ಜಮ್ಮು ಕಾಶ್ಮೀರ ಹೆದ್ದಾರಿಯಲ್ಲಿ ನಿರ್ಮಾಣ ಹಂತದ ಸುರಂಗ ಕುಸಿತ: ನಾಲ್ವರಿಗೆ ಗಾಯ, ಹಲವರು ಸಿಲುಕಿರುವ ಶಂಕೆ
ಕಾಶ್ಮೀರದ ರಾಂಬನ್ ಜಿಲ್ಲೆಯ ಮೇಕರ್ಕೋಟೆ ಪ್ರದೇಶದ ಖೂನಿ ನಾಲಾದಲ್ಲಿ ನಿರ್ಮಾಣ ಹಂತದಲ್ಲಿರುವ ಸುರಂಗದ ಒಂದು ಕುಸಿದುಬಿದ್ದಿದ್ದು, ಪರಿಣಾಮ ಹಲವರು ಸಿಲುಕಿರುವ ಶಂಕೆಗಳು ವ್ಯಕ್ತವಾಗಿದೆ.
Published: 20th May 2022 09:24 AM | Last Updated: 20th May 2022 12:02 PM | A+A A-

ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿರುವುದು.
ಶ್ರೀನಗರ: ಕಾಶ್ಮೀರದ ರಾಂಬನ್ ಜಿಲ್ಲೆಯ ಮೇಕರ್ಕೋಟೆ ಪ್ರದೇಶದ ಖೂನಿ ನಾಲಾದಲ್ಲಿ ನಿರ್ಮಾಣ ಹಂತದಲ್ಲಿರುವ ಸುರಂಗದ ಒಂದು ಕುಸಿದುಬಿದ್ದಿದ್ದು, ಪರಿಣಾಮ ಹಲವರು ಸಿಲುಕಿರುವ ಶಂಕೆಗಳು ವ್ಯಕ್ತವಾಗಿದೆ.
ಸುರಂಗದಲ್ಲಿ 10 ಮಂದಿ ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, ಪ್ರಸ್ತುಕ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಆರಂಭಗೊಂಡಿದೆ.
ಇದನ್ನೂ ಓದಿ: ಎಲ್ಓಸಿ ಬಳಿ ಕಾಡ್ಗಿಚ್ಚು: ಅಕ್ರಮ ನುಸುಳುಕೋರರ ತಡೆಗೆ ಹುದುಗಿಸಿಟ್ಟಿದ್ದ ಹಲವು ನೆಲಬಾಂಬ್ ಸ್ಫೋಟ
‘ರಾಂಬನ್ನ ಮೇಕರ್ಕೋಟೆ ಪ್ರದೇಶದಲ್ಲಿ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯ ಖೂನಿ ನಾಲಾದಲ್ಲಿ ನಿರ್ಮಾಣ ಹಂತದ ಸುರಂಗದ ಒಂದು ಭಾಗ ಕುಸಿದು ಬಿದ್ದಿದ್ದು, ಅವಶೇಷಗಳಡಿಯಲ್ಲಿ 10 ಮಂದಿ ಸಿಲುಕಿರುವ ಸಾಧ್ಯತೆ ಇದೆ. ಈಗಾಗಲೇ ನಾಲ್ವರನ್ನು ರಕ್ಷಿಸಲಾಗಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ’ ಎಂದು ರಾಂಬನ್ನ ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ರಕ್ಷಣಾ ಕಾರ್ಯಾಚರಣೆ ನಡೆಯುತ್ತಿರುವುದರಿಂದ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯನ್ನು ಬಂದ್ ಮಾಡಲಾಗಿದೆ ಎಂದು ತಿಳಿದುಬಂದಿದೆ.