ಕರಾಚಿಯಲ್ಲಿ ದಾವೂದ್; ಕುಟುಂಬಕ್ಕೆ ಪ್ರತಿತಿಂಗಳು 10 ಲಕ್ಷ ರೂ. ಖರ್ಚು: ಅಕ್ರಮ ಹಣ ವರ್ಗಾವಣೆ ಪ್ರಕರಣದ ಸಾಕ್ಷಿ ಹೇಳಿಕೆ
ಮಹಾರಾಷ್ಟ್ರ ಸಚಿವ ನವಾಬ್ ಮಲೀಕ್, ವಿರುದ್ಧದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸಾಕ್ಷಿಯೋರ್ವ ದಾವೂದ್ ಇಬ್ರಾಹಿಂ ಬಗ್ಗೆ ಹೇಳಿಕೆ ನೀಡಿದ್ದು, ದಾವೂದ್ ಇಬ್ರಾಹಿಮ್ ಪಾಕಿಸ್ತಾನದ ಕರಾಚಿ ನಗರದಲ್ಲಿದ್ದಾನೆ ಎಂದು ಹೇಳಿದ್ದಾನೆ.
Published: 25th May 2022 02:55 PM | Last Updated: 25th May 2022 03:26 PM | A+A A-

ದಾವೂದ್ ಇಬ್ರಾಹಿಂ
ಮುಂಬೈ: ಮಹಾರಾಷ್ಟ್ರ ಸಚಿವ ನವಾಬ್ ಮಲೀಕ್, ವಿರುದ್ಧದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸಾಕ್ಷಿಯೋರ್ವ ದಾವೂದ್ ಇಬ್ರಾಹಿಂ ಬಗ್ಗೆ ಹೇಳಿಕೆ ನೀಡಿದ್ದು, ದಾವೂದ್ ಇಬ್ರಾಹಿಮ್ ಪಾಕಿಸ್ತಾನದ ಕರಾಚಿ ನಗರದಲ್ಲಿದ್ದಾನೆ ಎಂದು ಹೇಳಿದ್ದಾನೆ.
ಮತ್ತೋರ್ವ ಸಾಕ್ಷಿ ಆತನ ಖರ್ಚು ವೆಚ್ಚಗಳ ಬಗ್ಗೆ ಮಾಹಿತಿ ನೀಡಿದ್ದು ತನ್ನ ಪರಿವಾರಕ್ಕಾಗಿ ಮಾಸಿಕ 10 ಲಕ್ಷ ರೂಪಾಯಿ ಖರ್ಚು ಮಾಡುತ್ತಾನೆಂದು ಹೇಳಿದ್ದಾನೆ.
ಈ ಹೇಳಿಕೆಗಳು ಜಾರಿ ನಿರ್ದೇಶನಾಲಯದ ಚಾರ್ಜ್ ನಲ್ಲಿ ಉಲ್ಲೇಖಗೊಂಡಿದ್ದು, ಅದರ ಭಾಗವಾಗಿವೆ. ದಾವೂದ್ ಇಬ್ರಾಹಿಮ್ ನ ಆಸ್ತಿಗೆ ಸಂಬಂಧಿಸಿದಂತೆ ಮಲೀಕ್ ವಿರುದ್ಧ ಜಾರಿ ನಿರ್ದೇಶನಾಲಯ ಚಾರ್ಜ್ ಶೀಟ್ ದಾಖಲಿಸಿತ್ತು.
ತನಿಖಾ ಸಂಸ್ಥೆ ಎದುರು ಹೇಳಿಕೆ ನೀಡಿದ್ದ ಗ್ಯಾಂಗ್ಸ್ಟರ್ ಹಸೀನಾ ಪಾರ್ಕರ್ ನ ಪುತ್ರ ಅಲಿಶಾ ಪಾರ್ಕರ್, ದಾವೂದ್ ಇಬ್ರಾಹಿಮ್ ತನ್ನ ಸೋದರ ಮಾವನಾಗಿದ್ದು 1986 ರಲ್ಲಿ ಮುಂಬೈ ನ ದಂಬಾರ್ವಾಲ ಕಟ್ಟಡದ 4 ನೇ ಮಹಡಿಯಲ್ಲಿ ವಾಸವಿದ್ದ ಎಂದು ಹೇಳಿದ್ದಾರೆ.
1986 ರ ಬಳಿಕ ದಾವೂದ್ ಇಬ್ರಾಹಿಮ್ ಪಾಕಿಸ್ತಾನದ ಕರಾಚಿಯಲ್ಲಿದ್ದ ಎಂಬ ಮಾಹಿತಿ ಹಲವು ಮೂಲಗಳಿಂದ ತಿಳಿದುಬಂದಿತ್ತು.