ಉತ್ತರ ಪ್ರದೇಶ ಸರ್ಕಾರದಿಂದ 6.15 ಲಕ್ಷ ಕೋಟಿ ರೂ. ಬಜೆಟ್ ಮಂಡನೆ; ಇದು 5 ವರ್ಷದ ವಿಷನ್ ಎಂದ ಸಿಎಂ ಯೋಗಿ
ಯೋಗಿ ಆದಿತ್ಯನಾಥ್ ಸರ್ಕಾರದ ಎರಡನೇ ಅವಧಿಯ ಮೊದಲ ಬಜೆಟ್ ಅನ್ನು ಗುರುವಾರ ವಿಧಾನಸಭೆಯಲ್ಲಿ ಉತ್ತರ ಪ್ರದೇಶದ ಹಣಕಾಸು ಸಚಿವ ಸುರೇಶ್ ಖನ್ನಾ ಅವರು ಮಂಡಿಸಿದರು. 2022-23ನೇ ಹಣಕಾಸು ವರ್ಷಕ್ಕೆ 6.15 ಲಕ್ಷ ಕೋಟಿ...
Published: 26th May 2022 04:45 PM | Last Updated: 26th May 2022 04:45 PM | A+A A-

ಯೋಗಿ ಆದಿತ್ಯನಾಥ್
ಲಖನೌ: ಯೋಗಿ ಆದಿತ್ಯನಾಥ್ ಸರ್ಕಾರದ ಎರಡನೇ ಅವಧಿಯ ಮೊದಲ ಬಜೆಟ್ ಅನ್ನು ಗುರುವಾರ ವಿಧಾನಸಭೆಯಲ್ಲಿ ಉತ್ತರ ಪ್ರದೇಶದ ಹಣಕಾಸು ಸಚಿವ ಸುರೇಶ್ ಖನ್ನಾ ಅವರು ಮಂಡಿಸಿದರು. 2022-23ನೇ ಹಣಕಾಸು ವರ್ಷಕ್ಕೆ 6.15 ಲಕ್ಷ ಕೋಟಿ ರೂಪಾಯಿಗಳ ಅಂದಾಜು ವೆಚ್ಚದ ನಿಬಂಧನೆಯನ್ನು ಪ್ರಸ್ತಾಪಿಸಿದರು.
ಈ ಬಜೆಟ್ ಪ್ರಸ್ತಾವನೆಯು ರಾಜ್ಯದ ಇತಿಹಾಸದಲ್ಲಿಯೇ ಅತ್ಯಂತ ದೊಡ್ಡ ಬಜೆಟ್ ಪ್ರಸ್ತಾವನೆಯಾಗಿದೆ ಎಂದು ಉತ್ತರ ಪ್ರದೇಶ ಸರ್ಕಾರ ಹೇಳಿಕೊಂಡಿದೆ.
ಇದನ್ನು ಓದಿ: ನಮ್ಮ ಸರ್ಕಾರ ಬಂದ ಮೇಲೆ ರಸ್ತೆಗಳಲ್ಲಿ ನಮಾಜ್ ಮಾಡುವುದು ನಿಂತಿದೆ: ಯುಪಿ ಸಿಎಂ ಯೋಗಿ ಆದಿತ್ಯನಾಥ್
ಖನ್ನಾ ಅವರು ಮಂಡಿಸಿದ ಮೊದಲ ‘ಪೇಪರ್ಲೆಸ್ ಬಜೆಟ್’ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು, ಇದು ಸ್ವಾವಲಂಬಿ ಉತ್ತರ ಪ್ರದೇಶಕ್ಕೆ ಸಂತೋಷದ ಬಾಗಿಲು ಎಂದು ಬಣ್ಣಿಸಿದ್ದಾರೆ.
ಬಜೆಟ್ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಯೋಗಿ, “ಹಣಕಾಸು ಸಚಿವ ಸುರೇಶ್ ಖನ್ನಾ ಜೀ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. 2022-2023ನೇ ಸಾಲಿನ ಈ ಬಜೆಟ್ ರಾಜ್ಯದ ಜನತೆಗೆ ಸಂತಸದ ಬಾಗಿಲು ಎಂದು ಸಾಬೀತುಪಡಿಸಲಿದೆ. ಈ ಬಜೆಟ್ ಜನರ ಆಶೋತ್ತರಗಳನ್ನು ಪೂರೈಸಲಿದೆ ಮತ್ತು ಇದು ಮುಂದಿನ ಐದು ವರ್ಷಗಳ ವಿಷನ್” ಎಂದು ಹೇಳಿದರು.
ಇದಕ್ಕೂ ಮುನ್ನ ವಿಧಾನಮಂಡಲದ ಉಭಯ ಸದನಗಳಲ್ಲಿ ಬಜೆಟ್ ಮಂಡಿಸಿದ ಖನ್ನಾ ಅವರು, ಯುಪಿ ಸರ್ಕಾರದ ಬಜೆಟ್ನಲ್ಲಿ ವೃದ್ಧಾಪ್ಯ ವೇತನ ಯೋಜನೆಗೆ 7,053.56 ಕೋಟಿ ಮತ್ತು ನಿರ್ಗತಿಕ ಮಹಿಳಾ ಪಿಂಚಣಿ ಯೋಜನೆಗೆ 4,032 ಕೋಟಿ ರೂ. ಇದಲ್ಲದೇ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ‘ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್’ಗೆ 10,547.42 ಕೋಟಿ ರೂ. ಮತ್ತು ‘ಮುಖ್ಯಮಂತ್ರಿ ಸಾಮೂಹಿಕ ವಿವಾಹ ಯೋಜನೆ’ಗೆ 600 ಕೋಟಿ ರೂ.ಗಳನ್ನು ನೀಡುವುದಾಗಿ ಹೇಳಿದರು.