ಬಂಧಿತ ಐಎಎಸ್ ಅಧಿಕಾರಿ ಜೊತೆ ಅಮಿತ್ ಶಾ ಫೋಟೊ ಹಂಚಿದ್ದ ನಿರ್ದೇಶಕನಿಗೆ ಜಾಮೀನು ನಿರಾಕರಣೆ
ಬಂಧಿತ ಜಾರ್ಖಂಡ್ ಐಎಎಸ್ ಅಧಿಕಾರಿಯೊಂದಿಗಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಫೋಟೊವನ್ನು ಹಂಚಿದ್ದ ಸಿನಿಮಾ ನಿರ್ದೇಶಕನಿಗೆ ಬಂಧನದಿಂದ ತಡೆ ನೀಡುವ ಜಾಮೀನು ಮಂಜೂರು ಮಾಡಲು ಬಾಂಬೆ ಹೈಕೋರ್ಟ್ ನಿರಾಕರಿಸಿದೆ.
Published: 24th May 2022 07:52 PM | Last Updated: 24th May 2022 08:01 PM | A+A A-

ಅಮಿತ್ ಶಾ
ಮುಂಬೈ: ಬಂಧಿತ ಜಾರ್ಖಂಡ್ ಐಎಎಸ್ ಅಧಿಕಾರಿಯೊಂದಿಗಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಫೋಟೊವನ್ನು ಹಂಚಿದ್ದ ಸಿನಿಮಾ ನಿರ್ದೇಶಕನಿಗೆ ಬಂಧನದಿಂದ ತಡೆ ನೀಡುವ ಜಾಮೀನು ಮಂಜೂರು ಮಾಡಲು ಬಾಂಬೆ ಹೈಕೋರ್ಟ್ ನಿರಾಕರಿಸಿದೆ.
ಜಾರಿ ನಿರ್ದೇಶನಾಲಯ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರ್ಖಂಡ್ ಕೇಡರ್ ನ ಐಎಎಸ್ ಅಧಿಕಾರಿ ಪೂಜಾ ಸಿಂಘಾಲ್ ನ್ನು ಬಂಧಿಸಲಾಗಿತ್ತು.
ರಜೆ ಪೀಠದ ನ್ಯಾ. ಭಾರತೀ ದಾಂಗ್ರೆ ಸಿನಿಮಾ ನಿರ್ದೇಶಕ ಅವಿನಾಶ್ ದಾಸ್ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಿದ್ದಾರೆ. ಅವಿನಾಶ್ ದಾಸ್ ವಿರುದ್ಧ ಗುಜರಾತ್ ಪೊಲೀಸರು ಪ್ರಕರಣ ದಾಖಲಿಸಿದ್ದರು. ಅರ್ಜಿ ವಜಾಗೊಳಿಸಿರುವ ನ್ಯಾಯಾಲಯ ಸೂಕ್ತ ವೇದಿಕೆಯಲ್ಲಿ ಅರ್ಜಿ ಸಲ್ಲಿಸುವಂತೆ ನಿರ್ದೇಶನ ನೀಡಿದೆ.
ದಾಸ್ ವಿರುದ್ಧ ಎಫ್ಐಆರ್ ದಾಖಲಾಗಿರುವ ಪ್ರದೇಶ ಅಹ್ಮದಾಬಾದ್ ಆಗಿದ್ದು ಮುಂಬೈ ನಿಂದ ಹೆಚ್ಚು ದೂರವಿಲ್ಲ ಎಂದು ನ್ಯಾ. ದಾಂಗ್ರೆ ಹೇಳಿದ್ದಾರೆ.