ನವದೆಹಲಿ: ಜೀವ ಬೆದರಿಕೆ ಕರೆ, ಪೊಲೀಸರ ಮೊರೆಹೋದ ಸಂಸದೆ ನವನೀತ್ ರಾಣಾ
ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ನಿವಾಸ ಮಾತ್ರೋಶ್ರೀ ಹೊರಗೆ ಹನುಮಾನ್ ಚಾಲೀಸಾ ಕೇಸ್ ಗೆ ಸಂಬಂಧಿಸಿದಂತೆ ಮುಂಬೈ ಕೋರ್ಟ್ ವೊಂದರಿಂದ ಇತ್ತೀಚಿಗೆ ಜಾಮೀನು ಪಡೆದಿರುವ ಪಕ್ಷೇತರ ಸಂಸದೆ ನವನೀತ್ ರಾಣಾ, ತನಗೆ ಹಲವು ಜೀವ ಬೆದರಿಕೆಯ ಕರೆ ಬರುತ್ತಿರುವುದಾಗಿ ಆರೋಪಿಸಿ ದೆಹಲಿ ಪೊಲೀಸರಿಗೆ ದೂರು ನೀಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
Published: 26th May 2022 12:15 AM | Last Updated: 26th May 2022 01:13 PM | A+A A-

ಸಂಸದೆ ನವನೀತ್
ನವದೆಹಲಿ: ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ನಿವಾಸ ಮಾತ್ರೋಶ್ರೀ ಹೊರಗೆ ಹನುಮಾನ್ ಚಾಲೀಸಾ ಕೇಸ್ ಗೆ ಸಂಬಂಧಿಸಿದಂತೆ ಮುಂಬೈ ಕೋರ್ಟ್ ವೊಂದರಿಂದ ಇತ್ತೀಚಿಗೆ ಜಾಮೀನು ಪಡೆದಿರುವ ಪಕ್ಷೇತರ ಸಂಸದೆ ನವನೀತ್ ರಾಣಾ, ತನಗೆ ಹಲವು ಜೀವ ಬೆದರಿಕೆಯ ಕರೆ ಬರುತ್ತಿರುವುದಾಗಿ ಆರೋಪಿಸಿ ದೆಹಲಿ ಪೊಲೀಸರಿಗೆ ದೂರು ನೀಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಮಂಗಳವಾರ ಸಂಜೆ 5-27 ರಿಂದ ಸಂಜೆ 5-47ರೊಳಗೆ ತನ್ನ ವೈಯಕ್ತಿಕ ಮೊಬೈಲ್ ನಂಬರ್ ನಿಂದ 11 ಜೀವ ಬೆದರಿಕೆ ಕರೆಗಳನ್ನು ನವನೀತ್ ಸ್ವೀಕರಿಸಿರುವುದಾಗಿ ಅವರ ಆಪ್ತ ಸಹಾಯಕ ದಾಖಲಿಸಿರುವ ದೂರಿನಲ್ಲಿ ಹೇಳಲಾಗಿದೆ. ಕರೆ ಮಾಡಿರುವ ವ್ಯಕ್ತಿಯೊಬ್ಬ ಅವಹೇಳನಕಾರಿಯಾಗಿ ನಿಂಧಿಸಿದ್ದು, ಒಂದು ವೇಳೆ ಆಕೆ ಮಹಾರಾಷ್ಟ್ರಕ್ಕೆ ಬಂದರೆ ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ಹೇಳಲಾಗಿದೆ. ರಾಣಾ ಆಘಾತಕ್ಕೊಳಗಾಗಿದ್ದು, ನವದೆಹಲಿ ಜಿಲ್ಲೆಯ ನಾರ್ತ್ ಅವೆನ್ಯೂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇದನ್ನೂ ಓದಿ: ಅಕ್ರಮ ಫ್ಲಾಟ್ ನಿರ್ಮಾಣ: ರಾಣಾ ದಂಪತಿಗೆ ನೋಟಿಸ್ ಜಾರಿ ಮಾಡಿದ ಬಿಎಂಸಿ
ದೂರು ಸ್ವೀಕರಿಸಲಾಗಿದ್ದು, ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹಾರಾಷ್ಟ್ರ ಮುಖ್ಯಮಂತ್ರಿ ಮತ್ತು ಮುಂಬೈನಲ್ಲಿರುವ ಶಿವಸೇನ್ ಅಧ್ಯಕ್ಷ ಉದ್ಧವ್ ಠಾಕ್ರೆ ಅವರ ಖಾಸಗಿ ನಿವಾಸ ಮಾತೋಶ್ರೀ ಹೊರಗೆ ಹನುಮಾನ್ ಚಾಲೀಸಾ ಪಠಿಸುವುದಾಗಿ ನವನೀತ್ ರಾಣಾ ಮತ್ತು ಅವರ ಶಾಸಕ ಪತಿ ರವಿ ರಾಣಾ ಕಳೆದ ತಿಂಗಳು ಘೋಷಿಸಿದ್ದರು.