ಚೀನಾ ವೀಸಾ ಪ್ರಕರಣ: ಕಾರ್ತಿ ಚಿದಂಬರಂ ವಿರುದ್ಧ ಪಿಎಂಎಲ್ಎ ಅಡಿ ಕೇಸ್ ದಾಖಲಿಸಿದ ಇಡಿ
2011 ರಲ್ಲಿ ಪಿ ಚಿದಂಬರಂ ಅವರು ಕೇಂದ್ರ ಗೃಹ ಸಚಿವರಾಗಿದ್ದಾಗ 263 ಚೀನಿ ಪ್ರಜೆಗಳಿಗೆ ವೀಸಾ ನೀಡಿದ ಪ್ರಕರಣ ಸಂಬಂಧ ಚಿದಂಬರಂ ಪುತ್ರ, ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ, ಭಾಸ್ಕರರಾಮನ್ ಮತ್ತು ಇತರರ ವಿರುದ್ಧ ಜಾರಿ...
Published: 25th May 2022 03:48 PM | Last Updated: 25th May 2022 03:48 PM | A+A A-

ಕಾರ್ತಿ ಚಿದಂಬರಂ
ನವದೆಹಲಿ: 2011 ರಲ್ಲಿ ಪಿ ಚಿದಂಬರಂ ಅವರು ಕೇಂದ್ರ ಗೃಹ ಸಚಿವರಾಗಿದ್ದಾಗ 263 ಚೀನಿ ಪ್ರಜೆಗಳಿಗೆ ವೀಸಾ ನೀಡಿದ ಪ್ರಕರಣ ಸಂಬಂಧ ಚಿದಂಬರಂ ಪುತ್ರ, ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ, ಭಾಸ್ಕರರಾಮನ್ ಮತ್ತು ಇತರರ ವಿರುದ್ಧ ಜಾರಿ ನಿರ್ದೇಶನಾಲಯ(ಇಡಿ) ಬುಧವಾರ ಪಿಎಂಎಲ್ಎ ಅಡಿ ಪ್ರಕರಣ ದಾಖಲಿಸಿದೆ.
ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯ ಶೀಘ್ರದಲ್ಲೇ ಕಾರ್ತಿ ಚಿದಂಬರಂ ಮತ್ತು ಇತರರಿಗೆ ಸಮನ್ಸ್ ನೀಡಲಿದೆ. ಕಾಂಗ್ರೆಸ್ ಸಂಸದ ಇಂದು ದೆಹಲಿಯ ಸಿಬಿಐ ಪ್ರಧಾನ ಕಚೇರಿಯಲ್ಲಿ ತನಿಖೆಗೆ ಒಳಗಾಗುವ ಸಾಧ್ಯತೆಯಿದೆ. ಇದಕ್ಕೂ ಮೊದಲು ಮೇ 17 ರಂದು ಸಿಬಿಐ ಕಾರ್ತಿ ಅವರ ನಿಕಟವರ್ತಿ ಎಸ್ ಭಾಸ್ಕರ್ ರಾಮನ್ ಅವರನ್ನು ಪ್ರಕರಣದಲ್ಲಿ ಬಂಧಿಸಿತ್ತು.
ಇದನ್ನು ಓದಿ: ಭ್ರಷ್ಟಾಚಾರ ಪ್ರಕರಣ: ಕಾರ್ತಿ ಚಿದಂಬರಂ ಆಪ್ತ ಎಸ್.ಭಾಸ್ಕರರಾಮನ್ ಬಂಧನ
ವೀಸಾ ಪ್ರಕರಣದಲ್ಲಿ ಕಾರ್ತಿ ಚಿದಂಬರಂ ಹಾಗೂ ಅವರ ನಿಕಟವರ್ತಿ ಎಸ್ ಭಾಸ್ಕರರಾಮನ್ಗೆ 50 ಲಕ್ಷ ರೂ. ಕಿಕ್ಬ್ಯಾಕ್ ನೀಡಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಸಿಬಿಐ ಅವರ ವಿರುದ್ಧ ಎಫ್ಐಆರ್ ದಾಖಲಿಸಿದೆ.
ಇದನ್ನು ಓದಿ: ಚೀನಾ ಪ್ರಜೆಗಳಿಗೆ ವೀಸಾ ಪಡೆಯುವಲ್ಲಿ ನೆರವು ನೀಡಿ ಹಣ ಪಡೆದ ಆರೋಪ: ಕಾರ್ತಿ ಚಿದಂಬರಂ ವಿರುದ್ಧ ಸಿಬಿಐ ಕೇಸು ದಾಖಲು
ಕಾರ್ತಿ ಅವರು ಭಾರತಕ್ಕೆ ತಲುಪಿದ 16 ಗಂಟೆಗಳ ಒಳಗೆ ಸಿಬಿಐ ಮುಂದೆ ಹಾಜರಾಗಬೇಕು ಎಂದು ನ್ಯಾಯಾಲಯವು ಈಗಾಗಲೇ ನಿರ್ದೇಶಿಸಿರುವುದರಿಂದ ನಾವು ಅವರಿಗೆ ಸಮನ್ಸ್ ನೀಡಿಲ್ಲ. ಅವರು ಭಾರತಕ್ಕೆ ಆಗಮಿಸಿದ 16 ಗಂಟೆಗಳ ಒಳಗೆ ತನಿಖೆಗೆ ಹಾಜರಾಗಲು ವಿಫಲರಾದರೆ ಸಮನ್ಸ್ ನೀಡಬಹುದು ಎನ್ನಲಾಗಿದೆ.