ರೈತರು ಸರ್ಕಾರಗಳನ್ನು ಉರುಳಿಸಬಹುದು: ಮುಖ್ಯಮಂತ್ರಿ ಕೆಸಿಆರ್
ಬೆಳೆಗಳಿಗೆ ಬೆಂಬಲ ಬೆಲೆಗಳ ಮೇಲೆ ಸಾಂವಿಧಾನಿಕ ಖಾತರಿಗಳನ್ನು ಪಡೆಯುವವರೆಗೆ ಕೇಂದ್ರದ ವಿರುದ್ಧ ಹೋರಾಟ ಮುಂದುವರೆಸುವಂತೆ ರೈತ ಮುಖಂಡರಿಗೆ ಮನವಿ ಮಾಡಿರುವ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್, ರೈತರು ಸರ್ಕಾರಗಳನ್ನು ಉರುಳಿಸಬುಹುದು, ಇದು ದೊಡ್ಡ ವಿಷಯವಲ್ಲ ಎಂದಿದ್ದಾರೆ.
Published: 22nd May 2022 11:01 PM | Last Updated: 22nd May 2022 11:06 PM | A+A A-

ಕೆಸಿ ಚಂದ್ರಶೇಖರ್ ರಾವ್
ಚಂಡೀಗಢ: ಬೆಳೆಗಳಿಗೆ ಬೆಂಬಲ ಬೆಲೆಗಳ ಮೇಲೆ ಸಾಂವಿಧಾನಿಕ ಖಾತರಿಗಳನ್ನು ಪಡೆಯುವವರೆಗೆ ಕೇಂದ್ರದ ವಿರುದ್ಧ ಹೋರಾಟ ಮುಂದುವರೆಸುವಂತೆ ರೈತ ಮುಖಂಡರಿಗೆ ಮನವಿ ಮಾಡಿರುವ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್, ರೈತರು ಸರ್ಕಾರಗಳನ್ನು ಉರುಳಿಸಬುಹುದು, ಇದು ದೊಡ್ಡ ವಿಷಯವಲ್ಲ ಎಂದಿದ್ದಾರೆ.
ಇದನ್ನೂ ಓದಿ: ಜುಲೈನಲ್ಲಿ ರಾಷ್ಟ್ರಪತಿ ಚುನಾವಣೆ: ಪ್ರತಿಪಕ್ಷ ಮುಖಂಡರೊಂದಿಗೆ ಕೆಸಿಆರ್ ಸಭೆ
ಗಲ್ವಾನ್ ಕಣಿವೆ ಘರ್ಷಣೆಯಲ್ಲಿ ಹುತಾತ್ಮರಾದ ಯೋಧರಿಗೆ ಹಾಗೂ ಕಳೆದ ವರ್ಷ ರೈತ ವಿರೋಧಿ ಕಾನೂನು ಹೋರಾಟದ ವೇಳೆ ಮಡಿದ ರೈತರಿಗೆ ಶ್ರದ್ದಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಕೆ. ಚಂದ್ರಶೇಖರ್ ರಾವ್, ಹೆಚ್ಚುತ್ತಿರುವ ರಸಗೊಬ್ಬರ ಬೆಲೆಗಳು, ದೋಷಪೂರಿತ ಕನಿಷ್ಠ ಬೆಂಬಲ ಬೆಲೆ ವ್ಯವಸ್ಥೆ ಮತ್ತು ನಿರಂತರ ಇಂಧನ ಏರಿಕೆ ಮತ್ತಿತರ ವಿಷಯ ಪ್ರಸ್ತಾಪಿಸಿ ಕೇಂದ್ರದ ಮೇಲೆ ದಾಳಿ ನಡೆಸಿದರು.
ತಮ್ಮ ಸರ್ಕಾರದ ಸಾಧನೆಗಳನ್ನು ಎತ್ತಿ ಹಿಡಿದ ಕೆಸಿಆರ್, ತೆಲಂಗಾಣ ರಚನೆಯಾಗುವ ಮೊದಲು ರೈತರು ತೀವ್ರ ಸಂಕಷ್ಟದಲ್ಲಿದ್ದರು. ಪ್ರತಿದಿನ ಅನೇಕ ಮಂದಿ ಆತ್ಮಹತ್ಯೆಗೆ ಶರಣಾಗುತ್ತಿದ್ದರು. ಅಲ್ಲಿ ವಿದ್ಯುತ್ ಇರಲಿಲ್ಲ. ಆದರೆ, ತೆಲಂಗಾಣ ರಚನೆಯಾದ ನಂತರ ವಿದ್ಯುತ್ ಸಮಸ್ಯೆ ಬಗೆಹರಿದಿದೆ. ಉಚಿತವಾಗಿ 24 ಗಂಟೆ ವಿದ್ಯುತ್ ನೀಡುತ್ತೇವೆ ಎಂದರು.