
ರಾಹುಲ್ ಭಟ್ ಹತ್ಯೆ ಖಂಡಿಸಿ ನಡೆದ ಪ್ರತಿಭಟನೆ
ಶ್ರೀನಗರ: ಕಾಶ್ಮೀರಿ ಪಂಡಿತರು ಶ್ರೀನಗರದ ಲಾಲ್ ಚೌಕ್ ನಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಇತ್ತೀಚೆಗೆ ಕಾಶ್ಮೀರಿ ಪಂಡಿತ ರಾಹುಲ್ ಭಟ್ ಹತ್ಯೆಯನ್ನು ಖಂಡಿಸಿ ನಮಗೆ ನ್ಯಾಯ ಬೇಕು, ಆಡಳಿತಕ್ಕೆ ಧಿಕ್ಕಾರ ಎಂದು ಪ್ರತಿಭಟನಾ ನಿರತರು ಘೋಷಣೆ ಕೂಗಿದರು. ಲಾಲ್ ಮಂಡಿ ಪ್ರದೇಶದಲ್ಲಿ ಒಗ್ಗೂಡಿದ ಸಮುದಾಯದ ಸದಸ್ಯರು ಭಟ್ ಆತ್ಮಕ್ಕೆ ಶಾಂತಿ ಕೋರಲು ಝೆಲಮ್ ನದಿಯಲ್ಲಿ ಪ್ರಾರ್ಥನೆ ಸಲ್ಲಿಸಿದರು.
ರಾಹುಲ್ ಭಟ್ ನ್ನು ಮೇ.12 ರಂದು ಬದ್ಗಾಮ್ ಜಿಲ್ಲೆಯ ಚಡೂರಾ ಟೌನ್ ನಲ್ಲಿ ಭಯೋತ್ಪಾದಕರು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಕಾಶ್ಮೀರಿ ಪಂಡಿತರು ನದಿಯಲ್ಲಿ ಪೂಜೆ ಸಲ್ಲಿಸಿದ ಬಳಿಕ ಲಾಲ್ ಚೌಕ್ ಯೆಡೆಗೆ ಪ್ರತಿಭಟನಾ ಮೆರವಣಿಗೆಯನ್ನು ನಡೆಸಿದರು.