'ನೆಹರೂ ಅಸ್ಸಾಂ ಅನ್ನು ಪಾಕಿಸ್ತಾನಕ್ಕೆ ಕೊಡಲು ಮುಂದಾಗಿದ್ದರು: ರಾಹುಲ್ ವಿರುದ್ಧ ಸಿಎಂ ಹಿಮಂತ್ ಬಿಸ್ವಾ ಶರ್ಮಾ ವಾಗ್ದಾಳಿ
'ಮಾಜಿ ಪ್ರಧಾನಿಗಳು ಜವಾಹರ್ ಲಾಲ್ ನೆಹರು ಅಸ್ಸಾಂ ಅನ್ನು ಪಾಕಿಸ್ತಾನಕ್ಕೆ ಕೊಡಲು ಮುಂದಾಗಿದ್ದರು' ಎಂದು ರಾಹುಲ್ ಗಾಂಧಿ ವಿರುದ್ಧ ಸಿಎಂ ಹಿಮಂತ ಬಿಸ್ಸಾ ಶರ್ಮಾ ವಾಗ್ದಾಳಿ ನಡೆಸಿದ್ದಾರೆ.
Published: 22nd May 2022 04:01 PM | Last Updated: 22nd May 2022 04:01 PM | A+A A-

ರಾಹುಲ್ ಗಾಂಧಿ
ಗುವಾಹಟಿ: 'ಮಾಜಿ ಪ್ರಧಾನಿಗಳು ಜವಾಹರ್ ಲಾಲ್ ನೆಹರು ಅಸ್ಸಾಂ ಅನ್ನು ಪಾಕಿಸ್ತಾನಕ್ಕೆ ಕೊಡಲು ಮುಂದಾಗಿದ್ದರು' ಎಂದು ರಾಹುಲ್ ಗಾಂಧಿ ವಿರುದ್ಧ ಸಿಎಂ ಹಿಮಂತ ಬಿಸ್ಸಾ ಶರ್ಮಾ ವಾಗ್ದಾಳಿ ನಡೆಸಿದ್ದಾರೆ.
ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಭಾಷಣವನ್ನು ವಿದೇಶಾಂಗ ಸಚಿವ ಎಸ್ ಜೈಶಂಕರ್ ಟೀಕಿಸಿದ ನಂತರ, ಕೇಂದ್ರ ಸಚಿವ ಕಿರಣ್ ರಿಜಿಜು ಮತ್ತು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಸಹ ರಾಹುಲ್ ಹೇಳಿಕೆಗಳಿಗೆ ತಿರುಗೇಟು ನೀಡಿದ್ದಾರೆ.
ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಿಮಂತ ಬಿಸ್ವಾ ಶರ್ಮಾ ಅವರು, 'ಉತ್ತರಪ್ರದೇಶ, ಮಹಾರಾಷ್ಟ್ರ, ಅಸ್ಸಾಂ, ತಮಿಳುನಾಡು ಭಾರತದೊಂದಿಗೆ ಶಾಂತಿ ಸ್ಥಾಪಿಸಿವೆ' ಎಂಬ ರಾಹುಲ್ ಗಾಂಧಿ ಹೇಳಿಕೆ ಸುಳ್ಳು ಎಂದು ಹೇಳಿದ್ದಾರೆ.
This is height of fake intellectualism!
— Himanta Biswa Sarma (@himantabiswa) May 21, 2022
Assam never 'negotiated peace' with India. With Gandhiji's support, Gopinath Bordoloi had to struggle to keep Assam with Bharat Mata since Nehru left us to be with Pakistan as per Cabinet Mission Plan.
Get your facts right, Mr Gandhi. pic.twitter.com/jx7Cz3VOGH
ಗಾಂಧೀಜಿಯವರ ಬೆಂಬಲದಿಂದ ಅಸ್ಸಾಂ ಅನ್ನು ಭಾರತಮಾತೆಯ ಬಳಿ ಉಳಿಸಿಕೊಳ್ಳಲು ಗೋಪಿನಾಥ್ ಬೋರ್ಡೊಲೊಯ್ ಅವರು ಹೋರಾಡಬೇಕಾಯಿತು. ಏಕೆಂದರೆ ನೆಹರು ಅವರು ಕ್ಯಾಬಿನೆಟ್ ಮಿಷನ್ ಯೋಜನೆಯಂತೆ ಅಸ್ಸಾಂನ್ನು ಪಾಕಿಸ್ತಾನಕ್ಕೆ ಕೊಡಲು ಮುಂದಾಗಿದ್ದರು ಎಂದು ಹೇಳಿದ್ದಾರೆ. ನಿಮ್ಮ ಸತ್ಯಗಳನ್ನು ಸರಿಯಾಗಿ ತಿಳಿದುಕೊಳ್ಳಿ, ನಕಲಿ ವಿಚಾರವಾದದ ಉತ್ತುಂಗಕ್ಕೆ ಹೋಗಬೇಡಿ ಎಂದು ರಾಹುಲ್ ಗಾಂಧಿಗೆ ಕಿವಿಮಾತು ಹೇಳಿದ್ದಾರೆ.