್ವಿಚಾರಣೆಯ ವೀಡಿಯೊಗ್ರಫಿ ಸಮೀಕ್ಷೆ ಸೋಮವಾರ ಮುಕ್ತಾಯವಾಗಿದ್ದು, ಮಸೀದಿ ಸಂಕೀರ್ಣದಲ್ಲಿ ಶಿವಲಿಂಗ ಪತ್ತೆಯಾಗಿರುವುದಾಗಿ ಹಿಂದೂಪರ ವಕೀಲ ಸೊಹಾನ್ ಲಾಲ್ ಆರ್ಯ ಸೋಮವಾರ ಹೇಳಿಕೆ ನೀಡಿದ್ದರು.
ಸಮೀಕ್ಷೆಯ ಮುಕ್ತಾಯದ ನಂತರ ಶಿವಲಿಂಗ ಪತ್ತೆಯಾದ ಪ್ರದೇಶವನ್ನು ಸೀಲ್ ಮಾಡಲು ಮತ್ತು ಜನರು ಸ್ಥಳಕ್ಕೆ ಹೋಗದಂತೆ ನಿರ್ಬಂಧಿಸಲು ವಾರಣಾಸಿಯ ನ್ಯಾಯಾಲಯವು ಜಿಲ್ಲಾ ಮ್ಯಾಜಿಸ್ಟ್ರೇಟ್ ಕೌಶಲ್ ರಾಜ್ ಶರ್ಮಾ ಅವರಿಗೆ ಆದೇಶಿಸಿತು.