ಉತ್ತರಾಖಂಡದಲ್ಲಿ ಎಎಪಿ ಸಿಎಂ ಅಭ್ಯರ್ಥಿಯಾಗಿದ್ದ ಕರ್ನಲ್ ಅಜಯ್ ಕೊಥಿಯಾಲ್ ಬಿಜೆಪಿಗೆ ಸೇರ್ಪಡೆ
ಕಳೆದ ಫೆಬ್ರವರಿಯಲ್ಲಿ ನಡೆದ ಉತ್ತರಾಖಂಡ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದ ಕರ್ನಲ್(ನಿವೃತ್ತ) ಅಜಯ್ ಕೊಥಿಯಾಲ್ ಅವರು ಮಂಗಳವಾರ ಎಎಪಿ ತೊರೆದು...
Published: 24th May 2022 08:12 PM | Last Updated: 24th May 2022 08:12 PM | A+A A-

ಕರ್ನಲ್ ಅಜಯ್ ಕೊಥಿಯಾಲ್ ಬಿಜೆಪಿಗೆ ಸೇರ್ಪಡೆ
ಡೆಹ್ರಾಡೂನ್: ಕಳೆದ ಫೆಬ್ರವರಿಯಲ್ಲಿ ನಡೆದ ಉತ್ತರಾಖಂಡ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದ ಕರ್ನಲ್(ನಿವೃತ್ತ) ಅಜಯ್ ಕೊಥಿಯಾಲ್ ಅವರು ಮಂಗಳವಾರ ಎಎಪಿ ತೊರೆದು ಆಡಳಿತರೂಢ ಬಿಜೆಪಿ ಸೇರ್ಪಡೆಯಾಗಿದ್ದಾರೆ.
ಅಜಯ್ ಕೊಥಿಯಾಲ್ ಅವರು ಇಂದು ಉತ್ತರಾಖಂಡ್ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಮದನ್ ಕೌಶಿಕ್ ಅವರ ಸಮ್ಮುಖದಲ್ಲಿ ಬಿಜೆಪಿ ಸೇರಿದರು.
ಇದನ್ನು ಓದಿ: ಉತ್ತರಾಖಂಡ್ ಸಿಎಂ ಧಾಮಿಗೆ ತನ್ನ ಶಾಸಕ ಸ್ಥಾನವನ್ನು ಬಿಟ್ಟುಕೊಡಲು ಮುಂದಾದ ಕಾಂಗ್ರೆಸ್ ಶಾಸಕ!
ಕರ್ನಲ್ ಕೊಥಿಯಾಲ್ ಅವರು ಮೇ 18 ರಂದು ಆಮ್ ಆದ್ಮಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದರು.
ಎಎಪಿ ಉತ್ತರಾಖಂಡ ವಿಧಾನಸಭೆ ಚುನಾವಣೆಯಲ್ಲಿ ದೊಡ್ಡ ಗೆಲುವು ಸಾಧಿಸುವ ಗುರಿ ಹೊಂದಿತ್ತು ಮತ್ತು ಎಲ್ಲಾ 70 ವಿಧಾನಸಭಾ ಸ್ಥಾನಗಳಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಆದರೆ ಮತದಾರರನ್ನು ಓಲೈಸುವಲ್ಲಿ ವಿಫಲವಾಯಿತು.