ಅಬಕಾರಿ ಸುಂಕ ಇಳಿಸಿದ ಕೇಂದ್ರ ಸರ್ಕಾರ; ಪೆಟ್ರೋಲ್ ಬೆಲೆ 9.5 ರೂ, ಡೀಸೆಲ್ ದರ 7 ರೂ. ಇಳಿಕೆ
ಮಹತ್ವದ ಬೆಳವಣಿಗೆಯಲ್ಲಿ ಕೇಂದ್ರ ಸರ್ಕಾರ ಇಂಧನ ಅಬಕಾರಿ ಸುಂಕದಲ್ಲಿ ಭಾರಿ ಇಳಿಕೆ ಮಾಡಿದ್ದು, ಪರಿಣಾಮ ಪೆಟ್ರೋಲ್ ಬೆಲೆ .9.5ರೂ, ಡೀಸೆಲ್ ದರ 7 ರೂ ಇಳಿಕೆಯಾಗಿದೆ.
Published: 21st May 2022 07:09 PM | Last Updated: 23rd May 2022 01:33 PM | A+A A-

ಸಂಗ್ರಹ ಚಿತ್ರ
ನವದೆಹಲಿ: ಮಹತ್ವದ ಬೆಳವಣಿಗೆಯಲ್ಲಿ ಕೇಂದ್ರ ಸರ್ಕಾರ ಇಂಧನ ಅಬಕಾರಿ ಸುಂಕದಲ್ಲಿ ಭಾರಿ ಇಳಿಕೆ ಮಾಡಿದ್ದು, ಪರಿಣಾಮ ಪೆಟ್ರೋಲ್ ಬೆಲೆ 9.5ರೂ., ಡೀಸೆಲ್ ದರ 7 ರೂ. ಇಳಿಕೆಯಾಗಿದೆ.
We are reducing the Central excise duty on Petrol by Rs 8 per litre and on Diesel by Rs 6 per litre. This will reduce the price of petrol by Rs 9.5 per litre and of Diesel by Rs 7 per litre: Union Finance Minister Nirmala Sitharaman
— ANI (@ANI) May 21, 2022
(File Pic) pic.twitter.com/13YJTpDGIf
ಈ ಕುರಿತು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಾಹಿಚಿ ನೀಡಿದ್ದು, ಇಂಧನ ಬೆಲೆಗಳ ಮೇಲಿನ ಕೇಂದ್ರ ಅಬಕಾರಿ ಸುಂಕದಲ್ಲಿ ತೀವ್ರ ಕಡಿತವನ್ನು ಘೋಷಿಸಲಾಗಿದೆ. ಪೆಟ್ರೋಲ್ ಬೆಲೆ 9.5 ರಷ್ಟು ಮತ್ತು ಡೀಸೆಲ್ 7 ರಷ್ಟು ಅಗ್ಗವಾಗಲಿದೆ. ಪೆಟ್ರೋಲ್ ಮೇಲಿನ ಕೇಂದ್ರ ಅಬಕಾರಿ ಸುಂಕವನ್ನು ಪ್ರತಿ ಲೀಟರ್ಗೆ 8 ಮತ್ತು ಡೀಸೆಲ್ಗೆ 6 ರಷ್ಟು ಕಡಿತಗೊಳಿಸಲಾಗಿದೆ ಎಂದು ಹೇಳಿದರು.
We are also reducing the customs duty on raw materials & intermediaries for plastic products where our import dependence is high. Import duty on some raw materials of steel will be reduced. Export duty on some steel products will be levied: Union Finance Min Nirmala Sitharaman
— ANI (@ANI) May 21, 2022
ಪೆಟ್ರೋಲ್ ಮಾತ್ರವಲ್ಲದೇ ಇತರೆ ವಸ್ತುಗಳ ಬೆಲೆ ಇಳಿಕೆ
ಪೆಟ್ರೋಲ್ ಮಾತ್ರವಲ್ಲದೇ ಇತರೆ ವಸ್ತುಗಳ ಬೆಲೆ ಕೂಡ ಇಳಿಕೆಯಾಗಿದ್ದು, ಈ ಬಗ್ಗೆ ಮಾಹಿತಿ ನೀಡಿದ ನಿರ್ಮಲಾ ಸೀತಾರಾಮನ್, 'ಸಿಮೆಂಟ್ ಲಭ್ಯತೆಯನ್ನು ಸುಧಾರಿಸಲು ಮತ್ತು ಸಿಮೆಂಟ್ ಬೆಲೆಯನ್ನು ಕಡಿಮೆ ಮಾಡಲು ಉತ್ತಮ ಲಾಜಿಸ್ಟಿಕ್ಸ್ ಮೂಲಕ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ನಮ್ಮ ಆಮದು ಅವಲಂಬನೆ ಹೆಚ್ಚಿರುವ ಪ್ಲಾಸ್ಟಿಕ್ ಉತ್ಪನ್ನಗಳಿಗೆ ಕಚ್ಚಾ ವಸ್ತುಗಳು ಮತ್ತು ಮಧ್ಯವರ್ತಿಗಳ ಮೇಲಿನ ಕಸ್ಟಮ್ಸ್ ಸುಂಕವನ್ನು ಸಹ ನಾವು ಕಡಿಮೆ ಮಾಡುತ್ತಿದ್ದೇವೆ. ಉಕ್ಕಿನ ಕೆಲವು ಕಚ್ಚಾ ವಸ್ತುಗಳ ಮೇಲಿನ ಆಮದು ಸುಂಕವನ್ನು ಕಡಿಮೆ ಮಾಡಲಾಗುವುದು. ಕೆಲವು ಉಕ್ಕಿನ ಉತ್ಪನ್ನಗಳ ಮೇಲೆ ರಫ್ತು ಸುಂಕವನ್ನು ವಿಧಿಸಲಾಗುವುದು ಎಂದು ಹೇಳಿದರು.
We are also reducing the customs duty on raw materials & intermediaries for plastic products where our import dependence is high. Import duty on some raw materials of steel will be reduced. Export duty on some steel products will be levied: Union Finance Min Nirmala Sitharaman
— ANI (@ANI) May 21, 2022
ನಾವು ಪೆಟ್ರೋಲ್ ಮೇಲಿನ ಕೇಂದ್ರ ಅಬಕಾರಿ ಸುಂಕವನ್ನು ಲೀಟರ್ಗೆ 8 ರೂಪಾಯಿ ಮತ್ತು ಡೀಸೆಲ್ಗೆ 6 ರೂಪಾಯಿ ಕಡಿತಗೊಳಿಸುತ್ತಿದ್ದೇವೆ. ಇದರಿಂದ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 9.5 ರೂ., ಡೀಸೆಲ್ ದರ 7 ರೂ. ಇಳಿಕೆಯಾಗಲಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.