ಅಜಯ್ ದೇವಗನ್ ರಂತೆ ಸ್ಟಂಟ್ ಪ್ರದರ್ಶನ: ಖಾಕಿ ಅತಿಥಿಯಾದ ಯುವಕ!
ಐದು ನಿಮಿಷಗಳ ಖ್ಯಾತಿಯು ಉತ್ತರ ಪ್ರದೇಶದ ನೋಯ್ಡಾದ 21 ವರ್ಷದ ಯುವಕನಿಗೆ ಜೈಲು ತೋರಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಖ್ಯಾತಿಯಾಗಲು ಅಪಾಯಕಾರಿ ಸ್ಟಂಟ್ ಪ್ರದರ್ಶಿಸಿದ ಯುವಕನನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ.
Published: 22nd May 2022 08:09 PM | Last Updated: 22nd May 2022 08:09 PM | A+A A-

ಅಜಯ್ ದೇವಗನ್ ರಂತೆ ಸ್ಟಂಟ್ ಪ್ರದರ್ಶನ
ನೋಯ್ಡಾ: ಐದು ನಿಮಿಷಗಳ ಖ್ಯಾತಿಯು ಉತ್ತರ ಪ್ರದೇಶದ ನೋಯ್ಡಾದ 21 ವರ್ಷದ ಯುವಕನಿಗೆ ಜೈಲು ತೋರಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಖ್ಯಾತಿಯಾಗಲು ಅಪಾಯಕಾರಿ ಸ್ಟಂಟ್ ಪ್ರದರ್ಶಿಸಿದ ಯುವಕನನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ.
ವ್ಯಾಪಕವಾಗಿ ಹಂಚಿಕೊಳ್ಳಲಾದ ವಿಡಿಯೋವೊಂದರಲ್ಲಿ ರಾಜೀವ್ ಎನ್ನಲಾದ ಯುವಕ ಗೋಲ್ಮಾಲ್ ಚಿತ್ರದಲ್ಲಿ ಎರಡು ಎಸ್ ಯುವಿ ಕಾರುಗಳ ಮೇಲೆ ನಟ ಅಜಯ್ ದೇವಗನ್ ಅವರ ಪ್ರಸಿದ್ಧ ಎಂಟ್ರಿ ಸೀನ್ ದೃಶ್ಯವನ್ನು ಅನುಕರಿಸಲು ಪ್ರಯತ್ನಿಸಿದ್ದ. ಇಂತಹ ಸಾಹಸಕ್ಕೆ ಕೈ ಹಾಕಿದ ಯುವಕನ ಕೈಗೆ ಈಗ ಕೋಳ ಬಿದ್ದಿದೆ.
गाड़ियों व बाइक पर खतरनाक स्टंट करने वाले युवक को थाना सेक्टर-113 नोएडा पुलिस द्वारा गिरफ्तार कर स्टंट में प्रयुक्त वाहनों को सीज किया गया।#UPPolice pic.twitter.com/92yYu33O45
— POLICE COMMISSIONERATE GAUTAM BUDDH NAGAR (@noidapolice) May 22, 2022
ರಾಜೀವ್ ಅಜಾಗರೂಕತೆಯಿಂದ ಚಾಲನೆ ಮಾಡುತ್ತಾ, ಜನನಿಬಿಡ ರಸ್ತೆಯಲ್ಲಿ ತಮ್ಮ ಬೈಕ್ ವ್ಹೀಲಿಂಗ್ ಪ್ರದರ್ಶಿಸಿದ್ದಾರೆ. ಇದು ಕೇವಲ ತನ್ನ ಪ್ರಾಣವನ್ನು ಮಾತ್ರವಲ್ಲದೇ ಇತರ ವಾಹನ ಚಾಲಕರ ಪ್ರಾಣವನ್ನು ಪಣಕ್ಕಿಟ್ಟಂತೆ. ಹೀಗಾಗಿ ಆ ವ್ಯಕ್ತಿಯ ವಿರುದ್ಧ ಮುಂಜಾಗ್ರತಾ ಕ್ರಮ ಕೈಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ವಿಡಿಯೋ ತಯಾರಿಸಲು ಬಳಸಿದ್ದ ಎರಡು ಎಸ್ ಯುವಿಗಳು ಮತ್ತು ಮೋಟಾರ್ ಸೈಕಲ್ ನ್ನು ವಶಪಡಿಸಿಕೊಂಡಿದ್ದು, ಮೋಟಾರು ವಾಹನ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.