ಸಹಾರಾ ಗ್ರೂಪ್ ಸಂಬಂಧಿತ 9 ಕಂಪನಿಗಳ ಮೇಲೆ SFIO ತನಿಖೆ ತಡೆಹಿಡಿಯುವ ಹೈಕೋರ್ಟ್ ಆದೇಶ ರದ್ದುಗೊಳಿಸಿದ 'ಸುಪ್ರೀಂ'
ಸಹಾರಾ ಸಮೂಹಕ್ಕೆ ಸಂಬಂಧಿಸಿದ ಒಂಬತ್ತು ಕಂಪನಿಗಳ ಮೇಲೆ ಗಂಭೀರ ಆರ್ಥಿಕ ಅಪರಾಧಗಳ ತನಿಖಾ ಸಂಸ್ಥೆ(ಎಸ್ಎಫ್ಐಒ) ತನಿಖೆಗೆ ತಡೆಯಾಜ್ಞೆ ನೀಡಿದ್ದ ದೆಹಲಿ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ.
Published: 26th May 2022 03:39 PM | Last Updated: 26th May 2022 06:24 PM | A+A A-

ಸುಬ್ರತಾ ರಾಯ್
ನವದೆಹಲಿ: ಸಹಾರಾ ಸಮೂಹಕ್ಕೆ ಸಂಬಂಧಿಸಿದ ಒಂಬತ್ತು ಕಂಪನಿಗಳ ಮೇಲೆ ಗಂಭೀರ ಆರ್ಥಿಕ ಅಪರಾಧಗಳ ತನಿಖಾ ಸಂಸ್ಥೆ(ಎಸ್ಎಫ್ಐಒ) ತನಿಖೆಗೆ ತಡೆಯಾಜ್ಞೆ ನೀಡಿದ್ದ ದೆಹಲಿ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ.
ಹೈಕೋರ್ಟ್ ಆದೇಶದ ವಿರುದ್ಧ ಎಸ್ಎಫ್ಐಒ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್ ಮತ್ತು ಬೇಲಾ ಎಂ ತ್ರಿವೇದಿ ಅವರ ರಜಾಕಾಲದ ಪೀಠವು ಅಂಗೀಕರಿಸಿತು.
ಈ ವಿಚಾರದಲ್ಲಿ ಉಚ್ಚ ನ್ಯಾಯಾಲಯವು ತನಿಖೆಗೆ ತಡೆ ನೀಡಿರುವುದು ಸಮರ್ಥನೀಯವಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಸಹಾರಾ ಗ್ರೂಪ್ ಮುಖ್ಯಸ್ಥರ ವಿರುದ್ಧ ದಬ್ಬಾಳಿಕೆಯ ಕ್ರಮಗಳು ಮತ್ತು ಲುಕ್ಔಟ್ ನೋಟಿಸ್ಗಳು ಸೇರಿದಂತೆ ಎಲ್ಲಾ ನಂತರದ ಕ್ರಮಗಳು ಮತ್ತು ಪ್ರಕ್ರಿಯೆಗಳಿಗೆ ತಡೆ ನೀಡಿ ದೆಹಲಿ ಹೈಕೋರ್ಟ್ 2021ರ ಡಿಸೆಂಬರ್ 13ರಂದು ನೀಡಿದ್ದ ಆದೇಶದ ವಿರುದ್ಧ ಎಸ್ಎಫ್ಐಒ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿತ್ತು.
ಸಹಾರಾ ಗ್ರೂಪ್ಗೆ ಸಂಬಂಧಿಸಿದ ಒಂಬತ್ತು ಕಂಪನಿಗಳ ತನಿಖೆಗಾಗಿ ಎಸ್ಎಫ್ಐಒನ ಎರಡು ಆದೇಶಗಳ ಕಾರ್ಯಾಚರಣೆ ಮತ್ತು ಅನುಷ್ಠಾನವನ್ನು ಹೈಕೋರ್ಟ್ ತಡೆಹಿಡಿದಿತ್ತು.