500 ಪ್ರಕರಣಗಳಲ್ಲಿ ಬೇಕಾಗಿದ್ದ ಮಾವೋವಾದಿ ಸಂಘಟನೆಯ ಅಗ್ರಗಣ್ಯ ನಾಯಕ ಬಿಹಾರದ ಗಯಾದಲ್ಲಿ ಶವವಾಗಿ ಪತ್ತೆ!
ಹಲವು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ, ಮಾವೋವಾದಿ ಸಂಘಟನೆಯ ಅಗ್ರಗಣ್ಯ ನಾಯಕ ಸಂದೀಪ್ ಯಾದವ್ ಅಲಿಯಾಸ್ ವಿಜಯ್ ಯಾದವ್ (55) ಬಿಹಾರದ ಗಯಾ ಜಿಲ್ಲೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
Published: 26th May 2022 01:02 PM | Last Updated: 26th May 2022 01:02 PM | A+A A-

ಮಾವೋವಾದಿಗಳು
ಗಯಾ: ಹಲವು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ, ಮಾವೋವಾದಿ ಸಂಘಟನೆಯ ಅಗ್ರಗಣ್ಯ ನಾಯಕ ಸಂದೀಪ್ ಯಾದವ್ ಅಲಿಯಾಸ್ ವಿಜಯ್ ಯಾದವ್ (55) ಬಿಹಾರದ ಗಯಾ ಜಿಲ್ಲೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಬಿಹಾರ, ಜಾರ್ಖಂಡ್, ಚತ್ತೀಸ್ ಗಢ, ಪಶ್ಚಿಮ ಬಂಗಾಳ, ಆಂಧ್ರ ಪ್ರದೇಶ, ಜಾರ್ಖಂಡ್ ಸೇರಿದಂತೆ 6 ರಾಜ್ಯಗಳಲ್ಲಿ 500 ಪ್ರಕರಣಗಳಲ್ಲಿ ಬೇಕಾಗಿದ್ದ ಮಾವೋವಾದಿ ಸಂಘಟನೆಯ ನಾಯಕನ ಶವ ಅನುಮಾನಾಸ್ಪದವಾಗಿ ಪತ್ತೆಯಾಗಿದೆ. ಆತನ ಮೇಲೆ 84 ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿತ್ತು.
ಪೊಲೀಸರು ಯಾದವ್ ಸಾವನ್ನು ದೃಢಪಡಿಸಿದ್ದು, ಬಬುರಾಮ್ ದಿಹ್ ಗ್ರಾಮದಲ್ಲಿ ಶವ ಪತ್ತೆಯಾಗಿದೆ. ಈ ಪ್ರದೇಶದಲ್ಲಿ ನಕ್ಸಲರ ಪ್ರಭಾವ ಹೆಚ್ಚಾಗಿದೆ. ಮಾವೋವಾದಿಗಳ ನಾಯಕನ ಪುತ್ರ ಸೋನು ಕುಮಾರ್ ತಂದೆಯ ಶವವನ್ನು ಗುರುತಿಸಿದ್ದಾರೆ.
ಮೃತದೇಹವನ್ನು ಅಟಾಪ್ಸಿಗೆ ಕಳುಹಿಸಲಾಗಿದೆ ಎಂದು ಗಯಾ ಎಸ್ಎಸ್ ಪಿ ಹೇಳಿದ್ದು, ಮರಣೋತ್ತರ ಪರೀಕ್ಷೆ ವರದಿಯ ಮೂಲಕ ಸಾವಿನ ಕಾರಣ ತಿಳಿದುಬರಲಿದೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.