
ಬಿಜೆಪಿಯ ಲೋಕಸಭಾ ಸದಸ್ಯ ಅರ್ಜುನ್ ಸಿಂಗ್ ಟಿಎಂಸಿ ಸೇರ್ಪಡೆ
ಕೋಲ್ಕತ್ತ: ಬಿಜೆಪಿಯ ಲೋಕಸಭಾ ಸದಸ್ಯ ಅರ್ಜುನ್ ಸಿಂಗ್ ಭಾನುವಾರದಂದು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಟಿಎಂಸಿಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ನೇತೃತ್ವದಲ್ಲಿ ಅರ್ಜುನ್ ಸಿಂಗ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಈ ಹಿಂದೆ ರಾಜ್ಯದ ನಾಯಕತ್ವದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದ ಅರ್ಜುನ್ ಸಿಂಗ್ ಪಕ್ಷದಲ್ಲಿ ಹಿರಿಯ ಸ್ಥಾನ ಹೊಂದಿದ್ದರೂ ಸರಿಯಾಗಿ ಕೆಲಸ ಮಾಡಲು ಬಿಡುತ್ತಿರಲಿಲ್ಲ ಎಂದು ಆರೋಪಿಸಿದ್ದಾರೆ.
ಮೂಲಗಳ ಪ್ರಕಾರ, ಪಶ್ಚಿಮ ಬಂಗಾಳ ಬಿಜೆಪಿಯ ಕಾರ್ಯನಿರ್ವಹಣೆಯ ಬಗ್ಗೆ ಚರ್ಚಿಸುವುದಕ್ಕಾಗಿ ಇತ್ತೀಚೆಗೆ ಅರ್ಜುನ್ ಸಿಂಗ್ ದೆಹಲಿಗೆ ಭೇಟಿ ನೀಡಿದ್ದರು. ಈ ವೇಳೆ ಸೆಣಬು ಗಿರಣಿ ಸಮಸ್ಯೆಯನ್ನೂ ಚರ್ಚಿಸಿದ್ದರು. ದೆಹಲಿ ಭೇಟಿಯ ನಂತರ ಬೃಹತ್ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನೂ ನೀಡಿದ್ದರು. 2019 ರಲ್ಲಿ ಟಿಎಂಸಿ ತೊರೆದಿದ್ದ ಸಿಂಗ್ ಬಿಜೆಪಿ ಸೇರಿದ್ದರು.