ಒಬ್ಬ ಪುರುಷ ಮತ್ತೊಬ್ಬ ಪುರುಷನನ್ನು ಮದುವೆಯಾದರೆ ಮಕ್ಕಳಾಗುತ್ತವೆಯೇ?: ಬಿಹಾರ ಸಿಎಂ ನಿತೀಶ್ ಕುಮಾರ್
ವರದಕ್ಷಿಣೆ ಪದ್ಧತಿಯನ್ನು ಕಟುವಾಗಿ ಟೀಕಿಸಿದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು, ‘ಒಬ್ಬ ಪುರುಷ ಮತ್ತೊಬ್ಬ ಪುರುಷನನ್ನು ಮದುವೆಯಾದರೆ ಮಕ್ಕಳಾಗುತ್ತವೆಯೇ? ಮಕ್ಕಳಾಗಲು ಮಹಿಳೆಯನ್ನೇ ಮದುವೆಯಾಗಬೇಕು’
Published: 25th May 2022 04:45 PM | Last Updated: 25th May 2022 04:45 PM | A+A A-

ಬಿಹಾರ್ ಸಿಎಂ ನಿತೀಶ್ ಕುಮಾರ್
ಪಾಟ್ನಾ: ವರದಕ್ಷಿಣೆ ಪದ್ಧತಿಯನ್ನು ಕಟುವಾಗಿ ಟೀಕಿಸಿದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು, ‘ಒಬ್ಬ ಪುರುಷ ಮತ್ತೊಬ್ಬ ಪುರುಷನನ್ನು ಮದುವೆಯಾದರೆ ಮಕ್ಕಳಾಗುತ್ತವೆಯೇ? ಮಕ್ಕಳಾಗಲು ಮಹಿಳೆಯನ್ನೇ ಮದುವೆಯಾಗಬೇಕು’ ಎಂದು ಬುಧವಾರ ಹೇಳಿದ್ದಾರೆ.
ಇಂದು ಪಾಟ್ನಾದಲ್ಲಿ ನೂತನವಾಗಿ ನಿರ್ಮಿಸಲಾದ ಬಾಲಕಿಯರ ಹಾಸ್ಟೆಲ್ ಉದ್ಘಾಟಿಸಿ ಮಾತನಾಡಿದ ನಿತೀಶ್ ಕುಮಾರ್ ಅವರು, ವರದಕ್ಷಿಣೆಗಾಗಿ ಮದುವೆಯಾಗುವುದು ಒಬ್ಬ ಪುರುಷ ಮತ್ತೊಬ್ಬ ಪುರುಷನನ್ನು ಮದುವೆಯಾಗುವುದಕ್ಕಿಂತ ಕೆಟ್ಟದ್ದು. ಮಕ್ಕಳನ್ನು ಪಡೆಯಲು ಒಬ್ಬ ಪುರುಷ ಮಹಿಳೆಯನ್ನೇ ಮದುವೆಯಾಗಬೇಕಿದೆ. ಒಬ್ಬ ಪುರುಷ ಮತ್ತೊಬ್ಬ ಪುರುಷನನ್ನು ಮದುವೆಯಾದರೆ ಸಂತಾನ ಹೊಂದಲು ಸಾಧ್ಯವೆ?" ಎಂದು ಪ್ರಶ್ನಿಸಿದ್ದಾರೆ.
ಇದನ್ನು ಓದಿ: ರಾಜ್ಯಸಭಾ ಸ್ಥಾನಕ್ಕೆ ಕರ್ನಾಟಕ ಮೂಲದ ಅನಿಲ್ ಹೆಗ್ಡೆ ನಾಮನಿರ್ದೇಶನ ಮಾಡಿ ಅಚ್ಚರಿ ಮೂಡಿಸಿದ ಜೆಡಿಯು
ಇದೇ ವೇಳೆ ತಮ್ಮ ಕಾಲೇಜು ದಿನಗಳನ್ನು ನೆನಪು ಮಾಡಿಕೊಂಡ ಬಿಹಾರ ಸಿಎಂ, ನಾವು ಇಂಜಿನಿಯರಿಂಗ್ ಕಲಿಯುತ್ತಿದ್ದಾಗ ನಮ್ಮ ತರಗತಿಯಲ್ಲಿ ಒಬ್ಬರು ಹುಡುಗಿಯರು ಇರಲಿಲ್ಲ. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಸಾಕಷ್ಟು ಹೆಣ್ಣು ಮಕ್ಕಳು ಇಂಜಿನಿಯರಿಂಗ್ ಹಾಗೂ ವೈದ್ಯಕೀಯ ಕೋರ್ಸ್‌ಗಳನ್ನು ಮಾಡುತ್ತಿದ್ದಾರೆ ಎಂದರು.
ವರದಕ್ಷಿಣೆ ತೆಗೆದುಕೊಳ್ಳದ ಮದುವೆಯಲ್ಲಿ ಮಾತ್ರ ಭಾಗವಹಿಸುವುದಾಗಿ ನಾನು ಈಗಾಗಲೇ ಹೇಳಿದ್ದೇನೆ. ನಾವು ವರದಕ್ಷಿಣೆ ವ್ಯವಸ್ಥೆ ಮತ್ತು ಬಾಲ್ಯ ವಿವಾಹದ ವಿರುದ್ಧ ಅಭಿಯಾನವನ್ನು ಪ್ರಾರಂಭಿಸಿದ್ದೇವೆ ಎಂದು ಬಿಹಾರ ಸಿಎಂ ಹೇಳಿದ್ದಾರೆ.