ಜಮ್ಮು-ಕಾಶ್ಮೀರ: ಕಂದಕಕ್ಕೆ ಉರುಳಿ ಬಿದ್ದ ಟವೆರಾ ಕಾರು, 7-8 ಮಂದಿ ಸಾವು
ಜಮ್ಮು ಮತ್ತು ಕಾಶ್ಮೀರದ ಜೊಜಿಲಾ ಪಾಸ್ನಲ್ಲಿ ವಾಹನವೊಂದು ರಸ್ತೆಯಿಂದ ಆಯತಪ್ಪಿ ಆಳವಾದ ಕಮರಿಗೆ ಬಿದ್ದ ಪರಿಣಾಮ ವಾಹನದಲ್ಲಿದ್ದ 7-8 ಮಂದಿ ಸಾವನ್ನಪ್ಪಿದ್ದಾರೆಂದು ಗುರುವಾರ ತಿಳಿದುಬಂದಿದೆ.
Published: 26th May 2022 11:50 AM | Last Updated: 26th May 2022 11:52 AM | A+A A-

ಕಂದಕಕ್ಕೆ ಉರುಳಿ ಬಿದ್ದಿರುವ ಕಾರು.
ಕಾರ್ಗಿಲ್ (ಜಮ್ಮು ಮತ್ತು ಕಾಶ್ಮೀರ): ಜಮ್ಮು ಮತ್ತು ಕಾಶ್ಮೀರದ ಜೊಜಿಲಾ ಪಾಸ್ನಲ್ಲಿ ವಾಹನವೊಂದು ರಸ್ತೆಯಿಂದ ಆಯತಪ್ಪಿ ಆಳವಾದ ಕಮರಿಗೆ ಬಿದ್ದ ಪರಿಣಾಮ ವಾಹನದಲ್ಲಿದ್ದ 7-8 ಮಂದಿ ಸಾವನ್ನಪ್ಪಿದ್ದಾರೆಂದು ಗುರುವಾರ ತಿಳಿದುಬಂದಿದೆ.
ಕಾರ್ಗಿಲ್ನಿಂದ ಶ್ರೀನಗರಕ್ಕೆ ತೆರಳುತ್ತಿದ್ದ ಟವೇರಾ ವಾಹನವು ಝೋಜಿಲಾ ಪಾಸ್ನಲ್ಲಿದ್ದ ಆಳವಾದ ಕಂದಕಕ್ಕೆ ಉರುಳಿ ಬಿದ್ದಿದೆ ಎಂದು ವರದಿಗಳು ತಿಳಿಸಿವೆ.
Around 7-8 people are feared to have died after a vehicle skidded off the road and fell into a deep gorge at Zojila pass early morning: Disaster Management Authority JK Govt
— ANI (@ANI) May 26, 2022
ಕಂದಕವು 400-500 ಅಡಿಗಳಷ್ಟು ಆಳವಿದ್ದು, ಘಟನೆಯಲ್ಲಿ ಕಾರಿನಲ್ಲಿದ್ದ 8 ಮಂದಿ ಸಾವನ್ನಪ್ಪಿರುವ ಶಂಕೆಗಳಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದೀಗ ಸ್ಥಳಕ್ಕಾಗಮಿಸಿರುವ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ.