ಸಮಾಜವಾದಿ ಪಕ್ಷದ ಮುಖಂಡ ಅಜಂ ಖಾನ್ ಜೈಲಿನಿಂದ ಬಿಡುಗಡೆ
ವಂಚನೆ ಪ್ರಕರಣದಲ್ಲಿ ಸುಮಾರು 2 ವರ್ಷಗಳ ಕಾಲ ಜೈಲವಾಸ ಅನುಭವಿಸಿದ್ದ ಸಮಾಜವಾದಿ ಪಕ್ಷದ ಹಿರಿಯ ಮುಖಂಡ ಅಜಂ ಖಾನ್, ಶುಕ್ರವಾರ ಸೀತಾಪುರ್ ಜಿಲ್ಲೆಯ ಕೇಂದ್ರ ಕಾರಾಗೃಹದಿಂದ ಬಿಡುಗಡೆಯಾಗಿದ್ದಾರೆಂದು ತಿಳಿದುಬಂದಿದೆ.
Published: 20th May 2022 11:29 AM | Last Updated: 20th May 2022 01:08 PM | A+A A-

ಸಮಾಜವಾದಿ ಪಕ್ಷದ ಮುಖಂಡ ಅಜಂಖಾನ್
ಲಖನೌ: ವಂಚನೆ ಪ್ರಕರಣದಲ್ಲಿ ಸುಮಾರು 2 ವರ್ಷಗಳ ಕಾಲ ಜೈಲವಾಸ ಅನುಭವಿಸಿದ್ದ ಸಮಾಜವಾದಿ ಪಕ್ಷದ ಹಿರಿಯ ಮುಖಂಡ ಅಜಂ ಖಾನ್, ಶುಕ್ರವಾರ ಸೀತಾಪುರ್ ಜಿಲ್ಲೆಯ ಕೇಂದ್ರ ಕಾರಾಗೃಹದಿಂದ ಬಿಡುಗಡೆಯಾಗಿದ್ದಾರೆಂದು ತಿಳಿದುಬಂದಿದೆ.
87 ಪ್ರಕರಣಗಳಲ್ಲಿ ಅಜಂ ಖಾನ್ ಬಿಡುಗಡೆಗೆ ಆದೇಶ ಮಾಡಲಾಗಿರುವುದನ್ನು ಪರಿಗಣಿಸಿದ ಸುಪ್ರೀಂ ಕೋರ್ಟ್, ಸಂವಿಧಾನದ 142ನೇ ವಿಧಿಯ ವಿಶೇಷ ಅಧಿಕಾರವನ್ನು ಬಳಸಿಕೊಂಡು ಅಜಂಖಾನ್ ಅವರಿಗೆ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು.
ಇದನ್ನೂ ಓದಿ: ಜೈಲು ಹಕ್ಕಿ ಅಜಂ ಖಾನ್ಗೆ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ಮಂಜೂರು!
ಗುರುವಾರ ರಾತ್ರಿ 11 ಗಂಟೆ ಸುಮಾರಿಗೆ ಬಿಡುಗಡೆ ಆದೇಶ ಜೈಲಿ ತಲುಪಿದ್ದು, ಎಲ್ಲಾ ಪ್ರಕ್ರಿಯೆಗಳ ನಂತರ ಇಂದು ಬೆಳಗ್ಗೆ 8 ಗಂಟೆ ಸುಮಾರಿಗೆ ಅಜಂ ಖಾನ್ ಅವರನ್ನು ಬಿಡುಗಡೆ ಮಾಡಲಾಗಿದೆ ಎಂದು ಸೀತಾಪುರ ಜೈಲಿನ ಜೈಲರ್ ಆರ್ ಎಸ್ ಯಾದವ್ ತಿಳಿಸಿದ್ದಾರೆ.
ಅಜಂ ಖಾನ್ ಅವರ ಪುತ್ರ ಮತ್ತು ಶಾಸಕ ಅಬ್ದುಲ್ಲಾ ಅಜಂ, ಪ್ರಗತಿಶೀಲ ಸಮಾಜವಾದಿ ಪಕ್ಷದ (ಲೋಹಿಯಾ) ನಾಯಕ ಶಿವಪಾಲ್ ಸಿಂಗ್ ಯಾದವ್ ಮತ್ತು ಬೆಂಬಲಿಗರು ಸಮಾಜವಾದಿ ಪಕ್ಷದ ಹಿರಿಯ ನಾಯಕನನ್ನು ಬರಮಾಡಿಕೊಂಡರು. ಬಿಡುಗಡೆಯ ಬಳಿಕ ಅಜಂಖಾನ್ ಅವರು ತಮ್ಮ ಹುಟ್ಟೂರಾದ ರಾಂಪುರಕ್ಕೆ ತೆರಳಿದರು.